ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಟ್ಟು ತಬಾಹಿಯ 8 ತಿಂಗಳ ಶ್ರಮ ನೀರಿನಲ್ಲಿ ಹೋಮ; ಅಜ್ನಾರ್ ನದಿಯಲ್ಲಿ ಮತ್ತೆ ಕಸದ ರಾಶಿ!

Viral News: ಎಂಟು ತಿಂಗಳ ಕಾಲ ಶ್ರಮಪಟ್ಟು ಸ್ವಚ್ಛಗೊಳಿಸಿದ ನಂತರವೂ, ಮಧ್ಯಪ್ರದೇಶದ ಅಜ್ನಾರ್ ನದಿ ಮತ್ತೆ ಕಸದಿಂದ ತುಂಬಿರು ವುದನ್ನು ನೋಡಿ ಬಿಟ್ಟು ತಬಾಹಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಪರಿಸರ ಪ್ರೇಮಿಗಳಲ್ಲಿ ಆಕ್ರೋಶವನ್ನು ಉಂಟುಮಾಡಿದ್ದು, ನಾಗರಿಕ ಜವಾಬ್ದಾರಿಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಅಜ್ನಾರ್ ನದಿಯಲ್ಲಿ ಮತ್ತೆ ಕಸದ ರಾಶಿ- ವಿಡಿಯೊ ಮೂಲಕ ಬೇಸರ ಹೊರಹಾಕಿರ ಬಿಟ್ಟು ತಬಾಹಿ

ನವದೆಹಲಿ,ಅ.15: ತ್ಯಾಜ್ಯ ನಿರ್ವಹಣೆ ಬಗ್ಗೆ ಸರಕಾರ ಎಷ್ಟೇ ಅರಿವು ಮೂಡಿಸಿದರೂ ನಮ್ಮ ಸ್ವಂತ ಜವಾಬ್ದಾರಿಯನ್ನು ಮರೆತುಬಿಟ್ಟಿದ್ದೇವೆ. ನಮ್ಮಲ್ಲಿ ನಾಗರಿಕ ಪ್ರಜ್ಞೆ ಕೊರೆತು ಇದ್ದರೂ ಸರಕಾರಕ್ಕೆ ದೂರುತ್ತೇವೆ. ಇದಕ್ಕೆ ಸಾಕ್ಷಿ ಎನ್ನುವಂತೆ ನೀವು ಪರಿಸರ ಕಾಳಜಿ ವಹಿಸುವ ಬಿಟ್ಟು ತಬಾಹಿ ಬಗ್ಗೆ ಕೇಳಿರಬಹುದು. ವಿವಿಧ ನಗರಗಳಲ್ಲಿ ಸ್ವಚ್ಚತಾ ಕಾರ್ಯ ಆರಂಭಿಸಿ ಪರಿಸರ ಕಾಳಜಿಗೆ ಒತ್ತು ನೀಡಿದ್ದರು. ಅದರಲ್ಲೂ ಮಧ್ಯಪ್ರದೇಶದ ರಾಜಘರ್ ಜಿಲ್ಲೆಯಲ್ಲಿರುವ ಅಜ್ನಾರ್ ನದಿಯನ್ನು ಒಬ್ಬಂಟಿಯಾಗಿ ತನ್ನ ಕೈಯಿಂದಲೇ 8 ತಿಂಗಳು ಹಗಲಿರುಳು ಶ್ರಮಿಸಿ ಸ್ವಚ್ಛಗೊಳಿಸಿದ್ದರು. ಆದರೆ ಇಷ್ಟೆಲ್ಲ ಕಷ್ಟ ಪಟ್ಟಿದ್ದರೂ ಜನ ಕೆಲವೇ ವಾರಗಳಲ್ಲಿ ಮತ್ತೆ ಕಸದ ತೊಟ್ಟಿಯಾಗಿ ಮಾರ್ಪಡಿಸಿದ್ದಾರೆ. ಈ ಸ್ಥಿತಿ ಕಣ್ಣಾರೆ ಕಂಡು ಪರಿಸರ ಪ್ರೇಮಿ ಬಿಟ್ಟು ತಬಾಹಿ (Viral News) ಕಣ್ಣೀರಿಟ್ಟಿದ್ದಾರೆ.

ಎಂಟು ತಿಂಗಳ ಕಾಲ ಶ್ರಮಪಟ್ಟು ಸ್ವಚ್ಛಗೊಳಿಸಿದ ನಂತರವೂ, ಮಧ್ಯಪ್ರದೇಶದ ಅಜ್ನಾರ್ ನದಿ ಮತ್ತೆ ಕಸದಿಂದ ತುಂಬಿರುವುದನ್ನು ನೋಡಿ ಬಿಟ್ಟು ತಬಾಹಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಪರಿಸರ ಪ್ರೇಮಿಗಳಲ್ಲಿ ಆಕ್ರೋಶವನ್ನು ಉಂಟುಮಾಡಿದ್ದು, ನಾಗರಿಕ ಜವಾಬ್ದಾರಿಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ವಿಡಿಯೋ ನೋಡಿ:



ಪರಿಸರ ಕಾರ್ಯಕರ್ತ ಸುರೇಂದ್ರ ಸಿಂಗ್ ಚೌಧರಿ 'ಬಿಟ್ಟು ತಬಾಹಿ' ಎಂದೇ ಖ್ಯಾತರಾದ ಇವರ ಪರಿಸರ ಕಾಳಜಿಗೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.ಆದರೆ ಇದೀಗ ಎಂಟು ತಿಂಗಳ ಕಾಲ ಶ್ರಮಪಟ್ಟು ಸ್ವಚ್ಛಗೊಳಿಸಿದ ಕೆಲವೇ ವಾರಗಳಲ್ಲಿ, ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿರುವ ಅಜ್ನಾರ್ ನದಿಯಲ್ಕಿ ಮತ್ತೆ ಪ್ಲಾಸ್ಟಿಕ್ ಚೀಲಗಳು ಮತ್ತು ಇತರ ತ್ಯಾಜ್ಯಗಳಿಂದ ತುಂಬಿರುವುದನ್ನು ಪರಿಸರ ಕಾರ್ಯಕರ್ತರು ಕಂಡುಕೊಂಡಿದ್ದಾರೆ.

Viral News: ಅಪರಿಚಿತರ ಮೇಲೆಯೂ ಭಾರತೀಯರ ನಂಬಿಕೆ ಕಂಡು ಭಾವುಕನಾದೆ ಎಂದ ಅಮೆರಿಕದ ಲೇಖಕ ಸದಾನಂದ ಧೂಮೆ

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಬಿಟ್ಟು ತಬಾಹಿ, "ನನ್ನ 8 ತಿಂಗಳ ಕಷ್ಟ ಹೀಗೆ ಮಣ್ಣು ಪಾಲಾಗುತ್ತದೆ ಎಂದು ಊಹಿಸಿ ಇರಲಿಲ್ಲ ಎಂದು ತಮ್ಮ ಅಳಲು ತೋಡಿ ಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋವೊಂದರಲ್ಲಿ ನದಿಯ ಪ್ರಸ್ತುತ ಸ್ಥಿತಿಯನ್ನು ತೋರಿಸಿದ್ದಾರೆ. ನದಿಯ ದಡದಲ್ಲಿ ಕಸ ಬಿದ್ದಿರುವುದನ್ನು ಈ ದೃಶ್ಯಗಳು ತೋರಿಸುತ್ತವೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ನೆಟ್ಟಿಗರು ಚೌಧರಿ ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದು ನದಿಗಳನ್ನು ಮತ್ತೆ ಕಸದ ತೊಟ್ಟಿಯನ್ನಾಗಿ ಪರಿವರ್ತಿಸುವ ಜನರ 'ನಾಗರಿಕ ಪ್ರಜ್ಞೆಯ ಕೊರತೆ'ಯನ್ನು ಟೀಕಿಸಿ ದ್ದಾರೆ.ಇಷ್ಟೆಲ್ಲಾ ಅನ್ಯಾಯ ನಡೆದರೂ ಬಿಟ್ಟು ತಬಾಹಿ ಸುಮ್ಮನೆ ಬಿಟ್ಟಿಲ್ಲ. ಆ ವಿಡಿಯೋದಲ್ಲೇ ಮತ್ತೆ ನದಿಗಿಳಿದು ಕಸವನ್ನು ಹೊರತೆಗೆಯುವ ಕೆಲಸವನ್ನು ಅವರು ಪುನರಾರಂಭಿಸಿದ್ದಾರೆ

ಮಧ್ಯ ಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ಬಿಟ್ಟು ಈ ಸ್ವಚ್ಛತಾ ಕಾಯಕ ಆರಂಭಿಸಿದ್ದರು. 2026ರ ಜನವರಿ 26ರಂದು ಸ್ನೇಹಿತರೊಂದಿಗೆ ಅಜ್ನಾರ್ ನದಿಯನ್ನು ಸ್ವಚ್ಛಗೊಳಿಸಲು ಇಳಿದ ಅವರು, ಕಾಲ ಕ್ರಮೇಣ ಏಕಾಂಗಿಯಾಗಿಯೇ ಈ ಕಾರ್ಯ ಮುಂದುವರಿಸಿದ್ದಾರೆ.