ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಂದೂಕು ಹಿಡಿದು ಅಂಗಡಿ ಮಾಲಕನಿಂದ ಹಣ, ಮೊಬೈಲ್ ದೋಚಿದ ಕಳ್ಳ; ಬಾಲಕಿಯ ಮುಗ್ಧತೆಗೆ ಮನಸೋತು ಹಣೆಗೆ ಮುತ್ತಿಟ್ಟು ಹೋದ

ದರೋಡೆಕೋರನೊಬ್ಬ ಅಂಗಡಿಯ ಮಾಲೀಕನಿಗೆ ಗನ್ ತೋರಿಸಿ ಹಣ ಮತ್ತು ಮೊಬೈಲ್‌ ದೋಚಿದ್ದಾನೆ. ಇನ್ನು ಸ್ಥಳದಿಂದ ಪರಾರಿಯಾಗಬೇಕು ಎನ್ನುವಷ್ಟರಲ್ಲಿ ಅಲ್ಲೇ ಇದ್ದ ಪುಟ್ಟ ಬಾಲಕಿಯು ಕಳ್ಳನಿಗೆ ಲಾಲಿಪಪ್ ನೀಡಲು ಮುಂದಾಗಿದ್ದಾಳೆ. ಇದನ್ನು ನೋಡಿದ ಕಳ್ಳನ ಮನಸ್ಸು ಕರಗಿದ್ದು, ದೋಚಿದೆಲ್ಲವನ್ನೂ ಹಿಂದಿರುಗಿಸಿದ್ದಾನೆ.

ಬಂದೂಕು ಹಿಡಿದು ಅಂಗಡಿ ಮಾಲಕನಿಂದ ಹಣ ದೋಚಲು ಮುಂದಾದ ದರೋಡೆಕೋರ.

ಇಸ್ಲಾಮಾಬಾದ್: ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಅಚ್ಚರಿಯ ಘಟನೆಯೊಂದರ ವಿಡಿಯೊ ವೈರಲ್ ಆಗಿದ್ದು (Viral Video), ಭಯಾನಕ ದರೋಡೆ ಹೇಗೆ ಸಂಪೂರ್ಣವಾಗಿ ಅನಿರೀಕ್ಷಿತವಾಗಿ ಮಾರ್ಪಟ್ಟಿತು ಎಂಬುದನ್ನು ತೋರಿಸುತ್ತದೆ. ವಿಡಿಯೊದಲ್ಲಿ ಅಂಗಡಿ ಮಾಲೀಕ ತನ್ನ ಪುಟ್ಟ ಮಗಳೊಂದಿಗೆ ಕೌಂಟರ್ ಹಿಂದೆ ಕುಳಿತಿರುವುದು ಕಂಡುಬರುತ್ತದೆ. ಇದ್ದಕ್ಕಿದ್ದಂತೆ ಆಗುಂತಕನೊಬ್ಬ ಒಳಗೆ ಬಂದು, ಬಂದೂಕನ್ನು ತೋರಿಸಿ ಅಂಗಡಿಯವನ ಫೋನ್ ಕಿತ್ತುಕೊಂಡಿದ್ದಾನೆ. ಜತೆಗೆ ಹಣಕ್ಕೂ ಬೇಡಿಕೆ ಇಟ್ಟಿದ್ದಾನೆ. ಅಲ್ಲದೆ ಅಂಗಡಿಯಾತನ ತಲೆಗೆ ಹೊಡೆದಿದ್ದಾನೆ. ಆದರೆ ಮುಂದೆ ನಡೆದದ್ದೇನು ಎಂಬುದನ್ನು ನೋಡಿದರೆ ಖಂಡಿತಾ ನೀವು ಅಚ್ಚರಿಗೆ ಒಳಗಾಗುತ್ತೀರಿ. ಈ ಘಟನೆ ಪಾಕಿಸ್ತಾನದಲ್ಲಿ (Pakistan) ನಡೆದಿದೆ ಎಂದು ತಿಳಿದು ಬಂದಿದೆ.

ಅಂಗಡಿ ಮಾಲಕನಿಗೆ ಹೊಡೆದು ಕಳ್ಳನು ಹಣ ತೆಗೆದುಕೊಳ್ಳುತ್ತಿದ್ದಾಗ ಅಪಾಯದ ಅರಿವಿಲ್ಲದ ಪುಟ್ಟ ಬಾಲಕಿ ದಯೆಯಿಂದ ತನ್ನ ಲಾಲಿಪಾಪ್ ಅನ್ನು ದರೋಡೆಕೋರನಿಗೆ ನೀಡಿದ್ದಾಳೆ. ಇದು ಕಳ್ಳನ ಮನಸ್ಸನ್ನು ಬದಲಾಯಿಸಿದೆ. ಆತನಿಗೆ ಸಿಕ್ಕ ಮೊಬೈಲ್, ಹಣದೊಂದಿಗೆ ಓಡಿ ಹೋಗುವ ಬದಲು ಎಲ್ಲವನ್ನೂ ಅಂಗಡಿ ಮಾಲೀಕನಿಗೆ ಹಿಂದಿರುಗಿಸಿದ್ದಾನೆ.

Viral Video: ದರೋಡೆಕೋರರಿಗೇ ಚಳ್ಳೆಹಣ್ಣು ತಿನ್ನಿಸಿದ ಚಿನ್ನದ ಮಳಿಗೆ ಮಾಲೀಕ... ಈತನ ಧೈರ್ಯಕ್ಕೊಂದು ಸಲಾಂ! ವಿಡಿಯೊ ನೋಡಿ

ಕಳ್ಳನು ಒಂದು ಕ್ಷಣ ನಿಂತು, ಬಾಲಕಿಯ ಹಣೆಗೆ ಮುತ್ತಿಕ್ಕಿ ನಂತರ ಯಾರಿಗೂ ನೋವುಂಟು ಮಾಡದೆ ಅಂಗಡಿಯಿಂದ ಹೊರಟು ಹೋಗಿದ್ದಾನೆ. ಮಗುವಿನ ಮುಗ್ಧತೆಯು ಕಳ್ಳನ ಮನಸ್ಸನ್ನು ಹೇದೆ ಬದಲಾಯಿಸಿತು ಎಂಬುದನ್ನು ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ಅಚ್ಚರಿಗೆ ಒಳಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಭಾರಿ ವೈರಲ್ ಆಗಿದೆ. ಹೆಣ್ಣುಮಕ್ಕಳನ್ನು ಪಡೆದಿರುವವರು ನಿಜವಾಗಿಯೂ ದೇವರ ಆಶೀರ್ವಾದ. ಪುಟ್ಟ ಬಾಲಕಿಯ ಮುಗ್ಧತೆಯು ಅಪಾಯಕಾರಿ ಪರಿಸ್ಥಿತಿಯನ್ನು ಕರುಣೆಯಾಗಿ ಪರಿವರ್ತಿಸಿತು ಎಂದು ಶೀರ್ಷಿಕೆ ನೀಡಲಾಗಿದೆ.

ವಿಡಿಯೊ ವೀಕ್ಷಿಸಿ:



ಪಾಕಿಸ್ತಾನದಲ್ಲಿ ಹಗಲು ದರೋಡೆ ಸಾಮಾನ್ಯ. ಹೆಣ್ಣುಮಕ್ಕಳು ಯಾವಾಗಲೂ ಅದ್ಭುತ, ಮುದ್ದಾಗಿರುತ್ತಾರೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಎಂತಹ ಮುಗ್ಧ ಮತ್ತು ಶುದ್ಧ ಆತ್ಮ ಎಂದು ಮತ್ತೊಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೊ ಮಗುವಿನ ಮುಗ್ಧತೆಯನ್ನು ತೋರಿಸಿದರೂ, ಹಲವರಿಗೆ ಅದರ ಸತ್ಯಾಸತ್ಯತೆಯ ಬಗ್ಗೆ ಸಂಪೂರ್ಣವಾಗಿ ಮನವರಿಕೆಯಾಗಲಿಲ್ಲ. ಕೆಲವರು ಇದನ್ನು ಸ್ಕ್ರಿಪ್ಟೆಟ್ ಎಂದು ಹೇಳಿದ್ದಾರೆ.

ಇದು ಕೇವಲ ನಟನಾ ವಿಡಿಯೊ. ಕಳ್ಳ ಆ ವ್ಯಕ್ತಿಯ ಮೇಲೆ ದಾಳಿ ಮಾಡಿಲ್ಲ, ಅವನನ್ನು ಮುಟ್ಟಲೂ ಇಲ್ಲ. ಇಬ್ಬರೂ ನಟಿಸುತ್ತಿದ್ದಾರೆ. ಎಲ್ಲವನ್ನೂ ಕುರುಡಾಗಿ ನಂಬುವ ಮೊದಲು ಹತ್ತಿರದಿಂದ ನೋಡಿ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ಅವನು ಬಲವಾಗಿ ಹೊಡೆದಿದ್ದರೆ, ಈ ವಿಡಿಯೊವನ್ನು ನಿಜವೆಂದು ನಂಬುತ್ತಿದ್ದೆ ಎಂದು ಮತ್ತೊಬ್ಬರು ಉಲ್ಲೇಖಿಸಿದ್ದಾರೆ.

ಸ್ವಿಗ್ಗಿ ಡೆಲಿವರಿ ಬಾಯ್ ತನ್ನ ಮಗಳಿಗೆ ಪಾಠ ಹೇಳಿಕೊಡುವ ವಿಡಿಯೊ ವೈರಲ್

ತಂದೆ-ಮಗಳ ಸಿಹಿ ಕ್ಷಣವನ್ನು ತೋರಿಸುವ ಮತ್ತೊಂದು ವಿಡಿಯೊ ಇತ್ತೀಚೆಗೆ ವೈರಲ್ ಆಗಿದೆ. ವಿಡಿಯೊದಲ್ಲಿ ಸ್ವಿಗ್ಗಿ ಟಿ ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು (ಬಹುಶಃ ಡೆಲಿವರಿ ಬಾಯ್) ವಸತಿ ಕಟ್ಟಡದಲ್ಲಿ ಲಿಫ್ಟ್ ಬಳಿ ಕುಳಿತಿರುವುದನ್ನು ಕಾಣಬಹುದು. ಅವರ ಚಿಕ್ಕ ಮಗಳು ಅವರ ಪಕ್ಕದಲ್ಲಿ ಕುಳಿತಿದ್ದಾಳೆ. ತಂದೆ ತನ್ನ ಪುಟ್ಟ ಪೋರಿಯ ಅಧ್ಯಯನಕ್ಕೆ ಸಹಾಯ ಮಾಡಿದ್ದಾರೆ.

ವಿಡಿಯೊ ವೀಕ್ಷಿಸಿ:



ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅತ್ಯುತ್ತಮ ಸ್ವಿಗ್ಗಿ ಅಪ್ಪನನ್ನು ಭೇಟಿ ಮಾಡಿ. ಈ ಅಪ್ಪನ ಪ್ರೀತಿ ಕೇವಲ ಮೌನವಲ್ಲ, ಅದು ಹೆಮ್ಮೆಯಿಂದ ಕೂಡಿದೆ ಎಂದು ಶೀರ್ಷಿಕೆ ನೀಡಲಾಗಿದೆ. ತನ್ನ ಪುಟ್ಟ ಮಗುವನ್ನು ಹೆಗಲ ಮೇಲೆ ಹೊತ್ತುಕೊಂಡು, ಆಕೆ ಬೆಳೆಯುತ್ತಲೇ ಅವಳಿಗೆ ಪಾಠ ಹೇಳಿಕೊಡುವ ಮೂಲಕ, ತಂದೆಯು ನಿಜವಾಗಿಯೂ ಶಕ್ತಿಯ ಪ್ರತಿರೂಪವಾಗಿದ್ದಾರೆ. ಅವರ ಪ್ರಕಾಶಮಾನವಾದ ನಗು ಮತ್ತು ಎಂದಿಗೂ ಬಿಟ್ಟುಕೊಡದ ಮನೋಭಾವವು ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ತಂದೆಯಂದಿರು ತಮ್ಮ ಮಕ್ಕಳ ಜೀವನದಲ್ಲಿ ಬೆಂಬಲವಾಗಿ ನಿಲ್ಲುತ್ತಾರೆ. ಅವರು ಯಾವಾಗಲೂ ತಮ್ಮ ಭಾವನೆಗಳನ್ನು ಬಹಿರಂಗವಾಗಿ ತೋರಿಸದಿರಬಹುದು. ಆದರೆ ಅವರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನೀಡಲು ಸದ್ದಿಲ್ಲದೆ ಎಲ್ಲ ತ್ಯಾಗವನ್ನೂ ಮಾಡುತ್ತಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.