Viral Video: ಪೆಟ್ ಲವ್ವರ್ಸ್ ನೋಡಲೇಬೇಕು ಈ ವಿಡಿಯೊ! ಶ್ವಾನದ ಜೊತೆ ಟ್ರಾವೆಲ್ ಮಾಡೋರಿಗೆ ಇಲ್ಲಿದೆ ಕ್ರಿಯೇಟಿವ್ ಹ್ಯಾಕ್
A creative hack made for a pet dog: ಸಾಕು ನಾಯಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ವೇಳೆ ಅದರ ಆರಾಮಕ್ಕಾಗಿ ಕುಟುಂಬವೊಂದು ಬಳಸಿದ ಕ್ರಿಯೇಟಿವ್ ಹ್ಯಾಕ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾಯಿಗೆ ಪ್ರಯಾಣದ ಅನುಭವವನ್ನು ಸುಲಭಗೊಳಿಸಿದ ಈ ಸರಳ, ಆದರೆ ಬುದ್ಧಿವಂತ ಐಡಿಯಾ ನೆಟ್ಟಿಗರ ಮನಸೂರೆಗೊಂಡಿದೆ.
ಮುದ್ದಿನ ಶ್ವಾನಕ್ಕಾಗಿ ಮಾಡಿರುವ ಕ್ರಿಯೇಟಿವ್ ಹ್ಯಾಕ್ -
ನವದೆಹಲಿ: ಮನೆಯಲ್ಲಿ ಸಾಕುನಾಯಿಯನ್ನು (pet dog) ಸಾಕುತ್ತಿರುವವರು ಅದನ್ನು ತಮ್ಮ ಕುಟುಂಬದಂತೆ ನೋಡಿಕೊಳ್ಳುತ್ತಾರೆ. ಮನೆ ಮಕ್ಕಳನ್ನು ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೋ, ಅಷ್ಟೇ ಪ್ರೀತಿ, ಕಾಳಜಿಯನ್ನು ಈ ಸಾಕುಪ್ರಾಣಿಗಳ ಮೇಲೆ ತೋರಿಸುತ್ತಾರೆ. ಇದೀಗ ಭಾರತೀಯ ಕುಟುಂಬವೊಂದು ತಮ್ಮ ಮುದ್ದು ಶ್ವಾನವು ಕಾರಿನಲ್ಲಿ ಆರಾಮವಾಗಿ ಪ್ರಯಾಣಿಸಲು ಒಂದು ಸೃಜನಶೀಲ ಪರಿಹಾರವನ್ನು ಕಂಡುಕೊಂಡಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊವು ಕಾರಿನ ಹಿಂಭಾಗದ ಕಿಟಕಿಗಳಿಗೆ ಜೋಡಿಸಲಾದ ಹ್ಯಾಮಕ್ ಅನ್ನು ತೋರಿಸುತ್ತದೆ. ಇದು ಸವಾರಿಯ ಸಮಯದಲ್ಲಿ ತಮ್ಮ ಸಾಕುಪ್ರಾಣಿ ವಿಶ್ರಾಂತಿ ಪಡೆಯಲು ಆರಾಮದಾಯಕ ಸ್ಥಳವನ್ನು ಸೃಷ್ಟಿಸುತ್ತದೆ. ವಿಡಿಯೊದ ಶೀರ್ಷಿಕೆಯು ಜಸ್ಟ್ ಇಂಡಿಯನ್ ಥಿಂಗ್ಸ್ ಎಂದು ನೀಡಲಾಗಿದ್ದು, ಕಂದು ಕುಟುಂಬದಲ್ಲಿ ಡಾಗೇಶ್ ಎಂಬ ಪಠ್ಯವನ್ನು ವಿಡಿಯೊದಲ್ಲಿ ಸೇರಿಸಲಾಗಿದೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, 467,000 ಕ್ಕೂ ಹೆಚ್ಚು ಲೈಕ್‌ಗಳು ಮತ್ತು ನೂರಾರು ಕಾಮೆಂಟ್‌ಗಳನ್ನು ಗಳಿಸಿದೆ. ಆ ಹ್ಯಾಮಕ್ ಅನ್ನು ಮಾಡಿದ್ದಕ್ಕಾಗಿ ಮತ್ತು ವಾಹನದ ಶುಚಿತ್ವಕ್ಕೆ ಧಕ್ಕೆಯಾಗದಂತೆ ಸಾಕುಪ್ರಾಣಿ ಕಾರು ಸವಾರಿಯನ್ನು ಆನಂದಿಸುವಂತೆ ಮಾಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರು ಕುಟುಂಬವನ್ನು ಶ್ಲಾಘಿಸಿದ್ದಾರೆ.
ವೈರಲಾಗುತ್ತಿರುವ ಶ್ವಾನದ ವಿಡಿಯೊ ಇಲ್ಲಿದೆ
ಇದನ್ನೂ ಓದಿ: ಮದುವೆ ಮಂಟಪದಲ್ಲಿ ವರನಿಗೆ ಚೂರಿ ಇರಿತ; ದಾಳಿಕೋರರನ್ನು 2 ಕಿ.ಮೀ. ಬೆನ್ನಟ್ಟಿದ ಡ್ರೋನ್ ಕ್ಯಾಮರ
ಅವರು ತಮ್ಮ ಅತ್ಯುತ್ತಮ ಜೀವನವನ್ನು ನಡೆಸುತ್ತಿದ್ದಾರೆ ಎಂದು ಒಬ್ಬ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ಬರೆದಿದ್ದಾರೆ. ನಾನು ಏಕೆ ಅಡ್ಜಸ್ಟ್ ಮಾಡಬೇಕು? ನಾನು ತಾನೇ ಡಾಗೇಶ್ ಅಣ್ಣ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಪ್ರತಿಯೊಂದು ನಾಯಿಯನ್ನು ಹೀಗೆ ನಡೆಸಿಕೊಳ್ಳಬೇಕು ಎಂದು ಮಗದೊಬ್ಬ ಬಳಕೆದಾರರು ಹೇಳಿದ್ದಾರೆ.
ಇತ್ತೀಚೆಗೆ, ಫ್ಲೋರಿಡಾದ ನಾಯಿಯೊಂದರ ನಿಷ್ಠೆಯು ನಾಯಿಗಳ ಅತ್ಯಂತ ಪ್ರಸಿದ್ಧ ಲಕ್ಷಣಗಳಲ್ಲಿ ಒಂದಾಗಿದೆ ಎಂಬುದನ್ನು ಸಾಬೀತುಪಡಿಸಿತು. ಡೆಸ್ಟಿನ್‌ನಲ್ಲಿ ಕಾಣೆಯಾದ ತನ್ನ 86 ವರ್ಷದ ಅಜ್ಜಿಯನ್ನು ಹುಡುಕಲು ಪೊಲೀಸ್ ಸಿಬ್ಬಂದಿಯನ್ನು ಜೊತೆಗೆ ಕರೆದೊಯ್ಯುತ್ತಿರುವ ಈಯೋರ್ ಎಂಬ ನಿಷ್ಠಾವಂತ ನಾಯಿಯ ಹೃದಯಸ್ಪರ್ಶಿ ವಿಡಿಯೊ ವೈರಲ್ ಆಗಿತ್ತು.
ಸೆಪ್ಟೆಂಬರ್ 25 ರಂದು ರಾತ್ರಿ ನಡೆದುಕೊಂಡು ಹೋಗುತ್ತಿದ್ದಾಗ ವೃದ್ಧ ಮಹಿಳೆ ಬಿದ್ದು ಗಾಯಗೊಂಡಿದ್ದರು. ಅವರು ಮನೆಗೆ ಹಿಂತಿರುಗದ ಕಾರಣ ಅವರ ಪತಿಯು ತನ್ನ ಪತ್ನಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಪೊಲೀಸರು ಪೋಸ್ಟ್ ಮಾಡಿದ ವಿಡಿಯೊದಲ್ಲಿ, ಈಯೋರ್ ಮಿಲ್ಲರ್‌ನನ್ನು ಮುಂಭಾಗದ ಅಂಗಳಕ್ಕೆ ಮತ್ತು ಗಾಲ್ಫ್ ಕೋರ್ಸ್‌ಗೆ ಹೇಗೆ ಕರೆದೊಯ್ದಿತು ಎಂಬುದನ್ನು ತೋರಿಸಲಾಗಿದೆ. ಮಹಿಳೆಯು ಗಾಯಗೊಂಡು ಪಾದಚಾರಿ ಮಾರ್ಗದಲ್ಲಿ ಮಲಗಿದ್ದಳು. ಆದರೆ ಅವಳು ಪ್ರಜ್ಞೆ ಹೊಂದಿದ್ದಳು.
ಹೀಗೆ ಸ್ವಾಮಿನಿಷ್ಠೆ ಹೊಂದಿರುವ ನಾಯಿಯ ಹಲವಾರು ವಿಡಿಯೊಗಳು ವೈರಲ್ ಆಗಿವೆ. ಅದರಲ್ಲಿ ಇತ್ತೀಚೆಗೆ ದೆಹಲಿಯಲ್ಲಿ ಮನೆಮುಂದೆ ನಡೆದುಕೊಂಡು ಹೋಗುತ್ತಿದ್ದ ಮಕ್ಕಳನ್ನು ಬೀದಿನಾಯಿಗಳ ಗುಂಪೊಂದು ಅಟ್ಟಾಡಿಸಿತ್ತು. ಇದನ್ನು ನೋಡಿದ ಕಾಂಪೌಂಡ್ ಒಳಗಿದ್ದ ಸಾಕುನಾಯಿಯು ಹೊರಗೆ ಹಾರಿ ಮಕ್ಕಳನ್ನು ಬೀದಿನಾಯಿಗಳ ದಾಳಿಯಿಂದ ರಕ್ಷಿಸಿತ್ತು. ಇದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು.