ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಟೋ ಓಡಿಸುತ್ತಲೇ ರೀಲ್ಸ್‌ ನೋಡುವುದರಲ್ಲಿ ಚಾಲಕ ಬ್ಯುಸಿ; ಮನವಿಗೂ ಕ್ಯಾರೇ ಇಲ್ಲ: ಬೆಂಗಳೂರಿನಲ್ಲಾದ ಭಯಾನಕ ಅನುಭವ ಬಿಚ್ಚಿಟ್ಟ ಯುವತಿ

Viral Video: ಬೆಂಗಳೂರಿನ ಬ್ಯುಸಿ ಟ್ರಾಫಿಕ್ ನಡುವೆ ಆಟೋ ಚಾಲಕನೊಬ್ಬ ಮೊಬೈಲ್‌ನಲ್ಲಿ ವಿಡಿಯೊ ನೋಡುತ್ತ ಸಾಗುತ್ತಿದ್ದ ಘಟನೆವೊಂದು ಕಂಡು ಬಂದಿದೆ. ಚಾಲಕ ರಸ್ತೆ ಮೇಲೆ ಗಮನ ಕೇಂದ್ರೀಕರಿಸುವ ಬದಲು ಮೊಬೈಲ್‌ನಲ್ಲಿ ಸ್ಕ್ರಾಲ್‌ ಮಾಡುವುದರಲ್ಲಿ ಮಗ್ನನಾಗಿದ್ದ ಬಗ್ಗೆ ಯುವತಿಯೊಬ್ಬಳು ವಿಡಿಯೊ ಮಾಡಿದ್ದಾಳೆ.

ಆಟೋ ಚಲಾಯಿಸುತ್ತಲೇ ಮೊಬೈಲ್‌ ನೋಡಿದ ಚಾಲಕ

ಬೆಂಗಳೂರು, ಮಾ. 26: ಬೆಂಗಳೂರಿನ ಟ್ರಾಫಿಕ್ ದಟ್ಟಣೆ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಇದು ವಾಹನ ಸವಾರರಿಗೆ, ಪ್ರಯಾಣಿಕರಿಗೆ ತೀವ್ರ ಕಿರಿಕಿರಿ ಉಂಟು ಮಾಡುತ್ತದೆ. ಇದೀಗ ಈ ಟ್ರಾಫಿಕ್ ನಡುವೆ ಆಟೋ ಚಾಲಕನೊಬ್ಬ ಮೊಬೈಲ್‌ನಲ್ಲಿ ವಿಡಿಯೊ ನೋಡುತ್ತ ಸಾಗುತ್ತಿದ್ದ ಘಟನೆ ಕಂಡು ಬಂದಿದೆ. ಚಾಲಕ ಟ್ರಾಫಿಕ್ ಮೇಲೆ ಗಮನ ಕೇಂದ್ರೀಕರಿಸುವ ಬದಲು ವಿಡಿಯೊಗಳನ್ನು ಸ್ಕ್ರಾಲ್‌ ಮಾಡುವುದರಲ್ಲಿ ಮಗ್ನನಾಗಿದ್ದ ಬಗ್ಗೆ ಯುವತಿಯೊಬ್ಬಳು ವಿಡಿಯೊ (Viral News) ಮಾಡಿದ್ದಾಳೆ.

ಆಕಾಂಕ್ಷಾ ಎಂಬ ಬಳಕೆದಾರರು ತಮ್ಮ ಅನುಭವವನ್ನು ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ. ಚಾಲಕನು ರಿಕ್ಷಾ ಚಾಲನೆ ಮಾಡುವಾಗ ರಸ್ತೆಯ ಕಡೆಗೆ ಗಮನ ನೀಡುವ ಬದಲು ಮೊಬೈಲ್‌ ನೋಡುವುದರಲ್ಲೇ ಮುಳುಗಿದ್ದಾನೆ. ಫೋನ್‌ನಲ್ಲಿ ರೀಲ್ಸ್ ಸ್ಕ್ರಾಲ್‌ ಮಾಡುವುದರಲ್ಲಿ ಆತ ಬ್ಯುಸಿಯಾಗಿದ್ದಾನೆ‌. ಈ ಬಗ್ಗೆ ಯುವತಿ ಆಕ್ಷೇಪ ವ್ಯಕ್ತಪಡಿಸಿದರೂ ಚಾಲಕ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ.

ವಿಡಿಯೊ ನೋಡಿ:



ಆಟೋ ಚಲಿಸುತ್ತಿದ್ದರೂ, ಇದ್ದಕ್ಕಿದ್ದಂತೆ ರಿವರ್ಸ್ ಬಂದರೂ ಚಾಲಕ ಮೊಬೈಲ್ ನೋಡುವುದರಲ್ಲಿ ಬ್ಯುಸಿಯಾಗಿದ್ದಾನೆ. ಆಕಾಂಕ್ಷಾ ಜೋರಾಗಿ ಕೂಗಿದ ನಂತರವಷ್ಟೇ ಆತ ಬ್ರೇಕ್ ಹಾಕಿದ್ದಾನೆ. ಇದರಿಂದ ದೊಡ್ಡ ಅಘಾತ ತಪ್ಪಿದೆ. ಘಟನೆಯಿಂದ ಆಘಾತಕ್ಕೊಳಗಾದ ಯುವತಿ ಚಾಲನೆ ಮಾಡುವಾಗ ಫೋನ್ ಬಳಸುವುದನ್ನು ನಿಲ್ಲಿಸುವಂತೆ ಚಾಲಕನನ್ನು ವಿನಂತಿಸಿದರು. ಅವನು ಸ್ವಲ್ಪ ಸಮಯ ಒಪ್ಪಿಕೊಂಡರೂ ಮತ್ತೆ ನೋಡಲು ಪ್ರಾರಂಭಿಸಿದ್ದಾನೆ.

ಮನುಷ್ಯರಿಗೆ ಮಾತ್ರ ಅಲ್ಲ, ಈಗ ಹುಲಿಗಳಿಗೂ 'ಇಂಟರ್ಮಿಟೆಂಟ್ ಫಾಸ್ಟಿಂಗ್'!

ಇದು ಅವರ ಕಳವಳವನ್ನು ಮತ್ತಷ್ಟು ಹೆಚ್ಚಿಸಿತು. ಈ ವರ್ತನೆಯನ್ನು ವಿಡಿಯೊ ಮಾಡಲು ಮುಂದಾದಾಗ, ಚಾಲಕ ಅದನ್ನು ತಡೆಯಲು ಯತ್ನಿಸಿದ್ದಾನೆ. ಈ ಪೋಸ್ಟ್ ತ್ವರಿತವಾಗಿ ವೈರಲ್ ಆಗಿದ್ದು ಅನೇಕ ಬಳಕೆದಾರರು ಕಿಡಿಕಾರಿದ್ದಾರೆ. ಈ ಘಟನೆಯು ರಸ್ತೆ ಸುರಕ್ಷತೆ ಕಳವಳ ಹುಟ್ಟುಹಾಕಿದೆ.