ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಉಬರ್ ಡ್ರೈವರ್‌ನಂತೆ ನಟಿಸಿ ವೃದ್ಧೆಗೆ ವಂಚನೆ: ಡಬಲ್ ಹಣ ವಸೂಲಿ ಮಾಡಿದ ಆಟೋ ಚಾಲಕ

Viral News: ಬೆಂಗಳೂರಿನ ಆಟೋ ಚಾಲಕನೊಬ್ಬ ವೃದ್ಧ ಮಹಿಳೆಗೆ ವಂಚಿಸಿದ ಘಟನೆ ನಡೆದಿದೆ. ಸದ್ಯ ಈ ದೃಶ್ಯವು ಪ್ರಯಾಣಿಕರ ಸುರಕ್ಷತೆ ಮತ್ತು ವಂಚನೆಗಳ ಕುರಿತು ಚರ್ಚೆಗಳನ್ನು ಹುಟ್ಟು ಹಾಕುವಂತೆ ಮಾಡಿದೆ. ಆಟೋ ಚಾಲಕ ತಾನು ಉಬರ್ ಸವಾರನಂತೆ ನಟಿಸಿ, ಪ್ರಯಾಣಿಕರ ಬಳಿ ಬಹುತೇಕ ಎರಡು ಪಟ್ಟು ಹಣ ವಸೂಲಿ ಮಾಡಿದ್ದಾನೆ. ಈ ಬಗ್ಗೆ ವೃದ್ಧೆಯ ಮಗ 'ರೆಡ್ಡಿಟ್'ನಲ್ಲಿ ಸುದೀರ್ಘ ಪೋಸ್ಟ್ ಬರೆದಿದ್ದಾರೆ.

ದುಪ್ಪಟ್ಟು ಹಣ ವಸೂಲಿ ಮಾಡಿದ ಆಟೋ ಚಾಲಕ

ಬೆಂಗಳೂರು, ಜ. 28: ಸಿಲಿಕಾನ್ ಸಿಟಿಯಲ್ಲಿ ಕ್ಯಾಬ್ ಚಾಲಕರು, ಆಟೋ ಚಾಲಕರ ವರ್ತನೆ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ಆಟೋ ಚಾಲಕನೊಬ್ಬ ವೃದ್ಧೆಗೆ ವಂಚಿಸಿರುವ ಘಟನೆ ನಡೆದಿದೆ. ಸದ್ಯ ಈ ದೃಶ್ಯವು ಪ್ರಯಾಣಿಕರ ಸುರಕ್ಷತೆ ಮತ್ತು ವಂಚನೆಗಳ ಕುರಿತು ಚರ್ಚೆಗಳನ್ನು ಹುಟ್ಟು ಹಾಕುವಂತೆ ಮಾಡಿದೆ. ಆಟೋ ಚಾಲಕ ತಾನು ಉಬರ್ ಸವಾರನಂತೆ ನಟಿಸಿ, ಬಹುತೇಕ ಎರಡು ಪಟ್ಟು ಹಣ ವಸೂಲಿ ಮಾಡಿದ್ದಾನೆ. ಈ ಬಗ್ಗೆ ವೃದ್ಧೆಯ ಮಗ 'ರೆಡ್ಡಿಟ್'ನಲ್ಲಿ ಸುದೀರ್ಘ ಪೋಸ್ಟ್ (Viral News) ಬರೆದಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ವಂಚನೆಯ ಬಗ್ಗೆ ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ. ಉಬರ್ ಸವಾರಿಯನ್ನು ಬುಕ್ ಮಾಡಿದ ನಂತರ ಈ ವಂಚನೆ ನಡೆದಿದೆ ಎಂದು ಶೇರ್ ಮಾಡಿಕೊಂಡಿದ್ದಾರೆ. ದೂರುದಾರ ವ್ಯಕ್ತಿಯು ತನ್ನ ತಾಯಿಗಾಗಿ ಬೇರೊಂದು ಸ್ಥಳದಿಂದ ಉಬರ್ ವಾಹನ ಬುಕ್ ಮಾಡಿದ್ದರು. ಆದರೆ ಇಲ್ಲಿ ಆಗಿದ್ದೆ ಬೇರೆ. ವೃದ್ಧೆ ರಸ್ತೆಯಲ್ಲಿ ಕಾಯುತ್ತಿದ್ದಾಗ ಅಲ್ಲಿಗೆ ಬಂದ ಒಬ್ಬ ಆಟೋ ಚಾಲಕ, ತಾನೇ ಉಬರ್‌ ಚಾಲಕ ಎಂದು ನಂಬಿಸಿದ್ದಾನೆ.

ವಂಚನೆಯ ವಿವರ:

ವಯಸ್ಸಾದ ಮಹಿಳೆಗೆ ಅಪ್ಲಿಕೇಶನ್ ಅಥವಾ ಸವಾರಿಯ ಬಗ್ಗೆ ನಿರ್ದಿಷ್ಟ ವಿವರಗಳು ತಿಳಿಯದ ಕಾರಣ, ಈ ಆಟೋ ಚಾಲಕ ಸುಳ್ಳು ಹೇಳಿದ್ದಾನೆ. ವೃದ್ಧೆಗೆ ಅನುಮಾನ ಬರದಂತೆ ತಡೆಯಲು ಆತ ಒಟಿಪಿ ಸಂಖ್ಯೆಯನ್ನು ಕೂಡ ಕೇಳಿದ್ದಾನೆ. ಅವರು ಸಂಖ್ಯೆ ನೀಡಿದಾಗ, ಅದನ್ನು ತನ್ನ ಫೋನ್‌ನಲ್ಲಿ ದಾಖಲಿಸಿರುವಂತೆ ನಟಿಸಿದ್ದಾನೆ.

ಶಿಮ್ಲಾ ಆಸ್ಪತ್ರೆ ಗಲಾಟೆ ಪ್ರಕರಣ; ಪರಸ್ಪರ ಅಪ್ಪಿಕೊಂಡು ಕ್ಷಮೆಯಾಚಿಸಿದ ವೈದ್ಯ-ರೋಗಿ!

ಇತ್ತ ಮಗ ಉಬರ್ ಚಾಲಕ ಇನ್ನೂ ಕಾಯುತ್ತಿರುವ ಅಪ್ಲಿಕೇಶನ್ ಅನ್ನು ಗಮನಿಸಿದ್ದಾನೆ. ನಂತರ ಆಟೋ ಚಾಲಕನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು‌ ಮಗ ತಾಯಿಗೆ ಕರೆ ಮಾಡಿದಾಗ. ಅವರು ಈಗಾಗಲೇ ಆಟೋ ಹತ್ತಿ ಅರ್ಧ ದೂರ ತಲುಪಿರುವುದು ಗೊತ್ತಾಗಿದೆ. ಪ್ರಯಾಣ ಮಧ್ಯದಲ್ಲಿ ಚಾಲಕನು ತಾನು ಉಬರ್ ಚಾಲಕನಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಇಳಿಯುವ ಸ್ಥಳ ಬಂದಾಗ, ಆಪ್ಲಿಕೇಷನ್‌ನಲ್ಲಿ ತೋರಿಸಿದ್ದ ದರಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚು ಹಣ ನೀಡುವಂತೆ ಒತ್ತಾಯಿಸಿದ್ದಾನೆ.

ಗತ್ಯಂತರವಿಲ್ಲದೆ ತಾಯಿ ಹಣ ಪಾವತಿಸಿದ್ದಾರೆ ಎಂದು ಮಗ ತಿಳಿಸಿದ್ದಾನೆ. ಈ ಆಟೋ ಚಾಲಕನ ವರ್ತನೆ ಬಗ್ಗೆ ಬರೆದುಕೊಂಡಿದ್ದಾನೆ. ನೆಟ್ಟಿಗರು ತಮ್ಮ ಉದಾಹರಣೆಯ ಮೂಲಕ ಇತರರಿಗೆ ಮತ್ತು ಅವರ ಪೋಷಕರಿಗೆ ಎಚ್ಚರಿಕೆಯ ಮಾತು ಹೇಳಿದ್ದಾರೆ.