ಮುಂಬೈ, ಜೂ. 5: ಇತ್ತೀಚೆಗೆ ಮಹಿಳೆಯರಿಗೆ ಸಾರ್ವಜನಿಕ ಸ್ಥಳದಲ್ಲೂ ಸುರಕ್ಷತೆ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಅತ್ಯಂತ ಸುರಕ್ಷಿತ ಹಾಗೂ ಜನಸಂದಣಿ ಇರುವ ಮುಖ್ಯ ನಗರ ಮುಂಬೈಯಲ್ಲೇ ಮಹಿಳೆಯೊಬ್ಬರಿಗೆ ಕಹಿ ಅನುಭವವಾಗಿದೆ. ಆಟೋ ಚಾಲಕ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ಮಾತನಾಡಿ ಕಿರುಕುಳ ನೀಡಿದ್ದಾನೆ. ಈ ಆಘಾತಕಾರಿ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ದೃಶ್ಯವು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ಉಂಟು ಮಾಡಿದೆ. ಆಟೋ ಚಾಲಕ ಮಹಿಳೆ ವಾಹನದಿಂದ ಹೊರಬರುತ್ತಿದ್ದಂತೆ ಅತ್ಯಂತ ಅಸಭ್ಯವಾಗಿ ಮಾತನಾಡಿ, ಆಕೆಯ ಗೌರವಕ್ಕೆ ದಕ್ಕೆ ತಂದಿದ್ದಾನೆ. "ಮುಟ್ಟಿ ನೋಡಿ" ಎಂಬ ಅಸಭ್ಯ ಪದವನ್ನು ಬಳಕೆ ಮಾಡಿದ್ದಾನೆ.
ವಿಡಿಯೊ ನೋಡಿ:
ಈ ಘಟನೆಯು ಮಹಿಳೆಯರು ಎದುರಿಸುತ್ತಿರುವ ಕಿರುಕುಳದ ಬಗ್ಗೆ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಚಾಲಕನು ಲೈಂಗಿಕ ಕೃತ್ಯ ಎಸಗುವ ರೀತಿಯಲ್ಲಿ ಮಹಿಳೆಯನ್ನು ಪ್ರಚೋದಿಸಿದ್ದಾನೆ. ಈ ಕಾಮುಕನ ಮನಸ್ಥಿತಿಯನ್ನು ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದು, ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಂಬೈ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಸುರಂಗದಲ್ಲಿ ಕೆಟ್ಟು ನಿಂತ ಚೆನ್ನೈ ಮೆಟ್ರೋ ರೈಲು; ಪ್ರಯಾಣಿಕರು ಸುಸ್ತೋ ಸುಸ್ತು
ವಿಡಿಯೊ ವೈರಲ್ ಆದ ಬೆನ್ನಲ್ಲೇ ಮುಂಬೈ ಪೊಲೀಸರು, ಇದನ್ನು ಪೋಸ್ಟ್ ಮಾಡಿದ ಮಹಿಳೆಯನ್ನು ಸಂಪರ್ಕಿಸಿದ್ದಾರೆ. ಪೊಲೀಸರು ದಯವಿಟ್ಟು ಸಂಪರ್ಕ ವಿವರಗಳನ್ನು ತಿಳಿಸಿಕೊಡಿ ಎಂದು ಹೇಳಿದ್ದಾರೆ. ಇಂತಹ ಮೌಖಿಕ ಕಿರುಕುಳಗಳು ಮಹಿಳೆಯರ ಮೇಲೆ ಪರಿಣಾಮ ಬೀರುತ್ತವೆ ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಒಬ್ಬರು, ʼʼಈ ಕಾಮುಕನಿಗೆ ಸರಿಯಾದ ಶಿಕ್ಷೆ ವಿಧಿಸಬೇಕುʼʼ ಎಂದು ಕಮೆಂಟ್ ಮಾಡಿದ್ದಾರೆ.