ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚಲಿಸುವ ಬೈಕ್‌ನಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ: ಕಂದಮ್ಮನನ್ನು ರಕ್ಷಣೆ ಮಾಡಿದ ರೋಚಕ ವಿಡಿಯೊ ನೋಡಿ!

Viral Video: ಬೈಕ್ ನ ಹಿಂಬದಿ ಸೀಟ್ ನಲ್ಲೇ ಗರ್ಭಿಣಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಅಘಾತಕಾರಿ ಘಟನೆಯೊಂದು ನಡೆದಿದೆ. ಆದಾಗ್ಯೂ, ಅವರು ಆಸ್ಪತ್ರೆಯ ಪ್ರವೇಶದ್ವಾರವನ್ನು ತಲುಪುವ ಹೊತ್ತಿಗೆ ಆದಾಗಲೇ ಹೆರಿಗೆಯಾಗಿತ್ತು. ವಿಯೆಟ್ನಾಂನ ಥಾಯ್ ನ್ಗುಯೆನ್ ಪ್ರಾಂತ್ಯದ ಫೂಲುವಾಂಗ್ ಆಸ್ಪತ್ರೆಯ ಆವರಣದಲ್ಲಿ ಈ ಘಟನೆ ನಡೆದಿದ್ದು ಸದ್ಯ ತಾಯಿ ಮಗು ಸುರಕ್ಷಿತವಾಗಿದ್ದಾರೆ.

ಇಂಟರ್ ನೆಟ್ ಚಿತ್ರ

ವಿಯೆಟ್ನಾಂ, ಆ.5: ಚಲಿಸುತ್ತಿದ್ದ ಬೈಕ್ ನ ಹಿಂಬದಿ ಸೀಟ್ ನಲ್ಲೇ ಗರ್ಭಿಣಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಅಘಾತಕಾರಿ ಘಟನೆಯೊಂದು ನಡೆದಿದೆ. ಆದಾಗ್ಯೂ, ಅವರು ಆಸ್ಪತ್ರೆಯ ಪ್ರವೇಶದ್ವಾರವನ್ನು ತಲುಪುವ ಹೊತ್ತಿಗೆ ಆದಾಗಲೇ ಹೆರಿಗೆಯಾಗಿತ್ತು. ವಿಯೆಟ್ನಾಂನ ಥಾಯ್ ನ್ಗುಯೆನ್ ಪ್ರಾಂತ್ಯದ ಫೂ ಲುವಾಂಗ್ ಆಸ್ಪತ್ರೆಯ ಆವರಣದಲ್ಲಿ ಈ ಘಟನೆ ನಡೆದಿದ್ದು ಸದ್ಯ ತಾಯಿ ಮಗು ಸುರಕ್ಷಿತವಾಗಿದ್ದಾರೆ. ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

25 ವರ್ಷದ ಗರ್ಭಿಣಿ ಮಹಿಳೆಯೊಬ್ಬರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಮನೆಯಿಂದ ಆಸ್ಪತ್ರೆಗೆ ತೆರಳಲು ಹದಿನೈದು ನಿಮಿಷಗಳ ದಾರಿ ಇದ್ದು ಅವರ ಪತಿ ಬೈಕ್ ನಲ್ಲಿ ಹಿಂಬದಿ ಸೀಟಿನಲ್ಲಿ ಕುಳ್ಳಿರಿಸಿ ತೆರಳಿದ್ದರು. ಆದರೆ ಆಸ್ಪತ್ರೆ ಮುಖ್ಯದ್ವಾರದ ಬಳಿ ಹೋಗುವಷ್ಟರಲ್ಲೇ ಬೈಕ್ ನಲ್ಲಿಯೇ ಮಗುವಿಗೆ ಜನನವಾಗಿದೆ. ವೈರಲ್ ಆದ ದೃಶ್ಯದಲ್ಲಿ ನವಜಾತ ಶಿಶುವಿನ ಹೊಕ್ಕುಳ ಬಳ್ಳಿ ಇನ್ನೂ ಜೋಡಿಸಲ್ಪಟ್ಟಿರುವಾಗಲೇ ಮಹಿಳೆ ಬೈಕ್ ನಿಂದ ಇಳಿಯಲು ಪ್ರಯತ್ನಿಸಿರುವ ದೃಶ್ಯ ವೈರಲ್ ಆಗಿದೆ.

ವಿಡಿಯೋ ನೋಡಿ:



ಕೂಡಲೇ ಆಸ್ಪತ್ರೆಯ ಸಿಬ್ಬಂದಿಗಳು ತಾಯಿ ಮತ್ತು ಮಗುವಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ನವಜಾತ ಶಿಶುವಿನ ಮೇಲೆ ಒತ್ತಡ ಬೀಳದಂತೆ ನಿಧಾನವಾಗಿ ತಾಯಿ ಬೈಕ್ ನಿಂದ ಇಳಿದಿದ್ದಾರೆ. ನಂತರ ವೈದ್ಯರು ಹೊಕ್ಕುಳ ಬಳ್ಳಿ ಕತ್ತರಿಸಿ ಹೆರಿಗೆ ಕೊಠಿಡಿಗೆ ರವಾನಿಸಿದ್ದಾರೆ. ಮಗುವು ಜೋರಾಗಿ ಅಳುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

Viral Video: ಬ್ಲಿಂಕ್‌ಇಟ್‌ ಉಚಿತ ಆಂಬ್ಯುಲೆನ್ಸ್‌ ಸೇವೆಯಿಂದ ಉಳಿಯಿತು ವೃದ್ಧೆಯ ಪ್ರಾಣ

ಗಂಡು ಮಗುವಿನ ಜನನವಾಗಿದ್ದು ಈ ಸಮಯದಲ್ಲಿ ಸುಮಾರು 2 ಕಿಲೋಗ್ರಾಂಗಳಷ್ಟು ತೂಕವಿತ್ತು, ಪ್ರಸವಪೂರ್ವ ಹೆರಿಗೆಯಾಗಿದ್ದರಿಂದ ಮಗುವಿಗೆ ಅಗತ್ಯವಿರುವ ಹೆಪಟೈಟಿಸ್ ಬಿ ಲಸಿಕೆ ನೀಡಿ, ಸದ್ಯ ನಿಗಾದಲ್ಲಿಡಲಾಗಿದೆ. ತಾಯಿ ಮತ್ತು ಆಕೆಯ ಮಗು ಇಬ್ಬರೂ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಅಕಾಲಿಕ ಜನನದಿಂದಾಗಿ ಶಿಶು ವೈದ್ಯಕೀಯ ನಿಗಾದಲ್ಲಿದೆ.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದು ಬೈಕ್ ನಲ್ಲಿ ಪ್ರಯಾಣ ಮಾಡಿರುವ ಬಗ್ಗೆ ಅಘಾತ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು ತಕ್ಷಣ ಸ್ಪಂದಿಸಿದ ಆಸ್ಪತ್ರೆ ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.