ಚೆನ್ನೈ, ಜೂ. 8: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಹಲವು ಮುದ್ದಾದ ವಿಡಿಯೊಗಳು ಕಾಣ ಸಿಗುತ್ತವೆ. ಮಾಲಕನೊಂದಿಗೆ ಕಾಲ ಕಳೆಯುವ ನಾಯಿ, ಕರುವಿನ ಮುದ್ದಾದ ನೋಟ ಹೀಗೆ... ಇದಕ್ಕೆ ಸೇರ್ಪಡೆ ಎಂಬಂತೆ ಇದೀಗ ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಕಂಡುಬಂದ ದೃಶ್ಯವೊಂದು ಗಮನ ಸೆಳೆದಿದೆ (Viral News) ಆಗಿದೆ. ದೇವಸ್ಥಾನವೊಂದರಲ್ಲಿ ಮುದ್ದಾದ ಆನೆ ಮರಿಯೊಂದು ಮಾವುತ ಬಳಿ ಬಂದು ಶಾಂತವಾಗಿ ಕಾಲು ಮಸಾಜ್ ಮಾಡಿಸಿಕೊಳ್ಳುತ್ತಿದೆ. ಈ ಕ್ಯೂಟ್ ಆನೆ ಮರಿಯ ಕ್ಲಿಪ್ ವೈರಲ್ ಆಗಿದೆ.
ಈ ದೃಶ್ಯವು ತಮಿಳುನಾಡಿನ ಕುಂಭಕೋಣಂನಲ್ಲಿರುವ ಅರುಲ್ಮಿಗು ಆದಿ ಕುಂಬೇಶ್ವರರ್ ದೇವಸ್ಥಾನದಲ್ಲಿ ಕಂಡು ಬಂದಿದೆ. 'ಮಂಗಳಂ' ಹೆಸರಿನ ಮುದ್ದಾದ ಆನೆ ಮರಿ ಮಾವುತನ ಜತೆ ಆತ್ಮೀಯವಾಗಿ ಒಡನಾಟ ಹೊಂದಿದೆ. ಹಣೆಯ ಮೇಲೆ ತಿಲಕ ಧರಿಸಿ ಮತ್ತು ಗಂಟೆಗಳಿಂದ ಮಾಡಿದ ಹಾರವನ್ನು ಹಾಕಿಸಿಕೊಂಡಿರುವ ಮುದ್ದಾದ ಆನೆ ಮರಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಮಾವುತನ ಬಳಿ ದೇವಾಲಯದ ಪ್ರಶಾಂತ ಪರಿಸರದಲ್ಲಿ ನಿಧಾನವಾಗಿ ತನ್ನ ಪಾದಗಳನ್ನು ಮಸಾಜ್ ಮಾಡಿಸಿಕೊಳ್ಳುತ್ತಿದೆ.
ವಿಡಿಯೊ ನೋಡಿ:
ಈ ವಿಡಿಯೊ ನೋಡಿದ ಕೂಡಲೇ ಮನಸ್ಸಿಗೆ ಬಹಳಷ್ಟು ಮುದ ನೀಡುತ್ತಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ಕೋಟಿಗೂ ಅಧಿಕ ವೀಕ್ಷಣೆ ಗಳಿಸಿದೆ. ಮಾವುತ ಪ್ರೀತಿಯಿಂದ ಒಂದು ಕಾಲನ್ನು ಮಸಾಜ್ ಮಾಡಿಸಿದ ತಕ್ಷಣ ಇನ್ನೊಂದು ಕಾಲನ್ನು ಚಾಚಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಬಹಳಷ್ಟು ಟ್ರೆಂಡ್ ಕ್ರಿಯೇಟ್ ಮಾಡಿದೆ. ಮಂಗಳಂ ಮತ್ತು ಮಾವುತನ ನಡುವಿನ ಮುದ್ದಾದ ಕ್ಷಣಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಬೆಂಗಳೂರಿನಲ್ಲಿ ಮಧ್ಯರಾತ್ರಿ ಆಟೋದಲ್ಲಿ ಸಂಚರಿಸಿದ ಮಹಿಳೆ ಹೇಳಿದ್ದೇನು?
ವೈರಲ್ ಆದ ವಿಡಿಯೊದಲ್ಲಿ ಮಾವುತ ಎಚ್ಚರಿಕೆಯಿಂದ ಪಾದವನ್ನು ಮಸಾಜ್ ಮಾಡುವವರೆಗೂ ಮಂಗಳಂ ಶಾಂತವಾಗಿ ನಿಂತಿತ್ತು, ಆ ಕ್ಷಣವನ್ನು ಆನಂದಿಸುತ್ತಿತ್ತು. ಒಂದು ಪಾದದ ಮಸಾಜ್ ಮುಗಿಸಿದ ತಕ್ಕಣ ಇನ್ನೊಂದು ಪಾದವನ್ನು ಅದೇ ಮುಂದಕ್ಕೆ ಚಾಚಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಈ ಬಗ್ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, ʼʼನಾನು ನೋಡಿದ ಅತ್ಯಂತ ಮುದ್ದಾದ ವಿಡಿಯೊಗಳಲ್ಲಿ ಇದೂ ಒಂದುʼʼ ಎಂದು ಹೇಳಿದ್ದಾರೆ. ಮತ್ತೊಬ್ಬರು, ʼʼಎಂತಹ ಪ್ರೀತಿಯ ಮತ್ತು ವಿನಮ್ರ ಮಗು. ನನ್ನ ಪರವಾಗಿ ಅವನನ್ನು ತಬ್ಬಿಕೊಳ್ಳಿʼʼ ಎಂದು ಹೇಳಿದ್ದಾರೆ. ಇನ್ನೊಬ್ಬರು, "ಈ ಆನೆ ಮರಿ, 'ಸ್ವಲ್ಪ ಹೊತ್ತು ನನ್ನನ್ನು ಮುದ್ದಿಸು' ಅಂತ ಹೇಳುತ್ತಿದೆʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.