ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬೆಂಗಳೂರಿನಲ್ಲಿ ಮಧ್ಯರಾತ್ರಿ ಆಟೋದಲ್ಲಿ ಸಂಚರಿಸಿದ ಮಹಿಳೆ ವಿಡಿಯೋದಲ್ಲಿ ಹೇಳಿದ್ದೇನು?

ಮಧ್ಯರಾತ್ರಿ ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣ ಮಹಿಳೆಯರು ಸಾಮಾನ್ಯವಾಗಿ ಭಯಪಡುತ್ತಾರೆ. ಆದರೆ, ಬೆಂಗಳೂರಿನ ಈ ಆಟೋ ಚಾಲಕ ಮಹಿಳೆಯರ ಸುರಕ್ಷತೆಗೆಂದು ತೆಗೆದುಕೊಂಡ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಬೆಂಗಳೂರಿನಲ್ಲಿ ರಾಪಿಡೋ ಆಟೋದಲ್ಲಿ ಮಧ್ಯರಾತ್ರಿಯಲ್ಲಿ ಮನೆಗೆ ಹೊರಟಿದ್ದ ಮಹಿಳೆಯೊಬ್ಬರು ಮಾಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ

ಮಧ್ಯರಾತ್ರಿ ಆಟೋದಲ್ಲಿ ಸಂಚರಿಸಿದ ಮಹಿಳೆ ವಿಡಿಯೋದಲ್ಲಿ ಹೇಳಿದ್ದೇನು?

ಸಂಗ್ರಹ ಚಿತ್ರ -

Vishakha Bhat
Vishakha Bhat Dec 13, 2025 9:42 AM

ಬೆಂಗಳೂರು: ಮಧ್ಯರಾತ್ರಿ ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣ ಮಹಿಳೆಯರು ಸಾಮಾನ್ಯವಾಗಿ (Viral Video) ಭಯಪಡುತ್ತಾರೆ. ಆದರೆ, ಬೆಂಗಳೂರಿನ ಈ ಆಟೋ ಚಾಲಕ ಮಹಿಳೆಯರ ಸುರಕ್ಷತೆಗೆಂದು ತೆಗೆದುಕೊಂಡ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಬೆಂಗಳೂರಿನಲ್ಲಿ ರಾಪಿಡೋ ಆಟೋದಲ್ಲಿ ಮಧ್ಯರಾತ್ರಿಯಲ್ಲಿ ಮನೆಗೆ ಹೊರಟಿದ್ದ ಮಹಿಳೆಯೊಬ್ಬರು ಮಾಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಆಟೋದ ಒಳಗಡೆ ಇದ್ದ ಸಾಲುಗಳು ಆಕೆಯನ್ನು ಆಕರ್ಷಿಸಿದೆ. ಈ ಸಾಲುಗಳನ್ನು ವಿಡಿಯೋ ಮಾಡಿರುವ ಯುವತಿ, ಧೈರ್ಯ ತುಂಬುವ ಕ್ಷಣ ಎಂದಿದ್ದಾರೆ.

ಆಟೋ ಒಳಗೆ ಚಾಲಕ ನಾನೂ ಒಬ್ಬ ತಂದೆ ಮತ್ತು ಸಹೋದರ. ನಿಮ್ಮ ಸುರಕ್ಷತೆ ಮುಖ್ಯವಾಗಿದೆ. ಆರಾಮವಾಗಿ ಕುಳಿತುಕೊಳ್ಳಿ ಎಂದು ಬರೆಯಲಾಗಿತ್ತು. Peak Bengaluru ಎಂಬ ಟೈಟಲ್ ನೊಂದಿಗೆ ಮಾಡಿರುವ ಈ ವಿಡಿಯೋ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ಬೆಂಗಳೂರಿನ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರು ಮಹಿಳೆಯರಿಗೆ ಎಷ್ಟು ಸೇಫ್ಟಿ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

ಬೆಂಗಳೂರಿನ ಉಬರ್ ಚಾಲಕನೊಬ್ಬನು ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಸ್ಯಾಂಡ್‌ವಿಚ್‌ ತಂದು ಕೊಟ್ಟು ಹಸಿವು ನೀಗಿಸಿದ ಘಟನೆ ನಡೆದಿದೆ. ತಡರಾತ್ರಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಮುಂಬೈನ (Mumbai) ಯುವತಿಯೂ ಹಸಿವಿ ನಿಂದ ಕಣ್ಣೀರು ಹಾಕುತ್ತಿದ್ದಾಗ, ಬೆಂಗಳೂರಿನ ಕ್ಯಾಬ್ ಚಾಲಕ ತಕ್ಷಣವೇ ತನ್ನ ಕಾರನ್ನು ನಿಲ್ಲಿಸಿ ಸ್ಯಾಂಡ್‌ವಿಚ್ ನೀಡಿದ್ದಾನೆ.

ಕಷ್ಟದ ಸಮಯದಲ್ಲಿ ಕ್ಯಾಬ್ ಚಾಲಕ ತನಗೆ ಹೇಗೆ ಸಹಾಯ ಮಾಡಲು ಪ್ರಯತ್ನಿಸಿದ್ದಾರೆ ಎಂಬುದನ್ನು ಯುವತಿ ಹಂಚಿಕೊಂಡಿದ್ದಾಳೆ. ಬೆಂಗಳೂರಿನಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆಯೂ ಜನರ ಹೃದಯಗಳನ್ನು ಗೆದ್ದಿದೆ. ಮುಂಬೈ ಮೂಲದ ಮಹಿಳೆ ಯೋಗಿತಾ ರಾಥೋಡ್ (yogithaarathore) ಎಂಬವರು ದೀರ್ಘಾವಧಿಯ ಶೂಟಿಂಗ್ ಮುಗಿಸಿ ತೀವ್ರ ಆಯಾಸದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ಯೋಗಿತಾ ಅವರು ಕ್ಯಾಬ್ ಹತ್ತಿದಾಗಲೇ . ವಿಮಾನ ನಿಲ್ದಾಣದ ದೂರವನ್ನು ನೆನಪಿಸಿಕೊಂಡು, ತಾನು ತೀವ್ರವಾಗಿ ಹಸಿವಿನಿಂದ ಬಳಲುತ್ತಿರುವುದಾಗಿ ಮತ್ತು ಮಧ್ಯರಾತ್ರಿ 2 ಗಂಟೆಯ ವಿಮಾನ ನಿಲ್ದಾಣ ತೆರಳುವಾಗ ಊಟ ಸಿಗುವುದೋ ಗೊತ್ತಿಲ್ಲ ಎಂದು ತಮ್ಮ ಸ್ನೇಹಿತೆಯೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದರು. ಯೋಗಿತಾ ಅವರ ಈ ಮಾತುಗಳನ್ನು ಕ್ಯಾಬ್ ಚಾಲಕ ಅರಿತು ಆಕೆಗೆ ಸಹಾಯ ಮಾಡಿದ್ದಾನೆ. ಸದ್ಯ ಯುವತಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್‌ ಆಗಿದೆ.