ಪಶ್ಚಿಮ ಬಂಗಾಳ,ಅ.26: ತಾಯಿ ಮತ್ತು ಮಗುವಿನ ಸಂಬಂಧ ಎಲ್ಲವನ್ನು ಮೀರಿಸಿದ್ದು, ತಾಯಿಯ ಹೃದಯ ತನ್ನ ಮಗುವಿಗಾಗಿ ಮಿಡಿಯುತ್ತಿರುತ್ತದೆ. ಇದೀಗ ಕುರ್ಸಿಯಾಂಗ್ ಅರಣ್ಯದಲ್ಲಿ ಮರಿಯಾನೆಯೊಂದು ತಾಯಿಯಿಂದ ಬೇರ್ಪಟ್ಟಿದ್ದು ಸುಮಾರು ಏಳು ಗಂಟೆಗಳ ಕಾರ್ಯಾಚರಣೆ ನಂತರ ತನ್ನ ತಾಯಿಯೊಂದಿಗೆ ಸೇರಿಸಲಾಯಿತು. ತಾಯಿ ಆನೆ ಮತ್ತು ಮರಿಯಾನೆ ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದಿತ್ತು. ಅರಣ್ಯ ಇಲಾಖೆಯವರುಎರಡನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದರೂ ಕಾರ್ಯಾಚರಣೆ (Viral News) ಗೊಂದಲದಲ್ಲಿ ಮರಿಯೂ ಬೆರ್ಪಟ್ಟಿದೆ.
ಪಶ್ಚಿಮ ಬಂಗಾಳದ ಕುರ್ಸಿಯೊಂಗ್ನಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯೊಂದು ಅತ್ಯಂತ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು ಏಳು ಗಂಟೆಗಳ ಕಾಲ ಶ್ರಮಿಸಿ, ಬೇರ್ಪಟ್ಟಿದ್ದ ಆನೆ ಮರಿಯನ್ನು ಅದರ ತಾಯಿಯೊಂದಿಗೆ ಸೇರಿಸಿದ್ದಾರೆ.
ವಿಡಿಯೋ ನೋಡಿ:
ವೈರಲ್ ಆಗಿರುವ ಈ ಹೃದಯಸ್ಪರ್ಶಿ ದೃಶ್ಯದಲ್ಲಿ, ತಾಯಿ ಆನೆಯು ತನ್ನ ಹಿಂಡಿನೊಂದಿಗೆ ಮರಳಿ ಬಂದು, ಮರಿಯನ್ನು ಕರೆದುಕೊಂಡು ಕಾಡಿನತ್ತ ಸಾಗುವ ದೃಶ್ಯ ನಿಜಕ್ಕೂ ಭಾವನಾತ್ಮಕ ವಾಗಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಬೇರ್ಪಟ್ಟಿದ್ದ ಆನೆಗಳನ್ನು ಮತ್ತೆ ಒಂದಾಗಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಎಷ್ಟು ಶ್ರಮಿಸಿದರು ಎಂಬುದನ್ನು ಅವರು ವಿವರಿಸಿದ್ದಾರೆ.
Viral Video: ವಿಮಾನ ಪ್ರಯಾಣದ ವೇಳೆ ಬಟ್ಟೆ ಕಳಚಿ ಕಾಕ್ಪಿಟ್ಗೆ ನುಗ್ಗಲು ಯತ್ನಿಸಿದ ಮಹಿಳೆ; ಪ್ರಯಾಣಿಕರು ಶಾಕ್
ಪಶ್ಚಿಮ ಬಂಗಾಳದ ಕುರ್ಸಿಯೊಂಗ್ ಪ್ರದೇಶದಲ್ಲಿ ತಾಯಿ ಆನೆ ಮತ್ತು ಅದರ ಮರಿ ಆಕಸ್ಮಿಕವಾಗಿ ನೀರಿನ ತೊಟ್ಟಿಯೊಂದಕ್ಕೆ ಬಿದ್ದಿತ್ತು. ಈ ಸಂದರ್ಭದಲ್ಲಿ ಪ್ರಾಣಿಗಳನ್ನು ರಕ್ಷಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಮುಂದಾಗಿದ್ದಾರೆ. ಆದರೆ, ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಆನೆ ಮರಿಯು ತನ್ನ ತಾಯಿಯಿಂದ ಬೇರ್ಪಟ್ಟು ಅಲೆದಾಟ ನಡೆಸುತ್ತಿತ್ತು. ಮರಿ ಆನೆಯನ್ನು ಅದರ ತಾಯಿಯೊಂದಿಗೆ ಮರುಸೇರಿಸುವುದು ಅತ್ಯಗತ್ಯ ಎಂದು ಅರಿತ ಕುರ್ಸಿಯೊಂಗ್ ಅರಣ್ಯ ವಿಭಾಗದ ತಂಡವು, ತಾಯಿ ಆನೆಯನ್ನು ಪತ್ತೆಹಚ್ಚಲು ಹುಡುಕಾಟವನ್ನು ಆರಂಭಿಸಿದೆ.
ಮರಿಯನ್ನು ಕಾಡಿನ ಹತ್ತಿರ ಬಿಟ್ಟಾಗ ತಾಯಿ ಆನೆ ಆನೆಗಳ ಹಿಂಡಿನೊಂದಿಗೆ ಹಿಂತಿರುಗಿ ಬಂದು ಮರಿಯನ್ನು ಪ್ರೀತಿಯಿಂದ ಕರೆದುಕೊಂಡು ಹೋಯಿತು. ಈ ಘಟನೆಯನ್ನು ವಿವರಿಸುತ್ತಾ ಬಳಕೆದಾರರೊಬ್ಬರು "ಎಷ್ಟು ಸುಂದರವಾದ ವೀಡಿಯೊ"ಎಂದು ಅವರು ಬರೆದಿದ್ದಾರೆ. ಈ ದೃಶ್ಯ 50,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ತಾಯಿ ಆನೆ ತನ್ನ ಮರಿಯನ್ನು ಕರೆದೊಯ್ಯುವ ಆ ಭಾವನಾತ್ಮಕ ಕ್ಷಣವು ವೀಕ್ಷಕರ ಗಮನ ಸೆಳೆದಿದೆ.