ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಶ್ವವನ್ನೇ ಭಾವುಕವಾಗಿಸಿದ ಜಪಾನ್‌ನ ಕೋತಿ ʼಪಂಚ್‌ʼ ಈಗ ಸಾರ್ವಜನಿಕ ಜಾಗೃತಿಯ ರಾಯಭಾರಿ; ಗಮನಸೆಳೆದ ಮುಂಬೈ ಪೊಲೀಸರ ನಡೆ

Viral News: ಜಪಾನ್‌ನ ಏಳು ತಿಂಗಳ ಪುಟ್ಟ ಮಂಗ ಪಂಚ್ ಹುಟ್ಟಿದ ಕೂಡಲೇ ತಾಯಿಯಿಂದ ದೂರವಾಗಿದ್ದು ಬೊಂಬೆಯನ್ನೇ ತಾಯಿ ಎಂದು ಭಾವಿಸಿಕೊಂಡು ಓಡಾಡುತ್ತಿದೆ. ಈ ದೃಶ್ಯವು ಪ್ರಪಂಚದಾದ್ಯಂತದ ಪ್ರಾಣಿಪ್ರಿಯರ ಕಣ್ಣು ಒದ್ದೆಯಾಗುವಂತೆ ಮಾಡಿದೆ. ಮೃಗಾಲಯದ ಪಾಲಕರು ನೀಡುತ್ತಿದ್ದ ಗೊಂಬೆಯನ್ನೇ ತಾಯಿ ಎಂದು ಅಪ್ಪಿಕೊಂಡು ಬದುಕುತ್ತಿರುವ ಪಂಚ್‌ನ ವಿಡಿಯೊ ವೈರಲ್‌ ಆಗಿದೆ.

'ಪಂಚ್' ಈಗ ಮುಂಬೈ ಪೊಲೀಸರ ರಾಯಭಾರಿ

ಮುಂಬೈ, ಫೆ. 26: ಇತ್ತೀಚೆಗೆ ಜಪಾನ್‌ನ ಬೇಬಿ ಮಂಕಿ ಪಂಚ್ (Baby Monkey Punch) ಭಾರಿ ಸುದ್ದಿಯಲ್ಲಿದೆ. ಏಳು ತಿಂಗಳ ಪುಟ್ಟ ಮಂಗ ಪಂಚ್ ಹುಟ್ಟಿದ ಕೂಡಲೇ ತಾಯಿಯಿಂದ ದೂರವಾಗಿದ್ದು, ಬೊಂಬೆಯನ್ನೇ ತಾಯಿ ಎಂದು ಭಾವಿಸಿಕೊಂಡು ಬದುಕುತ್ತಿದೆ. ಇದರ ದೃಶ್ಯವು ಪ್ರಪಂಚದಾದ್ಯಂತದ ಪ್ರಾಣಿಪ್ರಿಯರ ಕಣ್ಣು ಒದ್ದೆಯಾಗುವಂತೆ ಮಾಡಿದೆ. ಮೃಗಾಲಯದ ಪಾಲಕರು ನೀಡಿದ ಗೊಂಬೆಯನ್ನೇ ತಾಯಿ ಎಂದು ಅಪ್ಪಿಕೊಂಡು ಬದುಕುತ್ತಿರುವ ಇದರ ಫೋಟೊ, ವಿಡಿಯೊ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಇದೇ 'ಪಂಚ್' ಮೂಲಕ ಮುಂಬೈ ಪೊಲೀಸರು ಸಾರ್ವಜನಿಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿ, ಏಳು ತಿಂಗಳ ವಯಸ್ಸಿನ ಪಂಚ್ ಎಂಬ ಮರಿಯನ್ನು ಅದರ ತಾಯಿಯು ತಿರಸ್ಕಾರ ಮಾಡಿತ್ತು. ಅದರ ಕಥೆ ಕೇಳಿ ಅನೇಕರು ಸಹಾನುಭೂತಿ ಹೊಂದಿದ್ದರು. ಇದೀಗ ಏಳು ತಿಂಗಳ ಪಂಚ್ ಮುಂಬೈ ಪೊಲೀಸರ ಹೊಸ ಅಭಿಯಾನದ ಭಾಗವಾಗಿದೆ. ಪಂಚ್‌ನ ಭಂಗಿಯನ್ನು ಹಂಚಿಕೊಳ್ಳುವ ಮೂಲಕ ಮುಂಬೈ ಪೊಲೀಸರು ಜಾಗೃತಿ ಮೂಡಿಸಿದ್ದಾರೆ. ರಾಷ್ಟ್ರೀಯ ತುರ್ತು ಸಹಾಯವಾಣಿ ಸಂಖ್ಯೆ 112ರ ಬಗ್ಗೆ ಜಾಗೃತಿ ಮೂಡಿಸಲು ಅವರು ಸೃಜನಶೀಲ ಮತ್ತು ಹೃದಯಸ್ಪರ್ಶಿ ಪಂಚ್‌ನ ಭಂಗಿಗಳನ್ನು ಬಳಸಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ:



ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಮುಂಬೈ ಪೊಲೀಸರು ಮಹಾತ್ಮ ಗಾಂಧಿ ಅವರ ಸಂದೇಶವನ್ನು ಹಂಚಿಕೊಂಡಿದ್ದಾರೆ. ಮಹಾತ್ಮ ಗಾಂಧೀಜಿ ಅವರ "ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಆಡಬೇಡʼʼ ಎಂಬ ಸಂದೇಶವನ್ನು ಪಂಚ್‌ನ ವಿವಿಧ ಭಂಗಿಗಳ ಮೂಲಕ ತಿಳಿಸಲಾಗಿದೆ.

ಜನ ನಿಬಿಡ ರಸ್ತೆ ಮಧ್ಯೆ ನಮಾಜ್ ಮಾಡಿದ ಮಹಿಳೆ; ಟ್ರಾಫಿಕ್‌ ಜಾಮ್‌ನಿಂದ ವಾಹನ ಸವಾರರು ಹೈರಾಣ

ಮೊದಲ ಸ್ಲೈಡ್‌ನಲ್ಲಿ ಪಂಚ್ ಕಣ್ಣು ಮುಚ್ಚಿದ್ದು ಇದು ಕೆಟ್ಟದ್ದನ್ನು ನೋಡಬೇಡಿ ಎಂಬ ಸಂದೇಶ ಸಾರುತ್ತದೆ. ಕೆಟ್ಟದ್ದನ್ನು ಕೇಳಬೇಡಿ ಎಂಬುದನ್ನು ಸಂಕೇತಿಸಲು ಪಂಚ್‌ ಕಿವಿ ಮುಚ್ಚಿಕೊಂಡಿರುವುದನ್ನು ಬಳಸಲಾಗಿದೆ. ಮೂರನೇ ಚಿತ್ರದಲ್ಲಿ ಪಂಚ್ ತನ್ನ ಕೈಗಳಿಂದ ಬಾಯಿ ಮುಚ್ಚಿಕೊಂಡಿರು ವುದನ್ನು ತೋರಿಸಿದ್ದು ಕೆಟ್ಟದ್ದನ್ನು ಮಾತನಾಡಬೇಡ ಎಂಬ ಸಂದೇಶ ಇದರಲ್ಲಿದೆ. ನಾಲ್ಕನೇ ಸ್ಲೈಡ್ ಪೋಸ್ಟ್‌ನಲ್ಲಿ ‌ಪಂಚ್ ತನ್ನ ನೆಚ್ಚಿನ ಗೊಂಬೆಯನ್ನು ಅಪ್ಪಿಕೊಂಡಿರುವ ಚಿತ್ರವಿದ್ದು, ಅದರಲ್ಲಿ ಕೆಟ್ಟದ್ದನ್ನು ಮಾಡಬೇಡ ಎಂಬ ಅರ್ಥಪೂರ್ಣ ಸಂದೇಶ ನೀಡಲಾಗಿದೆ.

ಮುಂಬೈ ಪೊಲೀಸರು ಈ ಮೂಲಕ ಸಾರ್ವಜನಿಕರು ಜವಾಬ್ದಾರಿಯುತವಾಗಿ ವರ್ತಿಸುವಂತೆ ಮತ್ತು ತಪ್ಪುಗಳನ್ನು ವರದಿ ಮಾಡುವಂತೆ ತಿಳಿಸಿದ್ದಾರೆ. ಈ ಪೋಸ್ಟ್ ಆನ್‌ಲೈನ್‌ನಲ್ಲಿ ಜನರ ಗಮನ ಸೆಳೆದಿದ್ದು ಮುಂಬೈ ಪೊಲೀಸರ ಸೃಜನಶೀಲತೆಯನ್ನು ನೆಟ್ಟಿಗರು ಹೊಗಳಿದ್ದಾರೆ.