ಬ್ಯಾಂಕಾಕ್, ಆ. 25: ಸಾಮಾನ್ಯವಾಗಿ ಎಲ್ಲ ಕಡೆ ಪ್ರಯಾಣಿಕರು ಟ್ಯಾಕ್ಸಿಗೆ ಹೆಚ್ಚು ಅವಲಂಬಿತರಾಗಿದ್ದಾರೆ. ಇದೀಗ ಬ್ಯಾಂಕಾಕ್‌ನಲ್ಲಿರುವ ಟ್ಯಾಕ್ಸಿ ಸೌಲಭ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು (Viral News) ಮಾಡುತ್ತಿದೆ. ಕೇವಲ ಪ್ರಯಾಣಕ್ಕಾಗಿ ಇದು ಖ್ಯಾತಿ ಪಡೆದಿಲ್ಲ. ಬದಲಾಗಿ ಸಣ್ಣ ಮಿನಿ ಮಾರ್ಟ್ ರೀತಿಯಲ್ಲೇ ದಿನನಿತ್ಯದ ಅಗತ್ಯ ವಸ್ತು ಇದರಲ್ಲಿದೆ. ವಿಶೇಷವೆಂದರೆ ಪ್ರಯಾಣಿಕರು ಇದನ್ನು ಉಚಿತವಾಗಿ ಬಳಸಿಕೊಳ್ಳಬಹುದು.
ಕ್ಯಾಬ್ ಒಳಗೆ ಸಣ್ಣ ಜಾಗಗಳಿದ್ದರೂ ಬಹಳಷ್ಟು ಗಮನ ಸೆಳೆದಿದೆ. ಪ್ರಯಾಣಿಕರು ನೀರು, ಕಾಫಿ ಜತೆಗೆ ಟೂತ್ ಬ್ರಷ್‌ಗಳು, ಸಾಕ್ಸ್, ಕನ್ನಡಿ ಮತ್ತು ಬೇಬಿ ಪೌಡರ್‌ನಂತಹ ದಿನ ನಿತ್ಯ ವಸ್ತುಗಳನ್ನು ಈ ಕ್ಯಾಬ್‌ನಲ್ಲಿ ಉಚಿತವಾಗಿ ಬಳಸಬಹುದು. ಈ ಸೌಲಭ್ಯಗಳು ನೆಟ್ಟಿಗರ ಮನಗೆದ್ದಿದ್ದು, ವಿಡಿಯೊ ವೈರಲ್ ಆಗಿದೆ.
ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ಸ್ ಫ್ಲೋರಾ ಮತ್ತು ನೋಟ್ ಎಂಬವರು ಈ ವಿಡಿಯೊ ಶೇರ್ ಮಾಡಿದ್ದಾರೆ. ಕ್ಯಾಬ್ ಒಳಗೆ ಹಲ್ಲುಜ್ಜುವ ಬ್ರಷ್ , ಸಾಕ್ಸ್, ಕನ್ನಡಿ, ಬೇಬಿ ಪೌಡರ್, ಕುಡಿಯುವ ನೀರು, ಕಾಫಿ, ಬೆಕ್ಕಿನ ಆಹಾರವೂ ಲಭ್ಯ.
ವಿಡಿಯೊ ನೋಡಿ:
ಸುಮಾರು 10 ವರ್ಷಗಳಿಂದ ಪ್ರಯಾಣಿಕರಿಗೆ ಉಚಿತ ಅಗತ್ಯ ವಸ್ತುಗಳನ್ನು ಇವರು ಒದಗಿಸುತ್ತಿದ್ದಾರೆ. ಈ ಅಗತ್ಯ ವಸ್ತು ಮಾರಾಟ ಮಾಡುವ ಬದಲು, ಜನರು ನಿಜವಾಗಿಯೂ ಅಗತ್ಯವಿರುವುದನ್ನು ತೆಗೆದುಕೊಳ್ಳಲು ಅವರು ಅವಕಾಶ ನೀಡುತ್ತಾರೆ. ಈ ಉಚಿತ ಸೇವೆಯನ್ನು ನೋಡಿ ಸಂತಸಪಡುವ ಪ್ರಯಾಣಿಕರು ಕೆಲವೊಮ್ಮೆ ಟಿಪ್ಸ್ ಕೂಡ ನೀಡುತ್ತಾರೆ.
ಫ್ರಿಜ್ ಒಳಗೆ ಮೂಡಿ ಬಂದ ಹಿಮ ಶಿವಲಿಂಗ; ದರ್ಶನಕ್ಕೆ ಭಕ್ತರ ದಂಡು
ಸದ್ಯ ಈ ವಿಡಿಯೊ ಭಾರೀ ವೈರಲ್ ಆಗಿದ್ದು, ಹಲವರು ಈ ಅನಿರೀಕ್ಷಿತ ಔದಾರ್ಯಕ್ಕೆ ಆಕರ್ಷಿತರಾಗಿದ್ದಾರೆ. ಕೆಲವೊಮ್ಮೆ ಸಾಮಾನ್ಯ ಕ್ಷಣಗಳು ಹೇಗೆ ಸ್ಮರಣೀಯವಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿ. ನೆಟ್ಟಿಗರೊಬ್ಬರು, ʼʼಇನ್ನೊಬ್ಬರ ಮುಖದಲ್ಲಿ ನಗು ತರಿಸುವಂತೆ ಮಾಡುವ ಸರಳತೆ ನಿಜಕ್ಕೂ ಮೆಚ್ಚುವಂತದ್ದುʼʼ ಎಂದಿದ್ದಾರೆ.