ವಾಷಿಂಗ್ಟನ್: ನಾರ್ತ್‌ವಿಲ್ಲೆ ಹೈಸ್ಕೂಲ್ ಬ್ಯಾಸ್ಕೆಟ್ ಬಾಲ್ ಕೋಚ್ ಜಿಮ್ ಜುಲ್ಲೊ ಆಟಗಾರರೊಬ್ಬಳ ಕೂದಲು ಎಳೆದ ವಿಡಿಯೊವೊಂದು ವೈರಲ್ (Viral Video) ಆಗಿದೆ. ಈ ಘಟನೆಯ ನಂತರ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇನ್ನು ತಾನು ಮಾಡಿದ ಕೃತ್ಯಕ್ಕೆ ಆತ ಕ್ಷಮೆಯಾಚಿಸಿದ್ದಾನೆ. ಹಡ್ಸನ್ ವ್ಯಾಲಿ ಕಮ್ಯುನಿಟಿ ಕಾಲೇಜ್ ಪಂದ್ಯದಲ್ಲಿ ಜುಲ್ಲೊ ಅವನ ತಂಡ ಸೋತ ನಂತರ ಈ ಘಟನೆ ನಡೆದಿದೆಯಂತೆ. ಇನ್ನು ಈ ಘಟನೆಯ ಬಳಿಕ ಶಾಲೆಯವರು ಬ್ಯಾಸ್ಕೆಟ್ ಬಾಲ್ ಕೋಚ್ ಜಿಮ್ ಜುಲ್ಲೊ ಅವನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಸತತ ಎರಡನೇ ವರ್ಷ ಚಾಂಪಿಯನ್‌ಶಿಪ್‌ನಲ್ಲಿ ಸೋತಿದ್ದರಿಂದ ಅಸಮಾಧಾನಗೊಂಡ ಹುಡುಗಿಯರು, ತಮ್ಮ ಎದುರಾಳಿಗಳು ಸಂಭ್ರಮಿಸುವುದನ್ನು ನೋಡುತ್ತಿದ್ದ ಸಂದರ್ಭದಲ್ಲಿ ಜುಲ್ಲೊ, ಹೇಲಿ ಮನ್ರೋ ಎಂಬ ಹುಡುಗಿಯ ಪೋನಿ ಟೈಲ್ ಅನ್ನು ಎಳೆದಿದ್ದಾನೆ.
ಬ್ಯಾಸ್ಕೆಟ್‌ಬಾಲ್ ಕೋಚ್ ಜಿಮ್ ಜುಲ್ಲೊ ವಿದ್ಯಾರ್ಥಿನಿಯೊಬ್ಬಳ ಪೋನಿ ಟೈಲ್ ಎಳೆದ ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ವೈರಲ್ ಆದ ನಂತರ, ತರಬೇತುದಾರ ಕ್ಷಮೆಯಾಚಿಸಿದ್ದಾನೆ. ಜತೆಗೆ ವಿದ್ಯಾರ್ಥಿನಿ ಮಾತ್ರವಲ್ಲ ಅವಳ ಕುಟುಂಬಕ್ಕೆ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾನೆ. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಶಾಲೆ, "ನಾವು ನಮ್ಮ ತರಬೇತುದಾರರನ್ನು ಮತ್ತು ನಮ್ಮ ವಿದ್ಯಾರ್ಥಿ-ಕ್ರೀಡಾಪಟುಗಳಿಗೆ ಗೌರವವನ್ನು ನೀಡುತ್ತೇವೆ. ಆದರೆ ಈ ನಡವಳಿಕೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ನಮ್ಮ ಶಾಲೆಯಲ್ಲಿ ಈ ರೀತಿಯ ನಡವಳಿಕೆಗೆ ಯಾವುದೇ ಸ್ಥಾನವಿಲ್ಲ. ಈ ವ್ಯಕ್ತಿ ಇನ್ನು ಮುಂದೆ ನಾರ್ತ್‌ವಿಲ್ಲೆ ಸೆಂಟ್ರಲ್ ಸ್ಕೂಲ್ ಡಿಸ್ಟ್ರಿಕ್ಟ್‌ಗೆ ತರಬೇತಿ ನೀಡುವುದಿಲ್ಲ" ಎಂದು ತಿಳಿಸಿದೆ.
ಈ ಸುದ್ದಿಯನ್ನೂ ಓದಿ:Viral News: ಈ ಸಂತನಿಗೆ ವಯಸ್ಸು 60... ಕೈಗೊಂಡಿದ್ದು ಬರೋಬ್ಬರಿ 321 ಕಿ.ಮೀ ಯಾತ್ರೆ; ಸಾಲದ್ದಕ್ಕೆ ದಂಡಾವತ್ ಪ್ರಣಾಮ ಬೇರೆ!
ಇದೇ ತರಹದ ಘಟನೆ ಈ ಹಿಂದೆ ಅಮೆರಿಕದ ನ್ಯೂ ಜೆರ್ಸಿಯ ಮೋರಿಸ್ಟೌನ್ ಹೈಸ್ಕೂಲ್‍ನಲ್ಲಿ ಕೂಡ ನಡೆದಿದ್ದು, ಮ್ಯಾಂಡರಿನ್ ಶಿಕ್ಷಕನೊಬ್ಬ ಹೊಸ ವಿದ್ಯಾರ್ಥಿಯ ಮೇಲೆ ಆಕ್ರಮಣಕಾರಿಯಾಗಿ ವರ್ತಿಸಿದ ನಂತರ ರಾಜ್ಯ ಅಧಿಕಾರಿಗಳು ಆತನನ್ನು ಕೆಲಸದಿಂದ ವಜಾಗೊಳಿಸಿದ್ದರು. ಹುಯಿ-ತ್ಸು ಇಸಾಬೆಲ್ಲಾ ಚೆನ್ 2017ರಿಂದ ಮೋರಿಸ್ ಸ್ಕೂಲ್ ಡಿಸ್ಟ್ರಿಕ್ಟ್‌ನಲ್ಲಿ ವಿದೇಶಿ ಭಾಷಾ ಶಿಕ್ಷಕನಾಗಿದ್ದನು. ಈ ಘಟನೆಯ ದಿನ ಚೆನ್ ವಿದ್ಯಾರ್ಥಿಯನ್ನು ತರಗತಿಯ ನಂತರ ಶಾಲೆಯಲ್ಲೇ ಉಳಿಸಿಕೊಂಡಿದ್ದನು ಮತ್ತು ನಂತರ ಅವನ ಊಟದ ಅವಧಿಗೆ ಹೋಗದಂತೆ ತಡೆದು ದೈಹಿಕವಾಗಿ ಹಲ್ಲೆ ಮಾಡಿದ್ದನು ಎಂದು ಆರೋಪಿಸಲಾಗಿದೆ. ಘಟನೆಯ ಸಮಯದಲ್ಲಿ, ಚೆನ್ ಹದಿಹರೆಯದವರ ತೋಳಿಗೆ ಹಲವಾರು ಬಾರಿ ಹೊಡೆದನು. ಹೀಗಾಗಿ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿದೆ.