ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಈ ಸಂತನಿಗೆ ವಯಸ್ಸು 60... ಕೈಗೊಂಡಿದ್ದು ಬರೋಬ್ಬರಿ 321 ಕಿ.ಮೀ ಯಾತ್ರೆ; ಸಾಲದ್ದಕ್ಕೆ ದಂಡಾವತ್‌ ಪ್ರಣಾಮ ಬೇರೆ!

60 ವರ್ಷದ ಸಂತ ಕೇದಾರ ಕಟಾರಾ ಖಾತು ಶ್ಯಾಮ್‍ಗೆ 321 ಕಿ.ಮೀ ಯಾತ್ರೆ ಕೈಗೊಂಡಿದ್ದು, ಅಕ್ಟೋಬರ್ 24, 2023 ರಂದು ಪ್ರಾರಂಭವಾದ ಈ ಪ್ರಯಾಣವು ಏಳು ವರ್ಷಗಳವರೆಗೆ ಮುಂದುವರಿಯಲಿದೆಯಂತೆ. ಇದು ಅಕ್ಟೋಬರ್ 2030 ರಲ್ಲಿ ಕೊನೆಗೊಳ್ಳುತ್ತದೆ ಎನ್ನಲಾಗಿದೆ. ಇಲ್ಲಿಯವರೆಗೆ, ಈತ ಸುಮಾರು 132 ಕಿಲೋಮೀಟರ್ ದೂರವನ್ನು ಕ್ರಮಿಸಿ, ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮನ್ಪುರ್ ಚೌರಾಹಾವನ್ನು ತಲುಪಿದ್ದಾನೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.

60 ವರ್ಷದ ಸಂತನಿಂದ ʼದಂಡಾವತ್ ಪ್ರಣಾಮʼ- ಹಾಗಂದ್ರೇನು?

Profile pavithra Mar 25, 2025 3:34 PM

ಜೈಪುರ: ರಾಜಸ್ಥಾನದ ರೂಪ್ವಾಸ್ ಪಟ್ಟಣದ 60 ವರ್ಷದ ಸಂತನೊಬ್ಬ ಅಸಾಧಾರಣ ಆಧ್ಯಾತ್ಮಿಕ ಪ್ರಯಾಣವನ್ನು ಶುರು ಮಾಡಿದ್ದಾನೆ.ಸನಾತನ ಧರ್ಮದ ಅನುಯಾಯಿ ಸಂತ ಕೇದಾರ ಕಟಾರಾ ದಂಡಾವತ್ ಯಾತ್ರೆಯೊಂದನ್ನು ಶುರುಮಾಡಿದ್ದಾನೆ. ಪ್ರತಿ ಮೀಟರ್‌ಗಳಿಗೆ ನಮಸ್ಕರಿಸುವ ಮೂಲಕ ತೀರ್ಥಯಾತ್ರೆಯನ್ನು ಮಾಡುತ್ತಾ ಸಿಕಾರ್‌ನ ಖಾತು ಶ್ಯಾಮ್‍ನ ಪೂಜ್ಯ ದೇವಾಲಯಕ್ಕೆ ಭೇಟಿ ನೀಡಲಿದ್ದಾನಂತೆ. ಅಕ್ಟೋಬರ್ 24, 2023 ರಂದು ಪ್ರಾರಂಭವಾದ ಈ ಪ್ರಯಾಣವು ಏಳು ವರ್ಷಗಳವರೆಗೆ ಮುಂದುವರಿಯಲಿದೆ. ಇದು ಅಕ್ಟೋಬರ್ 2030ರಲ್ಲಿ ಕೊನೆಗೊಳ್ಳುತ್ತದೆ ಎನ್ನಲಾಗಿದೆ.ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral News)ಆಗಿದೆ. ಪ್ರತಿ ಮೀಟರ್‌ಗೊಮ್ಮೆ ನಮಸ್ಕಾರಗಳನ್ನು ಮಾಡುವ ಮೂಲಕ ಅಂದಾಜು 321 ಕಿಲೋಮೀಟರ್ ದೂರವನ್ನು ಕ್ರಮಿಸುವ ಸಂತ ಕೇದಾರನು ಪ್ರತಿದಿನ 300-400 ಮೀಟರ್ ಪ್ರಯಾಣಿಸುತ್ತಾನಂತೆ. ಪ್ರತಿದಿನ 2,100 ದಂಡಾವತ್‌ ಪ್ರಾಣಗಳನ್ನು (ನಮಸ್ಕಾರ) ಮಾಡುತ್ತಾನೆ. ಅವನು ತನ್ನ ಗಮ್ಯಸ್ಥಾನವನ್ನು ತಲುಪುವ ಹೊತ್ತಿಗೆ, ಆತ 17,65,551 ದಂಡಾವತ್‌ ಪೂರ್ಣಗೊಳಿಸುತ್ತಾನೆ ಎನ್ನಲಾಗಿದೆ.

ಇಲ್ಲಿಯವರೆಗೆ, ಸಂತನು ಸುಮಾರು 132 ಕಿಲೋಮೀಟರ್ ದೂರವನ್ನು ಕ್ರಮಿಸಿ, ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮನ್ಪುರ್ ಚೌರಾಹಾವನ್ನು ತಲುಪಿದ್ದಾನೆ. ಅಲ್ಲಿ ಅವನನ್ನು ಖಾತು ಶ್ಯಾಮ್‍ನ ಹಲವಾರು ಭಕ್ತರು ಭವ್ಯವಾಗಿ ಸ್ವಾಗತಿಸಿದ್ದಾರೆ. ಈಗಾಗಲೇ 7,51,000 ದಂಡಾವತಗಳನ್ನು ಪೂರ್ಣಗೊಳಿಸಿರುವ ಅವನು, ಉಳಿದ 156 ಕಿಲೋಮೀಟರ್ ದೂರವನ್ನು ಕ್ರಮಿಸಲು ಇನ್ನೂ ಆರು ವರ್ಷಗಳ ನಿರಂತರ ಸಮರ್ಪಣೆ ಹಾಗೂ ಇನ್ನೂ 8,81,000 ದಂಡಾವತ್‍ಗಳ ಅಗತ್ಯವಿದೆ ಎನ್ನಲಾಗಿದೆ.

ಸಂತ ಕೇದಾರ ಕಟಾರಾಗೆ ಈ ಪ್ರಯಾಣವು ಕೇವಲ ಭಕ್ತಿಯ ಕಾರ್ಯ ಮಾತ್ರವಲ್ಲ ಸನಾತನ ಧರ್ಮ, ಹಿಂದೂ ದೇವತೆಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಮೌಲ್ಯಗಳನ್ನು ಉತ್ತೇಜಿಸುವ ಧ್ಯೇಯವಾಗಿದೆ. ರಾಷ್ಟ್ರೀಯ ಸೇವೆ, ಅರಣ್ಯ ಮತ್ತು ಗೋರಕ್ಷಣೆ, ವಿಶ್ವ ಶಾಂತಿ, ಮಾನವ ಕಲ್ಯಾಣ, ಮಹಿಳಾ ಸಬಲೀಕರಣ, ಆರೋಗ್ಯ ಪ್ರಜ್ಞೆ, ಸ್ವಚ್ಛತೆ ಮತ್ತು ವಿಶ್ವ ಭ್ರಾತೃತ್ವದ ಬಗ್ಗೆ ಜಾಗೃತಿ ಮೂಡಿಸಲು ಅವನು ಹೆಚ್ಚು ಒತ್ತು ನೀಡುತ್ತಾನೆ.

ಇದು ಸಂತ ಕೇದಾರರ ಮೊದಲ ತೀರ್ಥಯಾತ್ರೆಯಲ್ಲ. ಇದು ಖಾತು ಶ್ಯಾಮ್‍ಗೆ ಅವರ 13ನೇ ಕನಕ ದಂಡಾವತ್ ಯಾತ್ರೆಯಂತೆ. ಸಂತ ಕೇದಾರ್ ಮೋಟಾರ್‌ಸೈಕಲ್‌ವೊಂದನ್ನು ಚಲಿಸುವ ರಥವಾಗಿ ಪರಿವರ್ತಿಸಿದ್ದಾನೆ. ಈ ರಥವು ಅವನ ಆಶ್ರಯ ತಾಣವಾಗಿದೆಯಂತೆ. ಅಲ್ಲಿ ಅವನು ನಮಸ್ಕಾರಗಳ ನಂತರ ವಿಶ್ರಾಂತಿ ಪಡೆಯುತ್ತಾನೆ.

ಈ ಸುದ್ದಿಯನ್ನೂ ಓದಿ:Viral News: ಚೀನಾದಲ್ಲೊಬ್ಬಳು ಯಂಗ್‌ ಅಜ್ಜಿ; ವಯಸ್ಸು ಕೇಳಿದ್ರೆ ಶಾಕ್‌ ಆಗ್ತೀರಿ!

ಸಂತ ಕೇ ರಾಜಸ್ಥಾನದ ರೂಪ್ವಾಸ್ ಪಟ್ಟಣದ 60 ವರ್ಷದ ಸಂತನೊಬ್ಬ ಅಸಾಧಾರಣ ಆಧ್ಯಾತ್ಮಿಕ ಪ್ರಯಾಣವನ್ನು ಶುರು ಮಾಡಿದ್ದಾನೆ. ಸನಾತನ ಧರ್ಮದ ಅನುಯಾಯಿ ಸಂತ ಕೇದಾರ ಕಟಾರಾ ದಂಡಾವತ್ ಯಾತ್ರೆಯೊಂದನ್ನು ಶುರುಮಾಡಿದ್ದಾನೆ. ಪ್ರತಿ ಮೀಟರ್‌ಗಳಿಗೆ ನಮಸ್ಕರಿಸುವ ಮೂಲಕ ತೀರ್ಥಯಾತ್ರೆಯನ್ನು ಮಾಡುತ್ತಾ ಸಿಕಾರ್‌ನ ಖಾತು ಶ್ಯಾಮ್‍ನ ಪೂಜ್ಯ ದೇವಾಲಯಕ್ಕೆ ಭೇಟಿ ನೀಡಲಿದ್ದಾನಂತೆ. ಅಕ್ಟೋಬರ್ 24, 2023 ರಂದು ಪ್ರಾರಂಭವಾದ ಈ ಪ್ರಯಾಣವು ಏಳು ವರ್ಷಗಳವರೆಗೆ ಮುಂದುವರಿಯಲಿದೆ. ಇದು ಅಕ್ಟೋಬರ್ 2030ರಲ್ಲಿ ಕೊನೆಗೊಳ್ಳುತ್ತದೆ ಎನ್ನಲಾಗಿದೆ.ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral News)ಆಗಿದೆ.