ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗೋಲ್ ಗಪ್ಪಾ ಸವಿದ ಬ್ಯಾಟ್‌ಮ್ಯಾನ್; 'ಸೂಪರ್ ಹೀರೋಗೆ ಖಾರಾ ಜಾಸ್ತಿ ಆಯ್ತಾ ಎಂದ ನೆಟ್ಟಿಗರು

Viral Video: ಇತ್ತೀಚೆಗೆ ಬ್ಯಾಟ್‌ಮ್ಯಾನ್‌ನಂತೆ ವೇಷಧಾರಿ ಮಾಡಿದ್ದ ವ್ಯಕ್ತಿ ಸ್ಥಳೀಯ ಸ್ಟಾಲ್‌ನಲ್ಲಿ ಪಾನಿಪುರಿ ತಿನ್ನುತ್ತಿರುವುದನ್ನು ತೋರಿಸುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು ಸೋಷಿಯಲ್ ಮೀಡಿಯಾ ಬಳಕೆದಾರರನ್ನು ನಗುವಂತೆ ಮಾಡಿದೆ. ದೆಹಲಿಯ ರಸ್ತೆ ಬದಿಯ ಸ್ಟಾಲ್ ಒಂದರಲ್ಲಿ ಈ ದೃಶ್ಯ ಕಂಡು ಬಂದಿದ್ದು ಹನ್ನೊಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಗಳಿಸಿದೆ.

ಗೋಲ್ ಗಪ್ಪಾ ತಿಂದ ಬ್ಯಾಟ್‌ಮ್ಯಾನ್

ದೆಹಲಿ,ಜ.19: ವಿಶ್ವದ ಅತ್ಯಂತ ಪ್ರಸಿದ್ಧ ಸೂಪರ್‌ ಹೀರೋಗಳಲ್ಲಿ ಬ್ಯಾಟ್ ಮ್ಯಾನ್ ಕೂಡ‌ ಒಬ್ಬರು. ಸಾಮಾನ್ಯವಾಗಿ ಚಲನ ಚಿತ್ರಗಳು, ಕಾಮಿಕ್ಸ್ ಮತ್ತು ಸರಣಿಗಳಲ್ಲಿ‌ ಖಳನಾಯಕರೊಂದಿಗೆ ಹೋರಾಡುವುದು, ಅನ್ಯಾಯದ ವಿರುದ್ಧ ಹೋರಾಡುತ್ತ ಅಪರಾಧಿಗಳನ್ನು ಬೆನ್ನಟ್ಟುವ ಕಾರ್ಯ ಮಾಡುವುದರಲ್ಲಿ ಇವರು ಪರಿಣಿತರು. ಆದ್ರೆ ಇದೇ‌ ಬ್ಯಾಟ್‌ ಮ್ಯಾನ್ ಎಲ್ಲಾದರೂ ರಸ್ತೆ ಬದಿಯ ಗಾಡಿಯ ಮುಂದೆ ನಿಂತು ಪಾನಿಪುರಿ ತಿನ್ನುತ್ತಾರೆ ಎನ್ನುವುದನ್ನು ನೀವು ಯೋಚನೆ ಮಾಡಿದ್ದೀರಾ? ಇತ್ತೀಚೆಗೆ ಇಂತಹುದೇ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿದೆ.

ಇತ್ತೀಚೆಗೆ ಬ್ಯಾಟ್‌ಮ್ಯಾನ್‌ನಂತೆ ವೇಷಧಾರಿ ಮಾಡಿದ್ದ ವ್ಯಕ್ತಿ ಸ್ಥಳೀಯ ಸ್ಟಾಲ್‌ನಲ್ಲಿ ಪಾನಿಪುರಿ ತಿನ್ನುತ್ತಿರುವುದನ್ನು ತೋರಿಸುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು ಸೋಷಿಯಲ್ ಮೀಡಿಯಾ ಬಳಕೆದಾರರನ್ನು ನಗುವಂತೆ ಮಾಡಿದೆ. ದೆಹಲಿಯ ರಸ್ತೆ ಬದಿಯ ಸ್ಟಾಲ್ ಒಂದರಲ್ಲಿ ಈ ದೃಶ್ಯ ಕಂಡು ಬಂದಿದ್ದು ಹನ್ನೊಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಗಳಿಸಿದೆ.

ವಿಡಿಯೋ ನೋಡಿ:



ವಿಡಿಯೋದ ಆರಂಭದಲ್ಲಿ ಪಾನಿಪುರಿ ವ್ಯಾಪಾರಿಯೊಬ್ಬರು ಗೋಲ್ ಗಪ್ಪಾ ತಯಾರು ಮಾಡುತ್ತಿರುತ್ತಾರೆ. ಆಗ ಅಲ್ಲಿ ಸಾಕ್ಷಾತ್ 'ಬ್ಯಾಟ್‌ಮ್ಯಾನ್' ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಗಂಭೀರವಾದ ಧ್ವನಿಯಲ್ಲೇ ವ್ಯಾಪಾರಿಗೆ "ಖಾರ ಕಮ್ಮಿ ಇರಲಿ ಸಿಹಿ ಜಾಸ್ತಿ ಹಾಕಿ" ಎಂದು ಹೇಳುತ್ತಾನೆ.ಈ ಮಾತು ಕೇಳುತ್ತಿದ್ದಂತೆ ಮಾರಾಟಗಾರನು ಪಾನಿಪುರಿ ತಯಾರಿಸುವಾಗ ನಗುತ್ತಿ ರುವಂತೆ ಕಾಣುತ್ತಾನೆ. ಜಗತ್ತನ್ನೇ ಎಲ್ಲರಿಂದಲೂ ರಕ್ಷಿಸುವ ಸೂಪರ್ ಹೀರೋ, ಪಾನಿಪುರಿ ಖಾರಕ್ಕೆ ಹೆದರಿ 'ಸ್ವೀಟ್' ಕೇಳಿದ್ದು ನೋಡುಗರಿಗೆ ಭಾರಿ ತಮಾಷೆ ಅನಿಸಿದೆ.

Viral News: ಮುಸ್ಲಿಂ ಪತ್ರಕರ್ತನ ಮನೆ ನೆಲಸಮ; ತನ್ನ ಭೂಮಿಯನ್ನೇ ಗಿಫ್ಟ್‌ ಕೊಟ್ಟ ಹಿಂದೂ ವ್ಯಕ್ತಿ!

ನಂತರ ಬ್ಯಾಟ್‌ಮ್ಯಾನ್ ಪಾನಿಪುರಿ ತಿನ್ನುವುದು ಕಂಡು ಬರುತ್ತದೆ. ಅನೇಕ ಜನರಂತೆ, ಆತನು ಪಾನಿಪುರಿಯನ್ನು ಒಂದೇ ತುತ್ತಿನಲ್ಲಿ ಮುಗಿಸಲು ಪ್ರಯತ್ನ ಪಡುತ್ತಾನೆ. ಸದ್ಯ ಸೂಪರ್‌ ಹೀರೋ ಪಾನಿಪುರಿ ತಿನ್ನುವ ಹರಸಾಹಸ ಕೂಡ ವಿಡಿಯೋದಲ್ಲಿದೆ. ಗೋಥಮ್ ನಗರದ ಪಾನಿಪುರಿ ಎಂದು ಈ ವಿಡಿಯೊಗೆ ಶಿರ್ಷಿಕೆ ನೀಡಲಾಗಿದೆ. ನೆಟ್ಟಿಗರು ಕೂಡ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಒಬ್ಬರು ಜಸ್ಟಿಸ್ ಫಾರ್ ಪಾನಿಪುರಿ.. ಒಂದು ಸುಕ್ಕಾ ಪುರಿ, ಒಂದು ಮೀಠಾ... ಮತ್ತು ನ್ಯಾಯಕ್ಕಾಗಿ ಒಂದು ಪುರಿ ಎಂದು ಬರೆದಿದ್ದಾರೆ. ಮತ್ತೊಬ್ಬರು ಗೋಥಮ್‌ನ ರಕ್ಷಕನಿಗೂ ಸಹ ಒಮ್ಮೊಮ್ಮೆ ಪಾನಿ-ಪುರಿಗಾಗಿ ವಿರಾಮ ಬೇಕಾಗುತ್ತದೆ ಎಂದಿದ್ದಾರೆ. ಬ್ಯಾಟ್‌ಮ್ಯಾನ್ ಸೂಟ್ ಧರಿಸಿದ ವ್ಯಕ್ತಿಯ ಗಂಭೀರತೆ ಮತ್ತು ಆತ ಪಾನಿಪುರಿ ಸವಿಯುತ್ತಿದ್ದ ಈ ವಿಡಿಯೊ‌ ಇಂಟರ್ನೆಟ್‌ನಲ್ಲಿ ಸೆನ್ಸೇಷನ್ ಮಾಡಿದೆ.