ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಾಕಿಂಗ್ ಹೋಗಿದ್ದವರ ಬೆನ್ನಟ್ಟಿದ ಕರಡಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ಉತ್ತರಾಖಂಡದ ರಿಷಿಕೇಶದಲ್ಲಿ ಜನ ಸಂಚಾರ ಮಾಡುವ ಪ್ರದೇಶದಲ್ಲೇ ಕಾಡು ಕರಡಿಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಶ್ಯಾಮಪುರ ಹಾತ್ ಬಳಿ ಮನೆಗೆ ಮರಳುತ್ತಿದ್ದ ಇಬ್ಬರು ಪುರುಷ ರನ್ನು ಕರಡಿಯೊಂದು ಬೆನ್ನಟ್ಟಿದ ದೃಶ್ಯ ಕಂಡುಬಂದಿದೆ. ಇದರ ವಿಡಿಯೋ ಈಗ ವೈರಲ್ ಆಗಿದೆ

ವಾಕಿಂಗ್ ಹೋಗಿದ್ದವರ ಬೆನ್ನಟ್ಟಿದ ಕರಡಿ

ರಿಷಿಕೇಶ,ಡಿ.2: ಇತ್ತೀಚೆಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಆದರಲ್ಲೂಆಹಾರವನ್ನು ಅರಸಿ ಗ್ರಾಮಗಳ ಕಡೆಗೆ ಕಾಡು ಪ್ರಾಣಿಗಳು ಬರುತ್ತಿವೆ. ಇತ್ತೀಚೆಗೆ ನರಭಕ್ಷಕ ಪ್ರಾಣಿಗಳಾದ ಆನೆ, ಚಿರತೆ ದಾಳಿಯಿಂದ ಪ್ರಾಣ ಕಳೆದುಕೊಂಡಿರುವ ಘಟನೆಗಳು ಕೂಡ ನಡೆದಿವೆ.‌ ಇದೀಗ ಉತ್ತರಾಖಂಡದ ರಿಷಿಕೇಶದಲ್ಲಿ ಜನ ಸಂಚಾರ ಮಾಡುವ ಪ್ರದೇಶದಲ್ಲೇ ಕಾಡು ಕರಡಿಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಶ್ಯಾಮಪುರ ಹಾತ್ ಬಳಿ ಮನೆಗೆ (Viral Video) ಮರಳುತ್ತಿದ್ದ ಇಬ್ಬರು ಪುರುಷರನ್ನು ಕರಡಿಯೊಂದು ಬೆನ್ನಟ್ಟಿದ ದೃಶ್ಯ ಕಂಡುಬಂದಿದೆ. ಇದರ ವಿಡಿಯೋ ಈಗ ವೈರಲ್ ಆಗಿದೆ.

ಜನಸಂದಣಿ ಇರುವ ಶ್ಯಾಮಪುರ ಪ್ರದೇಶದಲ್ಲಿ ಕಾಡು ಕರಡಿಯೊಂದು ಓಡಾಡುತ್ತಿರುವುದನ್ನು ನೋಡಿ ಋಷಿಕೇಶ ನಿವಾಸಿಗಳು ಭಯಭೀತರಾಗಿದ್ದಾರೆ. ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ನಡೆದು ಕೊಂಡು ಹೋಗುತ್ತಿದ್ದಾಗ ದಿಢೀರ್ ಎಂದು ಹೊರಬಂದ ಕರಡಿಯೊಂದು ಅವರ ಮೇಲೆ ದಾಳಿಗೆ ಮುಂದಾಗಿದೆ. ಅದರಲ್ಲೂ ಅಲ್ಲಿಯೇ ಇದ್ದ ಹಸುಗಳು ಅಪಾಯವನ್ನು ಮೊದಲೇ ಅರಿತು ಓಡಲು ಮುಂದಾಗಿದೆ ಕೂಡಲೇ ಎಚ್ಚೆತ್ತುಕೊಂಡ ಆ ಇಬ್ಬರು ವ್ಯಕ್ತಿಗಳು ಪ್ರಾಣಭಯದಿಂದ ಓಡಿ ಪಾರಾಗಿದ್ದಾರೆ.

Viral Video: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ರಂಪಾಟ; ಮಾಡಿದ ಸಬ್ ಇನ್ಸ್‌ಪೆಕ್ಟರ್ ಬಂಧನ, ವಿಡಿಯೋ ನೋಡಿ

ವಿಡಿಯೋ ನೋಡಿ:



ನಂತರ ಕರಡಿಯು ಹಲವಾರು ವಸತಿ ರಸ್ತೆಗಳಲ್ಲಿ ಅಲೆದಾಡುತ್ತಿರುವುದು ಕಂಡುಬಂದಿದ್ದು, ಅಲ್ಲಿನ ನೆರೆ ಹೊರೆಯವರು, ಅಂಗಡಿಯವರು ಮತ್ತು ಸಂಜೆ ಪ್ರಯಾಣಿಕರಲ್ಲಿ ಭಯ ಹುಟ್ಟಿಸಿದೆ.ಈ ಕರಡಿಯು ಆಹಾರ ಮತ್ತು ನೀರನ್ನು ಹುಡುಕುತ್ತಾ ಸಮೀಪದ ರಾಷ್ಟ್ರೀಯ ಉದ್ಯಾನವನದಿಂದ ನಾಡಿಗೆ ಬಂದಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಇಂತಹ ಕಾಡು ಪ್ರಾಣಿಗಳ ಬಗ್ಗೆ ಎಷ್ಟು ಜಾಗೃತಿ ವಹಿಸಿದರೂ ಕಡಿಮೆಯೆ ಎಂದು ಬರೆದು ಕೊಂಡಿದ್ದಾರೆ.