ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೈಕಾಲು ನೆಟ್ಟಗಿದ್ದರೂ, ಆರೋಗ್ಯವಂತನಾಗಿದ್ದರೂ ಪಾರ್ಶ್ವವಾಯು ಪೀಡಿತನಾಗಿ ನಟಿಸಿ ಭಿಕ್ಷಾಟನೆ: ಇಂಜಕ್ಷನ್ ಹೆಸರು ಕೇಳುತ್ತಿದ್ದಂತೆ ಸ್ಥಳದಿಂದ ಪರಾರಿ

Viral News: ಪಾರ್ಶ್ವವಾಯು ಪೀಡಿತನಂತೆ ನಟಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಚಿಕಿತ್ಸೆಗಾಗಿ ಇಂಜೆಕ್ಷನ್ ನೀಡಲು ಮುಂದಾದಾಗ ಎದ್ದು ಓಡಿಹೋಗಿದ್ದಾನೆ. ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಈ ವ್ಯಕ್ತಿ ಮತ್ತು ಆತನ ಸ್ಥಿತಿಯ ಬಗ್ಗೆ ಪ್ರಶ್ನಿಸಲು ನಿಂತ ಮತ್ತೊಬ್ಬ ವ್ಯಕ್ತಿಯ ನಡುವೆ ನಡೆದ ಅನಿರೀಕ್ಷಿತ ಸಂಭಾಷಣೆಯನ್ನು ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಪಾರ್ಶ್ವವಾಯು ಪೀಡಿತನಂತೆ ನಟಿಸಿ ಭಿಕ್ಷೆ ಎತ್ತಿದ ವ್ಯಕ್ತಿ

ನವದೆಹಲಿ, ಅ. 27: ಸಮಾಜದಲ್ಲಿ 2 ವರ್ಗದ ಜನರಿರುತ್ತಾರೆ. ಒಂದು ವರ್ಗ ಕಷ್ಟಪಟ್ಟು ದುಡಿದು ಹಣ ಸಂಪಾದನೆ ಮಾಡಿದರೆ, ಇನ್ನೊಂದು ವರ್ಗ ಕಳವು ಮಾಡಿ, ದೈಹಿಕವಾಗಿ ಶಕ್ತವಾಗಿದ್ದರೂ ಭಿಕ್ಷೆ ಬೇಡುವುದು ಸೇರಿ ಸುಲಭ ಮಾರ್ಗ ತುಳಿಯುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಲ್ಲೊಂದು ಘಟನೆ ನಡೆದಿದ್ದು, ವಿಡಿಯೊ ವೈರಲ್ (Viral News) ಆಗಿದೆ. ಪಾರ್ಶ್ವವಾಯು ಪೀಡಿತನಂತೆ ನಾಟಕವಾಡಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯೊಬ್ಬ, ಇಂಜಕ್ಷನ್ ನೀಡಲು ಬಂದ ತಕ್ಷಣವೇ ಎದ್ದು ಓಡಿಹೋಗಿದ್ದಾನೆ.

ಪಾರ್ಶ್ವವಾಯು ಪೀಡಿತನಂತೆ ನಟಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಚಿಕಿತ್ಸೆಗಾಗಿ ಇಂಜೆಕ್ಷನ್ ನೀಡಲು ಮುಂದಾದಾಗ ಆತ ಎದ್ದು ಓಡಿಹೋಗಿದ್ದಾನೆ. ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಈ ವ್ಯಕ್ತಿ ಮತ್ತು ಆತನ ಸ್ಥಿತಿಯ ಬಗ್ಗೆ ಪ್ರಶ್ನಿಸಲು ನಿಂತ ಮತ್ತೊಬ್ಬ ವ್ಯಕ್ತಿಯ ನಡುವೆ ನಡೆದ ಅನಿರೀಕ್ಷಿತ ಸಂಭಾಷಣೆಯ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ವಿಡಿಯೊ ನೋಡಿ:



ರಸ್ತೆಯಲ್ಲಿ ವ್ಯಕ್ತಿಯೊಬ್ಬ ಪಾರ್ಶ್ವವಾಯು ಪೀಡಿತನಂತೆ ನಟಿಸುತ್ತ ಭೀಕ್ಷೆ ಬೇಡುತ್ತಿದ್ದ. ಆಗ ಅಲ್ಲೇ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬ ಆತನ ಬಳಿ ಬಂದು ಆರೋಗ್ಯ ಸಮಸ್ಯೆಯ ಬಗ್ಗೆ ಪ್ರಶ್ನಿಸಲು ಪ್ರಾರಂಭಿಸಿದ್ದಾನೆ. ಈ ಕಾಯಿಲೆಗೆ ಹೇಗೆ ಒಳಗಾಗಿದ್ದೀರಿ? ಆಸ್ಪತ್ರೆಗೆ ತೋರಿಸಿದ್ದೀರಾ? ಎಂದು ಪ್ರಶ್ನಿಸಿದಾಗ ಆ ಭಿಕ್ಷುಕ ಸರಿಯಾದ ಉತ್ತರ ನೀಡಲಿಲ್ಲ.

ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ

ಭಿಕ್ಷುಕ ಸುಳ್ಳು ಹೇಳುತ್ತಿದ್ದಾನೆ ಎಂಬ ಅನುಮಾನ ಬಂದ ತಕ್ಷಣ, ವಿಡಿಯೊ ರೆಕಾರ್ಡ್ ಮಾಡಿದ ವ್ಯಕ್ತಿಯು ಇಂಜೆಕ್ಷನ್ ಅನ್ನು ಹೊರತೆಗೆದು ಭಿಕ್ಷುಕನಿಗೆ ಚೇತರಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಸೂಚಿಸಿದಾಗ ಅನಿರೀಕ್ಷಿತ ತಿರುವು ಲಭಿಸಿತು. ಇಂಜಕ್ಷನ್ ಚುಚ್ಚಲು ಬರುತ್ತಿದ್ದಂತೆಯೇ ಅಲ್ಲಿಯವರೆಗೆ ಏಳಲೂ ಆಗದಂತೆ ನಟಿಸುತ್ತಿದ್ದ ಭಿಕ್ಷುಕ ಕ್ಷಣಾರ್ಧದಲ್ಲಿ ಎದ್ದು ನಿಂತು ಅತಿ ವೇಗವಾಗಿ ಓಡಿ ಪರಾರಿಯಾಗಿದ್ದಾನೆ. ಆತನ ಈ ದಿಢೀರ್ ಓಟವನ್ನು ಕಂಡು ವಿಡಿಯೋ ಮಾಡುತ್ತಿದ್ದ ವ್ಯಕ್ತಿಯೂ ಬೆರಗಾಗಿ ಹೋಗಿದ್ದಾನೆ.

ಈ ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಬಳಕೆದಾರರೊಬ್ಬರು ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಂದು ಭೀಕ್ಷೆ ಬೇಡಿ ಹಣ ಮಾಡುವುದೇ ಒಂದು ದೊಡ್ಡ ದಂದೆಯಾಗಿದೆ ಎಂದಿದ್ದಾರೆ.