ಚಂಡೀಗಢ, ಜ.10: ಉತ್ತರ ಭಾರತವನ್ನು ತೀವ್ರ ಶೀತಗಾಳಿ ಆವರಿಸುತ್ತಿದ್ದಂತೆ, ಬಡವರು, ನಿರಾಶ್ರಿತರು ಮತ್ತು ನಿರ್ಗತಿಕರ ಬದುಕು ಕಠಿಣವಾಗಿದೆ. ಅನೇಕರು ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಈ ನಡುವೆ ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ (Punjab's Pathankot) ಕರುಣಾಮಯಿ ಭಿಕ್ಷುಕರೊಬ್ಬರ (beggar) ಕಥೆ ಹೊರಹೊಮ್ಮಿದೆ. ಭಿಕ್ಷಾಟನೆಯಿಂದ ಜೀವನ ನಡೆಸುವ ವ್ಯಕ್ತಿಯೊಬ್ಬರು ಅಗತ್ಯವಿರುವವರಿಗೆ ಕಂಬಳಿಗಳನ್ನು ವಿತರಿಸುವ ಮೂಲಕ ಇನ್ನೊಬ್ಬರ ಬಾಳಲ್ಲಿ ಬೆಳಕಾಗಿದ್ದಾರೆ (viral news).
ರಾಜು ಎಂಬ ವ್ಯಕ್ತಿಯು, ಬಡ ಜನರು ಕೊರೆಯುವ ಚಳಿಯನ್ನು ನಿಭಾಯಿಸಲು ಸಹಾಯ ಮಾಡುವುದಕ್ಕಾಗಿ ಕಂಬಳಿ ವಿತರಿಸಿದ್ದಾರೆ. ತನಗಾಗಿ ಬಹಳ ಕಡಿಮೆ ಹಣವಿದ್ದರೂ, ರಾಜು ಅವರು ನಿರಾಶ್ರಿತರು ಮತ್ತು ನಿರ್ಗತಿಕರಿಗೆ ಸುಮಾರು 500 ಕಂಬಳಿಗಳನ್ನು ವಿತರಿಸಿದ್ದಾರೆ. ಅವರ ನಿಸ್ವಾರ್ಥ ಕಾರ್ಯವು ಅನೇಕರ ಹೃದಯಗಳನ್ನು ತಟ್ಟಿದೆ. ತನಗೆ ಕಷ್ಟವಿದ್ದರೂ ಮಾನವೀಯತೆ ತೋರಿದ ಅವರ ಕ್ರಮಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
Viral News: ಪತಿ, 6 ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿ ಹೋದ ಮಹಿಳೆ!
ಅಂದಹಾಗೆ, ರಾಜು ಅವರ ಸಮಾಜ ಸೇವೆ ಹೊಸದೇನಲ್ಲ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲೂ ಅವರು ಅನೇಕರಿಗೆ ನೆರವಾಗಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ರಾಜು ಅವರ ಮಾನವೀಯತೆಯ ಸಮರ್ಪಣೆಯನ್ನು ಶ್ಲಾಘಿಸಿದ್ದರು. ಸಹಾಯ ಮಾಡಲು ಶ್ರೀಮಂತರೇ ಆಗಬೇಕೆಂದಿಲ್ಲ ಎಂಬುದನ್ನು ರಾಜು ಅವರ ಮಾನವೀಯ ಕಾರ್ಯಗಳನ್ನು ನೋಡಿ ಕಲಿಯಬಹುದು.
ಕಂಬಳಿಗಳನ್ನು ಕೊಡುವುದಕ್ಕಾಗಿ ಸಣ್ಣ ಮೊತ್ತವನ್ನು ಭಿಕ್ಷೆ ಬೇಡಿದ್ದಾರೆ. ಕೆಲವೊಮ್ಮೆ ಕೇವಲ 10 ರೂ.ಗಳನ್ನು ಸಂಗ್ರಹಿಸುತ್ತಿದ್ದೆ ಎಂದು ಹೇಳಿದರು. ಅಗತ್ಯವಿರುವ ಯಾರಿಗಾದರೂ ಸಹಾಯ ಮಾಡುವ ಕರ್ತವ್ಯವನ್ನು ದೇವರು ತನಗೆ ನೀಡಿದ್ದಾನೆ ಎಂದು ಅವರು ವಿನಮ್ರವಾಗಿ ಹೇಳಿದರು.
ಇನ್ನು ರಾಜು ಅವರಿಗೆ ವಾಸಿಸಲು ಸ್ಥಳವಿಲ್ಲದ ಕಾರಣ, ಶಾಶ್ವತ ಮನೆಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸ್ಥಳೀಯ ನಿವಾಸಿಗಳು ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದು, ಸಮಾಜವು ಅವರಿಂದ ಕಲಿಯಬೇಕು ಮತ್ತು ಬಡವರಿಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಹೇಳಿದ್ದಾರೆ.
ಐಫೋನ್ 16 ಪ್ರೊ ಖರೀದಿಸಿದ್ದ ಭಿಕ್ಷುಕ
ಕಳೆದ ವರ್ಷ, ಭಿಕ್ಷುಕನೊಬ್ಬ ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿಸಿದ್ದ ಸುದ್ದಿ ಭಾರಿ ವೈರಲ್ ಆಗಿತ್ತು. ಹಣವಂತರು, ಸ್ಥಿತಿವಂತರು ಮಾತ್ರ ಇಂತಹ ವಸ್ತುಗಳನ್ನು ಖರೀದಿಸಲು ಸಾಧ್ಯ ಎಂಬ ನಂಬಿಕೆಗಳನ್ನೆಲ್ಲ ಹುಸಿ ಮಾಡಿದ್ದ. ರಾಜಸ್ಥಾನದ ಅಜ್ಮೇರ್‌ನಲ್ಲಿ ಈ ಘಟನೆ ನಡೆದಿತ್ತು. ಭಿಕ್ಷುಕ ಫುಲ್ ಕ್ಯಾಶ್ ನೀಡಿ ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿಸಿದ್ದ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಾಮಾನ್ಯ ಜನರು ಆತನ ಕೈಯಲ್ಲಿರುವ ಫೋನ್ ನೋಡಿ ಶಾಕ್ ಆಗಿದ್ದರು.
ಇದಕ್ಕೂ ಹಿಂದೆ ಮತ್ತೊಂದು ಘಟನೆಯಲ್ಲಿ, ಮಧ್ಯಪ್ರದೇಶದಲ್ಲಿ ಒಬ್ಬ ಭಿಕ್ಷುಕ ತನ್ನ ಪತ್ನಿಗೆ ಉಡುಗೊರೆಯಾಗಿ 90 ಸಾವಿರ ರೂ. ಮೌಲ್ಯದ ಮೊಪೆಡ್ ಖರೀದಿಸಿ, ಅದನ್ನು ಗಿಫ್ಟ್ ಆಗಿ ಕೊಟ್ಟಿದ್ದ. ಛಿಂದ್ವಾರದ ಅಮರವಾರ ಗ್ರಾಮದ ಸಂತೋಷ್ ಸಾಹು ಎಂಬಾತ ತನ್ನ ಪತ್ನಿ ಮುನ್ನಿಗೆ ಮೊಪೆಡ್ ಖರೀದಿಸಿದ್ದ. ಈತ ಪತ್ನಿಗೆ ವಾಹನ ಖರೀದಿಸಲು ಕಳೆದ ನಾಲ್ಕು ವರ್ಷಗಳಿಂದ ಹಣ ಸಂಗ್ರಹಿಸಿದ್ದ ಎನ್ನಲಾಗಿದೆ.