ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಲಕ್ಷ ಲಕ್ಷ ಹೊತ್ತೊಯ್ಯುತ್ತಿದ್ದ ಭಿಕ್ಷುಕ ಅಪಘಾತದಲ್ಲಿ ಸಾವು, ಈತನ ಬಳಿ ಇದ್ದ ಹಣವೆಷ್ಟು ಗೊತ್ತೇ?

ನಿಷೇಧಿತ 2,000 ರೂ. ನೋಟುಗಳು, ವಿದೇಶಿ ಕರೆನ್ಸಿಗಳು ಸೇರಿದಂತೆ 4 ಲಕ್ಷ ರೂ. ಗೂ ಅಧಿಕ ಹಣ ಆಲಪ್ಪುಳದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಭಿಕ್ಷುಕನಲ್ಲಿ ಪತ್ತೆಯಾಗಿದೆ. ಚಾರುಮ್ಮೂಟ್ ಮತ್ತು ಆಲಪ್ಪುಳ ಪ್ರದೇಶದಲ್ಲಿ ಆತ ಭಿಕ್ಷೆ ಬೇಡುತ್ತಿದ್ದ ಎನ್ನಲಾಗಿದೆ. ಅಪಘಾತದ ಬಳಿಕ ಸ್ಥಳೀಯರೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಲಕ್ಷಾಧಿಪತಿಯಾಗಿದ್ದ ಭಿಕ್ಷುಕ ಅಪಘಾತದಲ್ಲಿ ಸಾವು

(ಸಂಗ್ರಹ ಚಿತ್ರ) -

ತಿರುವನಂತಪುರಂ: ರಸ್ತೆ ಅಪಘಾತದಲ್ಲಿ (road accident) ಸಾವನ್ನಪ್ಪಿದ ಭಿಕ್ಷುಕನ ಬಳಿ 4 ಲಕ್ಷ ರೂ. ಗೂ ಅಧಿಕ ಹಣ ಪತ್ತೆಯಾಗಿರುವ ಘಟನೆ ಕೇರಳದಲ್ಲಿ (kerala) ನಡೆದಿದೆ. ಚಾರುಮ್ಮೂಟ್ ಮತ್ತು ಆಲಪ್ಪುಳ ಬಳಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕನೊಬ್ಬನಿಗೆ (beggar) ಸೋಮವಾರ ರಾತ್ರಿ ಅಪಘಾತವಾಗಿದೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆತನ ಬಳಿ ಇದ್ದ ಕಂಟೇನರ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರಲ್ಲಿ ನಿಷೇಧಿತ 2,000 ರೂ. ನೋಟುಗಳು, ವಿದೇಶಿ ಕರೆನ್ಸಿಗಳು ಸೇರಿದಂತೆ 4.5 ಲಕ್ಷ ರೂ. ಗೂ ಹೆಚ್ಚು ಹಣ ಪತ್ತೆಯಾಗಿದೆ.

ಭಿಕ್ಷಕ ತನ್ನ ಹೆಸರು ಅನಿಲ್ ಕಿಶೋರ್ ಎಂಬುದಾಗಿ ಹೇಳಿದ್ದ. ಬಳಿಕ ಯಾವುದೇ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸೋಮವಾರ ರಾತ್ರಿ ಅಪಘಾತವಾಗಿದ್ದು, ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆತನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಬಳಿಕ ಆತನ ಬಳಿ ಇದ್ದ ಕಂಟೇನರ್ ಅನ್ನು ಪೊಲೀಸರು ವಶಕ್ಕೆ ಪಡೆದರು.

ಚಲಿಸುವ ಕಾರಿನಲ್ಲಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ; ಪೊಲೀಸ್ ಅಧಿಕಾರಿಯಿಂದಲೇ ರಾಕ್ಷಸಿ ಕೃತ್ಯ

ಸ್ಥಳೀಯ ಪಂಚಾಯತ್ ಸದಸ್ಯ ಫಿಲಿಪ್ ಉಮ್ಮನ್ ಸಮ್ಮುಖದಲ್ಲಿ ಕಂಟೇನರ್ ಅನ್ನು ತೆರೆಯಲಾಗಿದೆ. ಇದರಲ್ಲಿ ಒಟ್ಟು 4.5 ಲಕ್ಷ ರೂ.ಗಳಿಗಿಂತ ಹೆಚ್ಚು ಹಣ ನಗದು ರೂಪದಲ್ಲಿ ಪತ್ತೆಯಾಗಿದೆ. ಇದರಲ್ಲಿ ನಿಷೇಧಿತ 2,000 ರೂ. ನೋಟುಗಳು ಮತ್ತು ವಿದೇಶಿ ಕರೆನ್ಸಿಗಳು ಕೂಡ ಇತ್ತು. ಈ ಹಣವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕಿಶೋರ್ ಪ್ರತಿದಿನ ಹಣ, ಆಹಾರವನ್ನು ಭಿಕ್ಷೆಯಾಗಿ ಕೇಳುತ್ತಿದ್ದ. ಅವನಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣ ಇದೆ ಎಂಬುದು ಯಾರಿಗೂ ತಿಳಿದಿರಲಿಲ್ಲ ಎಂದು ಪಂಚಾಯತ್ ಸದಸ್ಯ ಉಮ್ಮನ್ ತಿಳಿಸಿದರು.

Chitradurga News: ಮದುವೆ ಮಾಡಲಿಲ್ಲ ಎಂದು ರಾಡ್‌ನಿಂದ ಹೊಡೆದು ತಂದೆಯನ್ನೇ ಕೊಲೆಗೈದ ಪುತ್ರ!

ಬಾಡಿಗೆ ಕೇಳಿದ ಕ್ಯಾಬ್ ಚಾಲಕನ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ನೀಡಲು ಮುಂದಾದ ಮಹಿಳೆ

ಮಹಿಳೆಯೊಬ್ಬಳು ಹಲವು ಗಂಟೆಗಳ ಕಾಲ ಕ್ಯಾಬ್ ನಲ್ಲಿ ಸುತ್ತಾಡಿ ಬಳಿಕ ಚಾಲಕನಿಗೆ ಬಾಡಿಗೆ ಹಣ ನೀಡದೆ ಆತನ ವಿರುದ್ಧವೇ ಲೈಂಗಿಕ ದೌರ್ಜನ್ಯದ ದೂರು ನೀಡಲು ಮುಂದಾದ ಘಟನೆ ಗುರುಗ್ರಾಮ್ ದಲ್ಲಿ ನಡೆದಿದೆ.

ನುಹ್ ಜಿಲ್ಲೆಯ ಧಾನಾ ಗ್ರಾಮದ ನಿವಾಸಿ ಜಿಯಾವುದ್ದೀನ್ ಎಂಬಾತನ ಕ್ಯಾಬ್ ನಲ್ಲಿ ಜ್ಯೋತಿ ದಲಾಲ್ ಎಂಬ ಮಹಿಳೆ ಮಂಗಳವಾರ ಪ್ರಯಾಣ ಮಾಡಿದ್ದಾಳೆ. ಬೆಳಗ್ಗೆ 8 ಗಂಟೆಗೆ ಕ್ಯಾಬ್ ಬುಕ್ ಮಾಡಿದ್ದ ಜ್ಯೋತಿ ಮೊದಲು ಸೆಕ್ಟರ್ 31ಕ್ಕೆ ಕರೆದುಕೊಂಡು ಹೋಗಲು ಹೇಳಿದಳು, ಅನಂತರ ಬಸ್ ನಿಲ್ದಾಣ, ಬಳಿಕ ಸೈಬರ್ ಸಿಟಿಗೆ ಪ್ರಯಾಣಿಸಿದ್ದಾಳೆ. ಅಲ್ಲದೆ ತನ್ನಿಂದಲೇ 700 ರೂ. ಹಣ ಪಡೆದಿದ್ದಾಳೆ. ಅಷ್ಟೇ ಅಲ್ಲದೇ ವಿವಿಧ ಸ್ಥಳಗಳಲ್ಲಿ ಊಟ ಮತ್ತು ಪಾನೀಯಕ್ಕೂ ಕೂಡ ನಾನೇ ಹಣ ಪಾವತಿ ಮಾಡುವಂತೆ ಹೇಳಿದ್ದಾಳೆ. ಮಧ್ಯಾಹ್ನ ಬಾಡಿಗೆ ಹಣ ನೀಡಿ ಪ್ರಯಾಣ ಕೊನೆಗೊಳಿಸಲು ಹೇಳಿದಾಗ ಆಕೆ ಕೋಪಗೊಂಡು ನನ್ನ ಮೇಲೆ ಕಳ್ಳತನ ಮತ್ತು ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಳು ಎಂದು ಜಿಯಾವುದ್ದೀನ್ ಸೆಕ್ಟರ್ 29ರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಜ್ಯೋತಿ ದಲಾಲ್ ಹಿಂದೆಯೂ ಒಬ್ಬ ಕ್ಯಾಬ್ ಚಾಲಕ ಹಾಗೂ ಒಂದು ಬ್ಯೂಟಿ ಸ್ಯಾಲೂನ್ ಗೆ ಇದೇ ರೀತಿ ವಂಚಿಸಿರುವುದಾಗಿ ತಿಳಿದು ಬಂದಿದೆ. ಮಾಹಿತಿಯ ಪ್ರಕಾರ ಜ್ಯೋತಿ ದಲಾಲ್ ಈ ಹಿಂದೆ ಒಂದು ಸ್ಯಾಲೂನ್‌ನಲ್ಲಿ 20,000 ರೂ. ಮತ್ತು ಕ್ಯಾಬ್ ಚಾಲಕನಿಗೆ 2,000 ರೂ. ಬಾಡಿಗೆ ನೀಡಲು ನಿರಾಕರಿಸಿ ವಂಚಿಸಿದ್ದಳು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದೀಗ ಜ್ಯೋತಿ ದಲಾಲ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ.