ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೆಲಸಕ್ಕಲ್ಲ, ಮಾವಿನ ಹಣ್ಣಿನ ರುಚಿ ಸವಿಯಲು ಸಂಜೆ 4 ಗಂಟೆಗೆ ಆಫೀಸ್‌ಗೆ ಎಂಟ್ರಿ ಕೊಟ್ಟ ಉದ್ಯೋಗಿ

Viral Video: ಗೂಗಲ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಮ್ಯಾಂಗೋ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ಉದ್ಯೋಗಿಯೊಬ್ಬರು ಸಂಜೆ 4 ಗಂಟೆಗೆ ಕಚೇರಿಗೆ ಧಾವಿಸಿದ್ದಾರೆ. ಬೆಂಗಳೂರಿನಲ್ಲಿರುವ ಗೂಗಲ್ ಸಂಸ್ಥೆಯೂ ಮಾವಿನ ಹಣ್ಣಿನ ಹಬ್ಬ ಆಯೋಜಿಸಲಾಗಿತ್ತು. ಉದ್ಯೋಗಿಯೊಬ್ಬರು ಈ ಉತ್ಸವದಲ್ಲಿ ಭಾಗವಹಿಸಲು ತಮ್ಮ ಕಚೇರಿಗೆ ಸಂಜೆ ಭೇಟಿ ನೀಡಿದ್ದಾರೆ.

ಮ್ಯಾಂಗೋ ಫೆಸ್ಟಿವಲ್‌ಗಾಗಿ ಸಂಜೆ ಕಚೇರಿಗೆ ಬಂದ ಗೂಗಲ್ ಉದ್ಯೋಗಿ ಗಜಲ್ ಅರೋರಾ

ಬೆಂಗಳೂರು, ಜೂ. 13: ಕಾರ್ಪೊರೇಟ್ ಉದ್ಯಮದಲ್ಲಿ ಒತ್ತಡದ ಕೆಲಸಗಳಿದ್ದರೂ ಕೆಲವೊಮ್ಮೆ ಕಚೇರಿಯಲ್ಲಿ ಆಯೋಜಿಸುವ ಕಾರ್ಯಕ್ರಮಗಳು ಉದ್ಯೋಗಿಗಳಿಗೆ ಖುಷಿ ನೀಡುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿರುವ ಗೂಗಲ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಮ್ಯಾಂಗೋ ಫೆಸ್ಟಿವಲ್‌ಗೆ ಗೆ ಉದ್ಯೋಗಿಯೊಬ್ಬರು ಸಂಜೆ 4 ಗಂಟೆಗೆ ಕಚೇರಿಗೆ ಧಾವಿಸಿದ್ದಾರೆ. ಗೂಗಲ್ ಸಂಸ್ಥೆ ಸಿಬ್ಬಂದಿಗಾಗಿ ಇತ್ತೀಚೆಗೆ ಮಾವಿನ ಹಣ್ಣಿನ ಹಬ್ಬ ಆಯೋಜನೆ ಮಾಡಿತ್ತು. ಇಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರು ಈ ಉತ್ಸವದಲ್ಲಿ ಭಾಗವಹಿಸಲು ತಮ್ಮ ಕಚೇರಿಗೆ ಸಂಜೆ ಭೇಟಿ ನೀಡಿದ್ದಾರೆ. ಸದ್ಯ ಈ ವಿಡಿಯೊ (Viral News) ನೋಡಿದ ಅನೇಕರು ಇದು ಬಹಳಷ್ಟು ಮಜಾವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಡಿಯೊವನ್ನು ಗೂಗಲ್ ಉದ್ಯೋಗಿ ಗಜಲ್ ಅರೋರಾ ಹಂಚಿಕೊಂಡಿದ್ದಾರೆ. ʼʼನಾನು ಸಂಜೆ 4 ಗಂಟೆಗೆ ಆಫೀಸ್ ಗೆ ಹೋಗುತ್ತಿದ್ದೇನೆ. ಕೆಲಸಕ್ಕಾಗಿ ಅಲ್ಲ, ಕೇವಲ ಮಾವಿನ ಹಣ್ಣಿನ ಮಜಾ ಸವಿಯಲು ಕಚೇರಿಗೆ ತೆರಳುತ್ತಿದ್ದೇನೆʼʼ ಎಂದು ಹೇಳಿಕೊಂಡಿದ್ದಾರೆ. ವಿಡಿಯೊದ ಆರಂಭದಲ್ಲಿ, ಅರೋರಾ, ʼʼಈಗ ಸಂಜೆ 4 ಗಂಟೆ‌‌. ನಾನು ಈಗ ಕಚೇರಿಗೆ ಹೋಗುತ್ತಿದ್ದೇನೆ. ಏಕೆಂದರೆ ಇಂದು ಆಫೀಸ್ ನಲ್ಲಿ ಮಾವಿನ ಹಬ್ಬ. ನಾನು ಇದನ್ನು ತಪ್ಪಿಸಿಕೊಳ್ಳಲು ಬಯಸುವುದಿಲ್ಲʼʼ ಎಂದು ಹೇಳಿದ್ದಾರೆ.

ವಿಡಿಯೊ ನೋಡಿ:



ಅವರು ಒಳಗೆ ಎಂಟ್ರಿ ನೀಡುತ್ತಿದ್ದಂತೆ ಹಣ್ಣುಗಳ ರಾಜ ಮಾವಿನ ಹಣ್ಣಿನ ವಿಸ್ತಾರವಾದ ಸೆಟಪ್ ಕಂಡು ಬಂದಿದೆ. ಕಚೇರಿಯಲ್ಲಿ ವಿವಿಧ ತಳಿಯ ಮಾವಿನ ಹಣ್ಣುಗಳ ಆಲಂಕಾರ ಮಾಡಲಾಗಿತ್ತು. ಉದ್ಯೋಗಿಗಳಿಗೆ ತಮಗೆ ಇಷ್ಟಬಂದಷ್ಟು ತಾಜಾ ಮಾವಿನ ಹಣ್ಣುಗಳನ್ನು ಕತ್ತರಿಸಿ ನೀಡಲಾಗುತ್ತಿತ್ತು. ಅಷ್ಟೇ ಅಲ್ಲದೆ ಹಣ್ಣನ್ನು ಮನೆಗೆ ಕೊಂಡೊಯ್ಯುವ ಮುಕ್ತ ಅವಕಾಶವೂ ಇತ್ತು.

ವಾಕಿಂಗ್ ಹೋಗಿದ್ದವರ ಬೆನ್ನಟ್ಟಿದ ಕರಡಿ; ಭೀಕರ ದೃಶ್ಯ ಸೆರೆ!

ಅಷ್ಟೇ ಅಲ್ಲದೆ ಉದ್ಯೋಗಿಗಳಿಗೆ ಮಾವಿನ ಹಣ್ಣುಗಳಿಂದ ಮಾಡಲಾದ ಸಿಹಿತಿಂಡಿಗಳನ್ನು ನೀಡಲಾಯಿತು‌‌‌. ಮಾವಿನ ಐಸ್‌ ಕ್ರೀಮ್, ಪೇಸ್ಟ್ರಿಗಳಿಂದ ಹಿಡಿದು ಕೇಕ್‌, ಫಲೂದಾ ಸೇರಿ ಕಲ್ಪನೆಗೂ ಮೀರಿದ ಭಕ್ಷ್ಯಗಳನ್ನು ಉದ್ಯೋಗಿಗಳಿಗೆ ಉಣ ಬಡಿಸಲಾಗಿತ್ತು. ನಿಜಕ್ಕೂ ಅದ್ಭುತವಾಗಿತ್ತು ಎಂದು ಖುಷಿ ಹಂಚಿಕೊಂಡಿದ್ದಾರೆ.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬರು ಗೂಗಲ್  ಕಂಪನಿಯ ಈ ಸಮಾರಂಭದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ‌‌. ಇನ್ನು ಕೆಲವರು ಮುಂದಿನ ಬಾರಿ ಇಂತಹ ಕಾರ್ಯಕ್ರಮ ಇದ್ದರೆ ನಮಗೂ ತಿಳಿಸಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ‌.