ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಗುವಿನ ಕ್ಷಣವಾಗಿ ಬದಲಾದ ಭಾವನಾತ್ಮಕ ವಿದಾಯ: ಬೆಂಗಳೂರು ಉದ್ಯೋಗಿಯ ರಾಜೀನಾಮೆ ಮೇಲ್‌ ಕಂಡು ನಕ್ಕ ಸಹೋದ್ಯೋಗಿ

Viral Video: ಬೆಂಗಳೂರಿನ ಉದ್ಯೋಗಿಯೊಬ್ಬರು ಅಸಾಮಾನ್ಯ ಭಾವನಾತ್ಮಕ ವಿದಾಯ ಸಹೋದ್ಯೋಗಿಗಳನ್ನು ನಗುವಿನ ಅಲೆಯಲ್ಲಿ ತೇಲುವಂತೆ ಮಾಡಿದೆ. ರಾಜೀನಾಮೆ ಪತ್ರವನ್ನು ಅವರು ವಿಭಿನ್ನವಾಗಿ ಮೇಲ್ ಮಾಡಿ ವಿದಾಯ ಹೇಳಿದ್ದಾರೆ. ತಮಾಷೆಯ ಮೀಮ್‌ ಕಳುಹಿಸುವ ಮೂಲಕ ಅವರು ಸಹೋದ್ಯೋಗಿಗಳಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆಫೀಸ್ ವಿದಾಯದ ಪತ್ರದಲ್ಲಿ ತಮಾಷೆಯ ಮೀಮ್

ಬೆಂಗಳೂರು, ಮೇ 3: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೆಲಸ ಬಿಡುವಾಗ ಒಂದು ರೀತಿಯ ಭಾವುಕತೆ, ನೋವು ಇದ್ದೇ ಇರುತ್ತದೆ. ಆದರೆ ಬೆಂಗಳೂರಿನ ಉದ್ಯೋಗಿಯೊಬ್ಬರು ಸಾಮಾನ್ಯ ಭಾವನಾತ್ಮಕ ವಿದಾಯವನ್ನು ಬಿಟ್ಟು ಸಹೋದ್ಯೋಗಿಗಳನ್ನು ನಗುವಿನ ಅಲೆಯಲ್ಲಿ ತೇಲಿಸಿ ಬೀಡುವಂತೆ ಮೇಲ್ ಮಾಡಿ ವಿದಾಯ ಹೇಳಿದ್ದಾರೆ. ತಮಾಷೆಯ ಮೀಮ್‌ಗಳನ್ನು ಕಳುಹಿಸುವ ಮೂಲಕ ಸಹೋದ್ಯೋಗಿಗಳಿಗೆ ಅಚ್ಚರಿ ಪಡಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

ಬೆಂಗಳೂರಿನ ಉದ್ಯೋಗಿಯೊಬ್ಬರು ಸಾಮಾನ್ಯ ಭಾವನಾತ್ಮಕ ಬೇಸರ, ನೋವಿನ ವಿದಾಯದ ಬದಲಿಗೆ ಸಂಪೂರ್ಣವಾಗಿ ಮೀಮ್‌ಗಳಿಂದ ಮಾಡಲ್ಪಟ್ಟ ಇಮೇಲ್ ಕಳುಹಿಸುವ ಮೂಲಕ ತಂಡವನ್ನು ಅಚ್ಚರಿಗೊಳಪಡಿಸಿದ್ದಾರೆ. ತಮ್ಮ ಸ್ನೇಹಿತರಿಗೆ ನಗುಮೊಗದಿಂದ ವಿದಾಯ ಹೇಳಿದ್ದ ಇವರ ಮೇಲ್‌ನಲ್ಲಿ ಯಾವುದೇ ಧನ್ಯವಾದ ಹೇಳಿಕೆಗಳಿರಲಿಲ್ಲ, ಬದಲಾಗಿ ತಮಾಷೆಯ ಮೀಮ್‌ಗಳಿದ್ದವು.

ವಿಡಿಯೊ ನೋಡಿ:



ಒಂದು ಮೀಮ್‌ನಲ್ಲಿ ಸ್ಪೈಡರ್ ಮ್ಯಾನ್ ಬಂದು ಕಂಪ್ಯೂಟರ್‌ನ ಮುಂಭಾಗ ಕುಳಿತಿರುವುದನ್ನು ತೋರಿಸಿದೆ. "ನಾನು ವಿದಾಯ ಹೇಳಲು ಮೀಮ್‌ಗಳನ್ನು'ಗೂಗಲ್ ಮಾಡುತ್ತಿದ್ದೇನೆ" ಎಂಬ ಶೀರ್ಷಿಕೆಯೊಂದಿಗೆ ಈ ಫೋಟೊ ಶೇರ್‌ ಮಾಡಲಾಗಿದೆ. ʼʼಸರಿ ಗೆಳೆಯ, ನಾನಿನ್ನು ಹೊರಡುತ್ತೇನೆʼʼ ಎಂಬಂತಹ ಹಿಂದಿ ಸಿನಿಮಾದ ಮೀಮ್‌ ಕಳುಹಿಸಿ ಸಹೋದ್ಯೋಗಿಗಳನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

ಕಾಳಿ ಮಾತೆಯ ವಿಗ್ರಹಕ್ಕೆ ಮದರ್‌ ಮೇರಿಯ ಅಲಂಕಾರ....ಕನಸಲ್ಲಿ ಬಂದು ದೇವಿಯೇ ಹೇಳಿದ್ಳಂತೆ!

ವಿಡಿಯೊವನ್ನು ರೆಕಾರ್ಡ್ ಮಾಡಿದ ಮಹಿಳೆ ನಗುತ್ತಿರುವುದು ಕಾಣಬಹುದು. ʼʼಇಮೇಲ್ ನನ್ನನ್ನು ಸಂಪೂರ್ಣವಾಗಿ ಅಚ್ಚರಿಗೆ ದೂಡಿದೆ. ಉದ್ಯೋಗಿಯ ಕೊನೆಯ ಕೆಲಸದ ದಿನದಂದು ಇಂತಹ ತಮಾಷೆಯನ್ನು ಯಾರೂ ನಿರೀಕ್ಷಿಸಿರಲಿಲ್ಲʼʼ ಎಂದು ಅವರು ಹೇಳಿಕೊಂಡಿದ್ದಾರೆ. ಸಹೋದ್ಯೋಗಿಯೊಬ್ಬರು ಈ ವಿಭಿನ್ನ ವಿದಾಯದ ಪತ್ರದ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಒಬ್ಬರು ಕಚೇರಿಯ ವ್ಯವಸ್ಥಾಪಕರು ಇಮೇಲ್‌ ನೋಡುತ್ತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು ಸೃಜನಶೀಲ ಉದ್ಯೋಗಿ ಎಂದು ಬರೆದಿದ್ದಾರೆ.