Viral Video: ಕಾಳಿ ಮಾತೆಯ ವಿಗ್ರಹಕ್ಕೆ ಮದರ್ ಮೇರಿಯ ಅಲಂಕಾರ....ಕನಸಲ್ಲಿ ಬಂದು ದೇವಿಯೇ ಹೇಳಿದ್ಳಂತೆ!
ಚೆಂಬೂರ್–ವಾಶಿ ನಾಕಾ ಪ್ರದೇಶದ ಕಾಳಿ ಮಾತಾ ದೇವಾಲಯಕ್ಕೆ ಪ್ರತಿ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಅಂತೆಯೇ ಈ ಬಾರಿ ಕೂಡ ಬಂದ ಭಕ್ತರಿಗೆ ಕಾಳಿಯ ರೌದ್ರ ಅವತಾರ ಕಂಡಿಲ್ಲ ಬದಲಾಗಿ ಕ್ರೈಸ್ತ ಮಾತೆ ಮೇರಿಯ ಚಹರೆ ಕಂಡಿದೆ. ಗರ್ಭಗುಡಿಯಲ್ಲಿರುವ ವಿಗ್ರಹವನ್ನು ವಿಚಿತ್ರವಾಗಿ ಅಲಂಕರಿಸಿದ್ದು ಭಕ್ತರ ಕೋಪಕ್ಕೆ ಗುರಿಯಾಗುವಂತೆ ಮಾಡಿದ್ದು ಈ ಬಗ್ಗೆ ಇಲ್ಲಿನ ಸ್ಥಳೀಯರು ಮತ್ತು ಭಕ್ತರು ವಿರೋಧ ವ್ಯಕ್ತಪಡಿಸಿದ್ದಾರೆ.
ಹಿಂದು ದೇವರಿಗೆ ಕ್ರೈಸ್ತ ದೇವರ ಅಲಂಕಾರ -
ಮುಂಬೈ: ಸಿದ್ಧ ದೇವಾಯಲಗಳಲ್ಲಿ ಚೆಂಬೂರ್–ವಾಶಿ ನಾಕಾ ಪ್ರದೇಶದ ಕಾಳಿ ಮಾತಾ ದೇವಾಲಯ ಕೂಡ ಒಂದು. ರಾಕ್ಷಸ ಸಂಹಾರ ಮಾಡುವ, ನವಗ್ರಹ ದೇವತೆಯಲ್ಲಿ ಒಂದಾದ ಕಾಳಿಯನ್ನು ಇಲ್ಲಿ ನಿತ್ಯ ಪೂಜಿಸಲಾಗುತ್ತದೆ. ಆದರೆ ಕೆಲವು ದಿನಗಳಿಂದ ಈ ದೇವಾಲಯ ಭಾರೀ ಸುದ್ದಿಯಲ್ಲಿದೆ. ಈ ಕಾಳಿ ಮಾತೆಯ ವಿಗ್ರಹಕ್ಕೆ ಕ್ರೈಸ್ತ ದೇವರಾದ ಮಾತೆ ಮೇರಿಯ ಅಲಂಕಾರವನ್ನು ಮಾಡಿರುವ ವಿಡಿಯೊ ಭಾರೀ ಹರಿದಾಡುತ್ತಿದೆ. ಈ ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆ ಈ ಅಲಂಕಾರದ ದೃಶ್ಯ ಕಂಡು ಆಘಾತಗೊಂಡಿದ್ದಾರೆ. ಈ ಮೂಲಕ ನೆಟ್ಟಿಗರೊಬ್ಬರು ಈ ಕಾಳಿ ಮಾತೆಯ ವಿಗ್ರಹದ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಕಾಳಿ ಮಾತೆಗೆ ಕ್ರೈಸ್ತ ಮೇರಿ ಮಾತೆಯನ್ನು ಹೋಲುವ ಅಲಂಕಾರ ಮಾಡಿದ್ದ ಈ ವಿಡಿಯೋ ಸದ್ಯ ವೈರಲ್ (Video Viral) ಆಗುತ್ತಿದ್ದು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಚೆಂಬೂರ್–ವಾಶಿ ನಾಕಾ ಪ್ರದೇಶದ ಕಾಳಿ ಮಾತಾ ದೇವಾಲ ಯಕ್ಕೆ ಪ್ರತಿ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಅಂತೆಯೇ ಈ ಬಾರಿ ಕೂಡ ಬಂದ ಭಕ್ತರಿಗೆ ಕಾಳಿಯ ರೌದ್ರ ಅವತಾರ ಕಂಡಿಲ್ಲ ಬದಲಾಗಿ ಕ್ರೈಸ್ತ ಮಾತೆ ಮೇರಿಯ ಚಹರೆ ಕಂಡಿದೆ. ಗರ್ಭಗುಡಿಯಲ್ಲಿರುವ ವಿಗ್ರಹವನ್ನು ವಿಚಿತ್ರ ವಾಗಿ ಅಲಂಕರಿಸಿದ್ದು ಭಕ್ತರ ಕೋಪಕ್ಕೆ ಗುರಿಯಾಗುವಂತೆ ಮಾಡಿದ್ದು ಈ ಬಗ್ಗೆ ಇಲ್ಲಿನ ಸ್ಥಳೀಯರು ಮತ್ತು ಭಕ್ತರು ವಿರೋಧ ವ್ಯಕ್ತಪಡಿಸಿದ್ದಾರೆ.
ವಿಡಿಯೊ ಇಲ್ಲಿದೆ:
ವರದಿಯೊಂದರ ಪ್ರಕಾರ, ಸ್ಥಳೀಯರು ದರ್ಶನಕ್ಕೆ ಬಂದಾಗ ಕಾಳಿ ಮಾತೆಯು ಕಿರೀಟವನ್ನು ಧರಿಸಿ ಕ್ರೈಸ್ತ ಮಾತೆ ಮೇರಿಯಮ್ಮನನ್ನೇ ಹೋಲುವಂತೆ ಮಾರ್ಪಾಡು ಮಾಡಲಾಗಿದೆ. ಹೀಗಾಗಿ ಸ್ಥಳೀ ಯರು ಮತ್ತು ಭಕ್ತರು ಸೇರಿಕೊಂಡು ದೇಗುಲದ ಅರ್ಚಕ ರಮೇಶ್ ಅವರನ್ನು ವಿಚಾರಿಸಿದ್ದಾರೆ. ಆಗ ಅರ್ಚಕರು ತಮ್ಮ ಕನಸಿನಲ್ಲಿ ಕಾಳಿ ಮಾತೆ ಕಾಣಿಸಿಕೊಂಡು "ಅವಳಿಗೆ ಮೇರಿಯ ರೂಪ ಮಾಡುವಂತೆ ಕೇಳಿಕೊಂಡರು ಅದಕ್ಕಾಗಿ ಹಾಗೆ ಮಾಡಿರುವುದಾಗಿ " ಹೇಳಿಕೊಂಡಿದ್ದಾರೆ. ಇದನ್ನು ಕೇಳಿ ಕೆಲವರು ಆಶ್ಚರ್ಯಗೊಂಡರೆ ಇನ್ನು ಕೆಲವರು ಆಕ್ರೋಶ ಹೊರಹಾಕಿದ್ದಾರೆ. ಈ ಕೃತ್ಯವನ್ನು ನಡೆಸಲು ಪಾದ್ರಿಗಳಿಗೆ ಹಣ ನೀಡಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಇನ್ ಸ್ಟಾ ಗ್ರಾಂ ಬಳಕೆದಾರರೊಬ್ಬರು ಕಾಳಿ ಮಾತೆಯ ಹಿಂದು ವಿಗ್ರಹ ಕ್ರೈಸ್ತ ಧರ್ಮದ ವಿಗ್ರಹದಂತೆ ಮಾರ್ಪಾಡು ಮಾಡಿದ್ದಾರೆ. ಕಾಳಿ ಮಾತಾ ದೇವಸ್ಥಾನದಲ್ಲಿ ಈ ಕ್ರೈಸ್ತ ಧರ್ಮೀಯರು ಏನು ಮಾಡಿದ್ದಾರೆಂದು ನೋಡಿ. ದೇವತೆ ಶಿಲುಬೆಯನ್ನು ಧರಿಸು ತ್ತಾರೆಯೆ? ಎಂದು ಬರೆದಿದ್ದಾರೆ. ಕ್ಲಿಪ್ ನಲ್ಲಿ ಮೂಲ ವಿಗ್ರಹದ ಹಿಂದಿನ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೆ ಈ ಬಗ್ಗೆ ನಾನಾ ತರನಾಗಿ ನೆಟ್ಟಿಗರಿಂದ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದೆ. ಹಿಂದೂ ದೇವರನ್ನು ಈ ರೀತಿ ನೋಡಿ ಆಘಾತವಾಯಿತು . ಈ ಕೃತ್ಯ ಮಾಡಿ ನಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದವರ ವಿರುದ್ಧ ಪ್ರಕರಣ ದಾಖಲಾಗಲಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಹಾಕಿದ್ದಾರೆ. ಇದು ಉದ್ದೇಶಪೂರ್ವಕ ಕೃತ್ಯವೆಂದು ತೋರುತ್ತದೆ ಹೇಳಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮತ್ತೊಬ್ಬ ಬಳಕೆದಾರರು ಒತ್ತಾಯಿಸಿದ್ದಾರೆ. ವರದಿಯ ಪ್ರಕಾರ ಈ ಬಗ್ಗೆ ಆರ್‌ಸಿಎಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಧಿಕಾರಿಗಳು ಅರ್ಚಕ ರಮೇಶ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆತನ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಲಾಗಿದೆ. ಈ ಬಗ್ಗೆ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.