ಬರ್ಲಿನ್, ಫೆ. 12: ಬರ್ತ್ ಡೇಯಂದು ಅಥವಾ ಪ್ರಪೋಸ್ ಡೇಯಂದು ಸಂಗಾತಿಗೆ ವಿಶೇಷ ಉಡುಗೊರೆ ನೀಡಲು ಹೆಚ್ಚಿನವರು ಬಯಸುತ್ತಾರೆ. ಆದರೆ ಕೆಲವೊಮ್ಮೆ ಮಾಡಿದ ಪ್ಲ್ಯಾನ್‌ಗಳು ಕೈಕೊಟ್ಟು ಬೇಸರ ಮಾಡಿಕೊಂಡವರು ಹಲವರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಜರ್ಮನಿಯ ಯುವಕನೊಬ್ಬ ಪ್ರೀತಿಸಿದವಳಿಗೆ ವಾರ್ಷಿಕೋತ್ಸವದ ಉಡುಗೊರೆಯಾಗಿ ನೀಡಲು ತಂದಿದ್ದ ಸುಮಾರು 1.8 ಲಕ್ಷ ರುಪಾಯಿ ಮೌಲ್ಯದ ಡುಗೊರೆ ಆತನ ಕಣ್ಣ ಮುಂದೆಯೇ ಆಕಾಶಕ್ಕೆ ಹಾರಿ ಹೋದ ಘಟನೆ ನಡೆದಿದೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಜರ್ಮನ್ ಯುವಕನೊಬ್ಬ ತನ್ನ ಗೆಳತಿಗೆ ಅಚ್ಚರಿಯ ಉಡುಗೊರೆ ನೀಡಬೇಕೆಂದು ಬಯಸಿದ್ದನು. ಆದರೆ ಈ ಪ್ಲ್ಯಾನ್ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಯುವಕನು ಉಡುಗೊರೆಯ ಪೆಟ್ಟಿಗೆಯೊಳಗೆ ಬಲೂನ್ ಅನ್ನು ಇಟ್ಟಿದ್ದ. ಅದಕ್ಕೆ ನಗದು ನೋಟುಗಳನ್ನು ಸರಪಳಿಯಂತೆ ಜೋಡಿಸಿದ್ದ. ಆ ಬಲೂನ್‌ಗಳಿಗೆ ಆತ ತನ್ನ ಇಡೀ ತಿಂಗಳ ಸಂಬಳ 1.8 ಲಕ್ಷ ರುಪಾಯಿ ಜೋಡಿಸಿದ್ದ. ಆದರೆ ಇದನ್ನು ಅರಿಯದ ಗೆಳತಿ ಬಲೂನ್ ಅನ್ನು ಹಾರಿಸಿ ಬಿಟ್ಟಿದ್ದಾಳೆ.
ವಿಡಿಯೊ ನೋಡಿ:
ವೈರಲ್ ವಿಡಿಯೊದಲ್ಲಿ ಆರಂಭದಲ್ಲಿ ಯುವಕನು ಪಾರ್ಕಿಂಗ್ ಪ್ರದೇಶವೊಂದರಲ್ಲಿ ದೊಡ್ಡ ಬಿಳಿ ಬಣ್ಣದ ಉಡುಗೊರೆ ಪೆಟ್ಟಿಗೆಯನ್ನು ಸಿದ್ಧಪಡಿಸಿಕೊಂಡಿರುವುದು ಕಂಡು ಬಂದಿದೆ. ಅದರ ಒಳಗೆ ಕೆಂಪು ಬಲೂನ್‌ಗಳಿದ್ದವು. ಆ ಬಲೂನ್‌ಗಳಿಗೆ ಆತ ತನ್ನ ಇಡೀ ತಿಂಗಳ ಸಂಬಳ 1.8 ಲಕ್ಷ ರುಪಾಯಿಯನ್ನು ನೋಟುಗಳ ಸರಪಳಿಯಂತೆ ಜೋಡಿಸಿದ್ದಾನೆ. ಗೆಳತಿ ಬಂದು ಬಾಕ್ಸ್ ತೆರೆಯುತ್ತಿದ್ದಂತೆ, ಹಣದ ಸರಪಳಿಯನ್ನು ಹೊತ್ತ ಬಲೂನ್ ಮೇಲೆ ಬಂದಿದೆ.
ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!
ಇದರಿಂದ ಆಶ್ಚರ್ಯಚಕಿತಳಾದ ಗೆಳತಿ, ಹಣದ ಬಗ್ಗೆ ಗಮನ ಕೊಡದೆ ತಕ್ಷಣ ಗೆಳೆಯನನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ಕೈಯಲ್ಲಿದ್ದ ಬಲೂನ್ ನೂಲು ಜಾರಿ ಹೋಗಿದೆ. ನೋಡನೋಡುತ್ತಿದ್ದಂತೆ ಇಡೀ ಹಣದ ಸರಪಳಿ ಆಕಾಶಕ್ಕೆ ಹಾರಿ ಹೋಗಿದೆ. ನಗದು ಸರಪಳಿಯು ಪೆಟ್ಟಿಗೆಯಿಂದ ಬೇರ್ಪಟ್ಟು ಬಲೂನ್‌ಗಳೊಂದಿಗೆ ಆಕಾಶಕ್ಕೆ ಹಾರಿದೆ. ಯುವಕ ಅದನ್ನು ಹಿಡಿಯಲಿ ತನ್ನ ಕೋಟ್ ಅನ್ನು ಗಾಳಿಯಲ್ಲಿ ಎಸೆದಿದ್ದಾನೆ. ಆದರೆ ಆತನ ಪ್ರಯತನಗಳೆಲ್ಲ ವಿಫಲವಾಗಿದೆ.
ಬಳಿಕ ಯುವಕ ಕೈಗಳಿಂದ ಮುಖವನ್ನು ಮುಚ್ಚಿಕೊಂಡು ಅತ್ತಿದ್ದಾನೆ. ಪ್ರೇಯಸಿ ಅವನ ಪಕ್ಕದಲ್ಲಿ ಮಂಡಿಯೂರಿ ಕುಳಿತು ಅವನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾಳೆ. ಯುವಕ ಅದು ತನ್ನ ಇಡೀ ತಿಂಗಳ ಸಂಬಳವಾಗಿತ್ತು ಎಂದು ಹೇಳಿದಾಗ ಇದಕ್ಕೆ ಇನ್ನೂ ಹೆಚ್ಚು ಹಣ ಸಂಪಾದಿಸು ಎಂದಿ ದ್ದಾಳೆ. ಫೆಬ್ರವರಿ 10ರಂದು ಹಂಚಿಕೊಳ್ಳಲಾದ ಈ ವೀಡಿಯೊ ಇಲ್ಲಿಯವರೆಗೆ 110 ಮಿಲಿ ಯನ್‌ಗಿಂತಲೂ ಹೆಚ್ಚು ವೀಕ್ಷಣೆ ಗಳಿಸಿದೆ. ಮತ್ತು ಹಲವು ಕಮೆಂಟ್‌ಗಳು ಬಂದಿವೆ. ಒಬ್ಬರು ʼʼಅವಳು ಹಣಕ್ಕಿಂತ ಮೊದಲು ನಿನ್ನನ್ನು ತಬ್ಬಿಕೊಂಡಳು. ಆದ್ದರಿಂದ ನಿನ್ನ ಉಡುಗೊರೆಯನ್ನು ಸ್ವೀಕರಿಸಲಾಗಿದೆ ಎಂದು ನಾನು ಭಾವಿಸುತ್ತೇನೆʼʼ ಎಂದಿದ್ದಾರೆ.