ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಲೈವ್ ಸ್ಟ್ರೀಮಿಂಗ್‌ನಲ್ಲೇ ಖ್ಯಾತ ಬಿಗ್ ಬಾಸ್ ಮಾಜಿ ಸ್ಪರ್ಧಿ ಆತ್ಮಹತ್ಯೆಗೆ ಯತ್ನ!

Anurag Dobhal: ಮಾಜಿ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೋಭಾಲ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ವರದಿಯಾಗಿದೆ. ಅವರು ಕಾರು ಡ್ರೈವಿಂಗ್ ಮಾಡುತ್ತ ಇನ್‌ಸ್ಟಾಗ್ರಾಮ್ ಲೈವ್ ಸ್ಟ್ರೀಮಿಂಗ್ ಮಾಡುತ್ತಿ ದ್ದಾಗಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಾರ್ಚ್ 7ರಂದು ನಡೆದಿದೆ

ಆತ್ಮಹತ್ಯೆಗೆ ಯತ್ನಿಸಿದ್ದ ಮಾಜಿ ಬಿಗ್ ಬಾಸ್ ಸ್ಪರ್ಧಿ

ಉತ್ತರಾಂಚಲ್, ಮಾ.8: UK07 ರೈಡರ್ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೋಭಾಲ್ (Anurag Dobhal) ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ವರದಿಯಾಗಿದೆ. ಅವರು ಕಾರು ಡ್ರೈವಿಂಗ್ ಮಾಡುತ್ತ ಇನ್‌ಸ್ಟಾಗ್ರಾಮ್ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದಾಗಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಾರ್ಚ್ 7ರಂದು ನಡೆದಿದೆ. ದೋಭಾಲ್ ವಿಡಿಯೊ ರೆಕಾರ್ಡ್ ಮಾಡಿಕೊಂಡು, ದುಃಖಿತನಾಗಿ ಕಾಣಿಸಿಕೊಂಡಿರುವುದು ಕಾಣಿಸುತ್ತದೆ. ಕ್ಲಿಪ್‌ನಲ್ಲಿ, ಅವರು ಜೀವನದ ಭಾವನಾತ್ಮಕ ಹೋರಾಟಗಳ‌ ಬಗ್ಗೆ ಮಾತನಾಡಿದ್ದಾರೆ.

ವಿಡಿಯೋ ನೋಡಿ:



ಅನುರಾಗ್ ಡೋಬಾಲ್ ತಮ್ಮ ಕಾರಿನಲ್ಲಿ ಡ್ರೈವ್ ಮಾಡುತ್ತಾ ಇನ್‌ಸ್ಟಾಗ್ರಾಮ್ ಲೈವ್ ಬಂದಿದ್ದರು. 150 ರಿಂದ 180 ಕಿ.ಮೀ ವೇಗದಲ್ಲಿ ಕಾರು ಓಡಿಸುತ್ತಿದ್ದ ಅವರು, ಇದ್ದಕ್ಕಿದ್ದಂತೆ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾರೆ. ವೀಡಿಯೊದಲ್ಲಿ ದೋಭಾಲ್ ಹಿಂದಿಯಲ್ಲಿ ಹೇಳುತ್ತಾರೆ.ನಾನು ಮತ್ತೆ ಹುಟ್ಟಿದ್ದರೆ, ತಾಯಿ ದಯವಿಟ್ಟು ನನಗೆ ಪ್ರೀತಿಯನ್ನು ಕೊಡಿ... ಇದು ನನಗೆ ಅಗತ್ಯ ವಾಗಿತ್ತು. ಯಾರಿಗೆ ಫೋನ್ ಮಾಡಲಿ ಎಂದು ತಿಳಿಯುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದರು‌. ಕೊನೆಯಲ್ಲಿ, ಅವರು ಕೊನೆಯ ಸವಾರಿ ಎಂದು ಉಲ್ಲೇಖಿಸಿದ್ದರು.

Viral Video: ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ

ಸ್ವಲ್ಪ ಕ್ಷಣಗಳ ನಂತರ, ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಅತೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದ ಅವರು, ಇದ್ದಕ್ಕಿದ್ದಂತೆ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.‌ ಈ ದೃಶ್ಯ ವೈರಲ್ ಆಗಿದ್ದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಪಘಾತ ನಡೆದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ಅವರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಕೂಡ ಪಡೆಯುತ್ತಿದ್ದಾರೆ. ಅವರು ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅನುಯಾಯಿ ಗಳನ್ನು ಹೊಂದಿದ್ದಾರೆ. ಬಿಗ್ ಬಾಸ್ 17 ರಲ್ಲಿ ಕಾಣಿಸಿಕೊಂಡ ನಂತರ ಅವರು ವ್ಯಾಪಕ ಮನ್ನಣೆಯನ್ನು ಗಳಿಸಿದ್ದಾರೆ.