ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

20,000 ರೂ. ಕೊಟ್ಟರೆ ವೃದ್ಧರಿಗೂ ಹುಡುಗಿಯರು ಸಿಕ್ತಾರೆ.. ವಿವಾದ ಹುಟ್ಟುಹಾಕಿದ ಉತ್ತರಾಖಂಡ ಸಚಿವೆ ರೇಖಾ ಆರ್ಯರ ಪತಿ

ವೃದ್ದರು ಮದುವೆಯಾಗಲು ಬಯಸುವುದಾದರೆ ಬಿಹಾರದಲ್ಲಿ 20,000 ರಿಂದ 25,000 ರೂ.ಗೆ ಹುಡುಗಿಯರು ಸಿಗುತ್ತಾರೆ ಎಂದು ಉತ್ತರಾಖಂಡ ಸಚಿವೆ ರೇಖಾ ಆರ್ಯರ ಪತಿ ಗಿರ್ಧಾರಿ ಲಾಲ್ ಸಾಹು ಹೇಳಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇದನ್ನು ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಬಿಹಾರ ರಾಜ್ಯ ಮಹಿಳಾ ಆಯೋಗ ಖಂಡಿಸಿದೆ.

(ಸಂಗ್ರಹ ಚಿತ್ರ)

ಉತ್ತರಾಖಂಡ: ವೃದ್ದಾಪ್ಯದಲ್ಲಿ ಮದುವೆಯಾಗಲು ಬಯಸುತ್ತೀರಾ ? ಹಾಗಿದ್ದರೆ ನಿಮಗೆ ಬಿಹಾರದಲ್ಲಿ (Bihar girls) 20,000 ರಿಂದ 25,000 ರೂ.ಗೆ ಹುಡುಗಿಯರು ಸಿಗುತ್ತಾರೆ ಎಂದು ಉತ್ತರಾಖಂಡ ಸಚಿವೆ (Uttarakhand minister) ರೇಖಾ ಆರ್ಯರ (Rekha Arya) ಪತಿ ಗಿರ್ಧಾರಿ ಲಾಲ್ ಸಾಹು ಹೇಳಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral video) ಆಗಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಅಲ್ಮೋರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದರು ಎನ್ನಲಾಗಿದೆ. ಸಾಹು ಹೇಳಿಕೆಯನ್ನು ವಿರೋಧ ಪಕ್ಷ ಕಾಂಗ್ರೆಸ್ (Congress) ಮತ್ತು ಬಿಹಾರ ರಾಜ್ಯ ಮಹಿಳಾ ಆಯೋಗ (Bihar State Women Commission) ಖಂಡಿಸಿದೆ.

ವೃದ್ದರು ಮದುವೆಯಾಗಲು ಬಯಸುವುದಾದರೆ ಬಿಹಾರದಲ್ಲಿ ಹುಡುಗಿಯರು ಸಿಗುತ್ತಾರೆ ಎಂದು ಗಿರ್ಧಾರಿ ಲಾಲ್ ಸಾಹು ಹೇಳಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉತ್ತರಾಖಂಡ ಸಚಿವೆ ರೇಖಾ ಆರ್ಯ ಅವರ ಪತಿ ಗಿರ್ಧಾರಿ ಲಾಲ್ ಸಾಹು ಅವರು ಡಿಸೆಂಬರ್ ತಿಂಗಳಲ್ಲಿ ಅಲ್ಮೋರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೃದ್ದರು ಮದುವೆಯಾಗಲು ಬಿಹಾರದ ಹುಡುಗಿಯರು 20,000- 25,000 ರೂ. ಗೆ ಸಿಗುತ್ತಾರೆ ಎಂದು ಹೇಳಿ ವಿವಾದ ಉಂಟು ಮಾಡಿದ್ದರು. ಇವರ ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Ballari Firing: ಶಾಸಕ ಭರತ್‌ ರೆಡ್ಡಿ ಮೇಲೂ ಕೇಸ್‌, ಸತೀಶ್‌ ರೆಡ್ಡಿ ಗನ್‌ ಮ್ಯಾನ್‌ಗಳು ನಾಪತ್ತೆ

ಪತಿ ಸಾಹು ಹೇಳಿಕೆಗೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಖಾ ಆರ್ಯ ಅವರು ಕ್ಷಮೆಯಾಚಿಸಿದರೆ ಬಿಜೆಪಿ ನಾಯಕರು ಮೌನ ತಾಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಸಾಹು ನೀಡಿರುವ ಹೇಳಿಕೆ ಇಂತಿದೆ. ನೀವು ವೃದ್ಧಾಪ್ಯದಲ್ಲಿ ಮದುವೆಯಾಗುತ್ತೀರಾ? ಮದುವೆಯಾಗಲು ಸಾಧ್ಯವಾಗದಿದ್ದರೆ ನಾವು ನಿಮಗಾಗಿ ಬಿಹಾರದಿಂದ ಹುಡುಗಿಯನ್ನು ತರುತ್ತೇವೆ. ಅಲ್ಲಿ ನೀವು 20,000 ರಿಂದ 25,000 ರೂ.ಗೆ ಒಬ್ಬ ಹುಡುಗಿಯನ್ನು ಪಡೆಯಬಹುದು. ನನ್ನೊಂದಿಗೆ ಬನ್ನಿ, ನಾವು ನಿಮ್ಮ ಮದುವೆ ಮಾಡುತ್ತೇವೆ ಎಂದು ಅನೇಕ ಜನ ಮುಂದೆ ಹೇಳಿದ್ದಾರೆ.

ವಿವಾದ ಉಂಟಾದ ಬಳಿಕ ವಿಡಿಯೊ ಬಿಡುಗಡೆ ಮಾಡಿದ ಅವರು, ನನ್ನ ಮಾತುಗಳನ್ನು ತಿರುಚಲಾಗಿದೆ. ನಾನು ಸ್ನೇಹಿತನ ಮದುವೆಯ ಬಗ್ಗೆ ಮಾತ್ರ ಮಾತನಾಡಿದ್ದೇನೆ. ನನ್ನ ಮಾತುಗಳು ಯಾರನ್ನಾದರೂ ನೋಯಿಸಿದ್ದರೆ ಅನಾನು ಕೈಮುಗಿದು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಸಾಹು ಹೇಳಿಕೆಯನ್ನು ಬಿಜೆಪಿಯ ರಾಜ್ಯ ಘಟಕವು ಖಂಡಿಸಿದ್ದು, ಸಾಹು ಮತ್ತು ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಸಾಹು ಹೇಳಿಕೆಗಳು ಭಾರತದ ಮಹಿಳೆಯರಿಗೆ ಮಾಡಿರುವ ಅವಮಾನ ಎಂದು ಹೇಳಿದೆ.

ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಗಣೇಶ್ ಗೋಡಿಯಾಲ್ ಮಾತನಾಡಿ, ಸಚಿವ ರೇಖಾ ಆರ್ಯ ಅವರ ಪತಿಯ ಹೇಳಿಕೆ ಭಾರತದ ಹೆಣ್ಣುಮಕ್ಕಳಿಗೆ ಮಾಡಿರುವ ಅವಮಾನ ಎಂದು ತಿಳಿಸಿದ್ದಾರೆ.

"ಅವನನ್ನು ಜೀವಂತವಾಗಿ ಸುಟ್ಟು ಹಾಕಿದೆವು': ಹಿಂದೂ ಪೊಲೀಸ್ ಅಧಿಕಾರಿಯನ್ನು ಕೊಂದಿದ್ದು ನಾನೇ ಎಂದ ಬಾಂಗ್ಲಾ ಯುವಕ!

ಮಹಿಳೆಯರನ್ನು ಗೌರವಿಸುವ ಬಗ್ಗೆ ಬಿಜೆಪಿಯ ನಿಲುವನ್ನು ಈ ಹೇಳಿಕೆ ಸ್ಪಷ್ಟವಾಗಿ ಬಹಿರಂಗಪಡಿಸುತ್ತದೆ. ಬಿಜೆಪಿ ಇದಕ್ಕೆ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಮಹಿಳಾ ಮೋರ್ಚಾದ ರಾಜ್ಯ ಅಧ್ಯಕ್ಷೆ ಜ್ಯೋತಿ ರೌಟೇಲಾ ತಿಳಿಸಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯ ಪತಿಯಾಗಿ ಸಾಹು ಈ ರೀತಿ ಹೇಳಿಕೆ ನೀಡಿರುವುದು ನಾಚಿಕೆಗೇಡಿನ ವಿಷಯ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯ ಮಾಧ್ಯಮ ಉಸ್ತುವಾರಿ ಮನ್ವೀರ್ ಸಿಂಗ್ ಚೌಹಾಣ್ ಕೂಡ ಇದನ್ನು ಖಂಡಿಸಿದರು. ಬಿಹಾರ ರಾಜ್ಯ ಮಹಿಳಾ ಆಯೋಗವು ಈ ಬಗ್ಗೆ ಸಾಹು ಅವರಿಗೆ ನೊಟೀಸ್ ನೀಡುವುದಾಗಿ ಹೇಳಿದೆ.

ವಿದ್ಯಾ ಇರ್ವತ್ತೂರು

View all posts by this author