Rekha Gupta: ಸಮಾಜದಲ್ಲಿ ಜ್ಞಾನದ ಜ್ವಾಲೆ ಬೆಳಗಿಸುವವರು ಬ್ರಾಹ್ಮಣರು: ದೆಹಲಿ ಸಿಎಂ ರೇಖಾ ಗುಪ್ತಾ
ಬ್ರಾಹ್ಮಣರು ಧರ್ಮಗ್ರಂಥಗಳೊಂದಿಗೆ ಆಯುಧಗಳನ್ನೂ ಪೂಜಿಸುತ್ತಾರೆ. ಆಯುಧ ಮತ್ತು ಧರ್ಮಗ್ರಂಥಗಳಿಂದ ಮಾತ್ರ ಸಮಾಜ ಮತ್ತು ದೇಶವನ್ನು ರಕ್ಷಿಸಬಹುದು. ಸಮಾಜದಲ್ಲಿ ಜ್ಞಾನದ ಜ್ವಾಲೆ ಬೆಳಗಿಸುವವರು ಬ್ರಾಹ್ಮಣರು ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದ್ದು, ಇದು ಈಗ ಅನ್ಯ ಸಮುದಾಯದವರ ಟೀಕೆಗೆ ಕಾರಣವಾಗಿದೆ.

-

ನವದೆಹಲಿ: ಬ್ರಾಹ್ಮಣರು ಸಮಾಜದಲ್ಲಿ ಜ್ಞಾನದ ಜ್ವಾಲೆಯನ್ನು ಬೆಳಗಿಸುತ್ತಾರೆ. ಪ್ರತಿಯೊಂದು ಸರ್ಕಾರವು ಈ ಸಮುದಾಯದ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ (Delhi Chief Minister Rekha Gupta) ಹೇಳಿರುವ ಹೇಳಿಕೆ ಅನ್ಯ ಸಮುದಾಯವನ್ನು (Caste Remark) ಕೆರಳಿಸಿದೆ. ದೆಹಲಿಯ (Delhi) ಪಿತಾಂಪುರದಲ್ಲಿ (Pitampura) ಶ್ರೀ ಬ್ರಾಹ್ಮಣ ಸಭಾ (Shri Brahmin Sabha) ಆಯೋಜಿಸಿದ್ದ ಅಖಿಲ ಭಾರತ ಬ್ರಾಹ್ಮಣ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಜ್ಞಾನದ ಜ್ವಾಲೆಯನ್ನು ಯಾರಾದರೂ ಬೆಳಗಿಸುತ್ತಿದ್ದರೆ ಅದು ನಮ್ಮ ಬ್ರಾಹ್ಮಣ ಸಮುದಾಯ ಎಂದು ಹೇಳಿದರು.
ಬ್ರಾಹ್ಮಣರು ಧರ್ಮಗ್ರಂಥಗಳನ್ನು ಮಾತ್ರವಲ್ಲದೆ ಆಯುಧಗಳನ್ನೂ ಪೂಜಿಸುತ್ತಾರೆ. ಆಯುಧಗಳು ಮತ್ತು ಧರ್ಮಗ್ರಂಥಗಳ ಮೂಲಕ ಮಾತ್ರ ಸಮಾಜ ಮತ್ತು ದೇಶವನ್ನು ರಕ್ಷಿಸಬಹುದು ಎಂದು ಅವರು ತಿಳಿಸಿದರು.
ರೇಖಾ ಗುಪ್ತಾ ಹೇಳಿದ್ದೇನು?
#WATCH | Delhi | Addressing the All India Brahmin Conference organised by Shri Brahmin Sabha in Pitampura, CM Rekha Gupta says, "... If anyone is igniting the flame of knowledge in society, it is our Brahmin community. They worship not only scriptures but also weapons. Only… pic.twitter.com/NwiPpMIzkX
— ANI (@ANI) October 5, 2025
ಧರ್ಮವನ್ನು ಪ್ರಚಾರ ಮಾಡುವ ಬ್ರಾಹ್ಮಣರು ಸಮುದಾಯದಲ್ಲಿ ಸದ್ಭಾವನೆಯ ಮನೋಭಾವವನ್ನು ಬೆಳೆಸುತ್ತಿದ್ದಾರೆ. ಬ್ರಾಹ್ಮಣ ಸಮುದಾಯವು ಯಾವಾಗಲೂ ಸಮಾಜದ ಪ್ರಯೋಜನಕ್ಕಾಗಿ ಕೆಲಸ ಮಾಡಿದೆ. ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಬ್ರಾಹ್ಮಣ ಸಮುದಾಯದ ಕಲ್ಯಾಣಕ್ಕಾಗಿ ಕೆಲಸ ಮಾಡಿ ಅವರನ್ನು ಮುಂದೆ ಕೊಂಡೊಯ್ಯಬೇಕು ಎಂದು ಅವರು ಹೇಳಿದರು.
ಆಡಳಿತ ಹೇಗೆ ಕೆಲಸ ಮಾಡಬೇಕು ಎನ್ನುವ ಕುರಿತು ದಯವಿಟ್ಟು ನಿಮ್ಮ ಸಲಹೆಗಳನ್ನು ನೀಡುವುದನ್ನು ಮುಂದುವರಿಸಿ. 27 ವರ್ಷಗಳಿಂದ ಇಲ್ಲಿ ಆಡಳಿತ ನಿಧಾನಗತಿಯಲ್ಲಿ ಸಾಗುತ್ತಿದೆ. ನಮ್ಮ ಸುತ್ತಲಿನ ರಾಜ್ಯಗಳು ನಮ್ಮನ್ನು ಮೀರಿ ಅಭಿವೃದ್ಧಿ ಹೊಂದಿವೆ. ಈಗ ನಾವು ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸಲು ಸಮಯ ಬಂದಿದೆ. ದೆಹಲಿ ಮತ್ತು ಇಲ್ಲಿನ ಜನರ ಹಿತದೃಷ್ಟಿಯಿಂದ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.
ಇದನ್ನೂ ಓದಿ: ವಿರಾಜಪೇಟೆಯಿಂದ ಜಗದಗಲ ಹಾರಿದ ದೇವನಕ್ಕಿ ವೈದ್ಯರ ಪರಿಸರ ಕಾಳಜಿಗೆ 41 ವರ್ಷ !
ಎಲ್ಲ ಸಮುದಾಯಕ್ಕೂ ಸಮಾನ ಅವಕಾಶ ನೀಡಬೇಕು ಮತ್ತು ಸಮಾಜಕ್ಕೆ ಅವರ ಕೊಡುಗೆಯನ್ನು ಗೌರವಿಸಬೇಕು. ಒಗ್ಗೂಡಿದ ಸಮಾಜದಿಂದ ಮಾತ್ರ ನಾವು ಪ್ರಗತಿ ಸಾಧಿಸಬಹುದು ಎಂದು ಅವರು ಹೇಳಿದರು.