Viral News: ಬಿಹಾರದಲ್ಲಿ ಮದುಮಗನನ್ನು ಅಪಹರಿಸಿದ ನೃತ್ಯಗಾರರ ತಂಡ: ಕಾರಣವೇನು?
ಬಿಹಾರದ ಗೋಪಾಲ್ ಗಂಜ್ ಪ್ರದೇಶ ಒಂದರಲ್ಲಿ ನೃತ್ಯ ಮಾಡುವ ತಂಡವು ಸಿನಿಮಾ ರೀತಿಯಲ್ಲಿ ವರನನ್ನೇ ಅಪಹರಿಸಿದ್ದ ಅಪರೂಪದ ಘಟನೆ ನಡೆದಿದೆ. ನೃತ್ಯ ಗಾರರ ತಂಡ ಹಾಗೂ ವರನ ಕುಟುಂಬದ ನಡುವೆ ವೈಮನಸ್ಸು ಉಂಟಾಗಿದ್ದು ನೃತ್ಯ ತಂಡವು ವರನನ್ನೇ ಕಿಡ್ ನ್ಯಾಪ್ ಮಾಡಿರುವ ಘಟನೆ ನಡೆದಿದ್ದು ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.

Bihar Groom

ಪಾಟ್ನಾ: ಪ್ರತಿಯೊಬ್ಬರೂ ತಮ್ಮ ಮದುವೆ ಶಾಸ್ತ್ರ ಬದ್ಧವಾಗಿ ಆಗಬೇಕೆಂದು ಬಯಸುತ್ತಾರೆ. ವಿವಿಧ ಜಾತಿ, ಜನಾಂಗದ ಆಧಾರದ ಮೇಲೆ ವಿವಿಧ ಸಂಪ್ರದಾಯದ ಮೂಲಕ ಮದುವೆಯ ಶಾಸ್ತ್ರ ನಡೆಸಲಾಗುತ್ತದೆ. ಅಂತೆಯೇ ಮದುವೆಗೆ ಆಗಮಿಸುವ ಬಂಧುಗಳಿಗೆ ಮನೋರಂಜನೆ ಕಾರ್ಯಕ್ರಮ ಆಯೋಜಿಸುವುದು ಕೂಡ ಬಿಹಾರದ ಒಂದು ಸಂಪ್ರದಾಯ. ಮದುವೆ ವೇಳೆ ಬಿಹಾರದ ಶಾಸ್ತ್ರೀಯ ನೃತ್ಯಗಾರರು ಆಗಮಿಸಿ ಕುಣಿದು ಕುಟುಂಬದವರನ್ನು ರಂಜಿಸುವ ಸಂಪ್ರದಾಯವೂ ಕೂಡ ಇದೆ. ಅಂತೆಯೇ ಬಿಹಾರದ ಗೋಪಾಲ್‌ಗಂಜ್ ಪ್ರದೇಶ ಒಂದರಲ್ಲಿ ನೃತ್ಯ ಮಾಡುವ ತಂಡವು ಸಿನಿಮಾ ರೀತಿಯಲ್ಲಿ ವರನನ್ನೇ ಅಪಹರಿಸಿದ ಅಪರೂಪದ ಘಟನೆ ನಡೆದಿದೆ. ನೃತ್ಯಗಾರರ ತಂಡ ಹಾಗೂ ವರನ ಕುಟುಂಬದ ನಡುವೆ ವೈಮನಸ್ಸು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನೃತ್ಯ ತಂಡವು ವರನನ್ನೇ ಕಿಡ್ನಾಪ್ ಮಾಡಿರುವ ಘಟನೆ ನಡೆದಿದ್ದು, ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ (Viral News) ಆಗಿದೆ.
ಬಿಹಾರದ ಗೋಪಾಲ್‌ಗಂಜ್ ಪ್ರದೇಶ ಒಂದರಲ್ಲಿ ಮದುವೆ ಕಾರ್ಯಕ್ರಮ ಆಯೋಜಿಸಲಾಗಿದೆ. ಆ ವೇಳೆ ಆಗಮಿಸಿದ್ದ ನೃತ್ಯಗಾರರ ತಂಡದ ಅಚಾತುರ್ಯದಿಂದ ವರನಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ನೃತ್ಯಗಾರರ ತಂಡ ಹಾಗೂ ವರನ ಕುಟುಂಬಕ್ಕೆ ನೃತ್ಯ ಪ್ರದರ್ಶನವನ್ನು ಕೊನೆಗೊಳಿಸುವ ವಿಚಾರಕ್ಕೆ ಜಗಳ ಉಂಟಾಗಿ ಅಂತಿಮವಾಗಿ ಇದು ವರನ ಅಪಹರಣಕ್ಕೆ ಕಾರಣವಾಯಿತು ಎಂಬುದು ಪೊಲೀಸ್ ತನಿಖೆ ವೇಳೆ ಬಹಿರಂಗವಾಗಿದೆ.
ಇದನ್ನು ಓದಿ: Viral News: ಪತ್ನಿಯ ಕೈಗೆ ಗೆಳತಿಯ ಜತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ
ವರ ಸೋನು ಕುಮಾರ್ ಶರ್ಮಾ ವಿವಾಹದ ವಿಧಿವಿಧಾನಗಳನ್ನು ಮುಗಿಸಿ, ಸಮಾರಂಭದ ನಂತರ ಇತರ ಮದುವೆಯ ಮನೋರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಊಟದ ನಂತರ ಅತಿಥಿಗಳು ಲೌಂಡ್ ನಾಚ್ ನೃತ್ಯ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಸಾಕಷ್ಟು ಸಮಯ ಆದ ಕಾರಣ ನೃತ್ಯಗಾರರು ಕಾರ್ಯಕ್ರಮವನ್ನು ಕೊನೆಗೊಳಿಸಲು ಬಯಸಿದ್ದರು. ಆದರೆ ಈ ಸಂದರ್ಭ ಅತಿಥಿಗಳು ಮತ್ತಷ್ಟು ನೃತ್ಯ ಮಾಡುವಂತೆ ಒತ್ತಾಯಿಸಿದ್ದಾರೆ. ಇದೇ ಕಾರಣಕ್ಕೆ ವರನ ಸಂಬಂಧಿಕರಿಗೆ ನೃತ್ಯಗಾರರೊಂದಿಗೆ ಜಗಳ ಉಂಟಾಗಿದೆ. ಜಗಳದಲ್ಲಿ ಮುಸ್ಕಾನ್ ಕಿನ್ನರ್ ಎಂಬ ನರ್ತಕಿ ಗಾಯಗೊಂಡಿದ್ದು ಆಕೆಯನ್ನು ಆಸ್ಪತ್ರೆಗೆ ಕೂಡ ಕರೆದೊಯ್ಯಲಾಯಿತು.
ಕೋಪಗೊಂಡ ನೃತ್ಯಗಾರರ ತಂಡ ಸೇಡನ್ನು ತೀರಿಸಿಕೊಳ್ಳಲು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಬಳಿಕ ವರನನ್ನು ಸ್ಥಳದಿಂದ ಬಲವಂತವಾಗಿ ಅಪಹರಿಸಿದೆ. ವರನನ್ನು ಸಿವಾನ್ ಜಿಲ್ಲೆಗೆ ಕರೆದೊಯ್ದಿದ್ದು ಸುಮಾರು 9 ಗಂಟೆಗಳ ತನಿಖೆ ಬಳಿಕ ವರನನ್ನು ರಕ್ಷಿಸಲಾಗಿದೆ.ಈ ಅಪಹರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.