ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: 12 ಮೊಬೈಲ್‌, ಬೈಕ್‌, ಚಿನ್ನಾಭರಣ...ಭಿಕ್ಷುಕಿ ಮನೆಯಲ್ಲಿ ಖಜಾನೆ ಕಂಡು ದಂಗಾದ ಪೊಲೀಸರು

ಬಿಹಾರದ ಮಹಿಳಾ ಭಿಕ್ಷುಕಿಯ ಮನೆಗೆ ದಾಳಿ ನಡೆಸಿದ ಪೊಲೀಸರು ಅಲ್ಲಿ ಬೈಕ್‌, ಚಿನ್ನಾಭರಣ, ಮೊಬೈನ್‌ ಫೋನ್‌ನಂತಹ ದುಬಾರಿ ವಸ್ತುಗಳನ್ನು ಕಂಡು ದಂಗಾಗಿದ್ದಾರೆ. ಸದ್ಯ ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹಲವು ಕಡೆಗಳಿಂದ ಕದ್ದ ವಸ್ತುಗಳಿವು ಎಂದು ಪೊಲೀಸರು ತಿಳಿಸಿದ್ದಾರೆ.

ʼಶ್ರೀಮಂತʼ ಭಿಕ್ಷುಕಿ ಮನೆಗೆ ಪೊಲೀಸರ ದಾಳಿ

ಪೊಲೀಸರು ವಶಪಡಿಸಿಕೊಂಡ ವಸ್ತುಗಳು.

Profile Ramesh B Feb 5, 2025 10:29 PM

ಪಾಟ್ನಾ: ಸಾಮಾನ್ಯವಾಗಿ ಭಿಕ್ಷುಕರೆಂದರೆ ನಿಶ್ಚಿತ ಆದಾಯ ಇಲ್ಲದವರು, ಗುಡಿಸಲಿನಲ್ಲಿ ವಾಸಿಸುವವರು ಎನ್ನುವ ಭಾವನೆ ಎಲ್ಲರಲ್ಲಿದೆ. ದಿನ ದೂಡಲೂ ಒಡ್ಡಾಡುವ ಅವರ ಬಳಿ ಐಷಾರಾಮಿ ವಸ್ತುಗಳು ಇರುವುದನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಎಲ್ಲರ ಊಹೆಯನ್ನೂ ತಲೆಕೆಳಗಾಗಿಸುವಂತಹ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ಮಹಿಳಾ ಭಿಕ್ಷುಕಿಯ ಮನೆಗೆ ದಾಳಿ ನಡೆಸಿದ ಪೊಲೀಸರು ಅಲ್ಲಿ ಬೈಕ್‌, ಚಿನ್ನಾಭರಣ, ಮೊಬೈನ್‌ ಫೋನ್‌ನಂತಹ ದುಬಾರಿ ವಸ್ತುಗಳನ್ನು ಕಂಡು ದಂಗಾಗಿದ್ದಾರೆ. ಸದ್ಯ ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ (Viral News). ಅಷ್ಟಕ್ಕೂ ಈ ಎಲ್ಲ ವಸ್ತುಗಳು ಆಕೆಯ ಬಳಿ ಬಂದಿದ್ದಾರೂ ಹೇಗೆ? ಇಲ್ಲಿದೆ ಸಂಪೂರ್ಣ ವಿವರ.

ಬಿಹಾರದ ಮುಝಫರ್‌ಪುರ ಜಿಲ್ಲೆಯ ನೀಲಂ ದೇವಿ ಎನ್ನುವ ಮಹಿಳೆಯ ಮನೆಯಲ್ಲಿ ಕರ್ಜ ಠಾಣೆಯ ಪೊಲೀಸರು ಈ ವಸ್ತುಗಳು ಕಂಡು ಬೆಚ್ಚಿ ಬಿದ್ದಿದ್ದಾರೆ. ಸದ್ಯ ಆಕೆಯನ್ನು ವಶಕ್ಕೆ ಪಡೆದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.

ಏನಿದು ಘಟನೆ?

ಅನುಮಾನದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಮಧ್ವನ್‌ ಭೋಜ್‌ನಲ್ಲಿರುವ ಮಹಿಳೆಯ ಮನೆಯಲ್ಲಿ 12 ಮೊಬೈಲ್‌ ಫೋನ್‌, ವಿವಿಧ ದೇಶಗಳ ಬೆಳ್ಳಿ ನಾಣ್ಯ, ಐಷಾರಾಮಿ ಬೈಕ್‌ ಮತ್ತು ಚಿನ್ನಾಭರಣ ಕಂಡು ಬಂದಿದೆ. ಕಾಲುವೆ ಸಮೀಪದಲ್ಲಿ ಗುಡಿಸಲಿನಲ್ಲಿ ವಾಸಿಸುವ, ಭಿಕ್ಷೆ ಬೇಡುವ ಆಕೆಯ ಬಳಿ ಇಷ್ಟೊಂದು ದುಬಾರಿ ಬೆಲೆ ಬಾಳುವ ವಸ್ತು ಬಂದಿದ್ದು ಹೇಗೆ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ.

ನೀಲಂ ದೇವಿ ಮತ್ತು ಆಕೆಯ ಅಳಿಯ ಚುಟುಕ್‌ ಲಾಲ್‌ ವಿರುದ್ದ ಕರ್ಜ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಬೈಕ್‌ ಸೇರಿದಂತೆ ವಿವಿಧ ದುಬಾರಿ ವಸ್ತುಗಳನ್ನು ಮಹಿಳೆ ಮತ್ತು ಸಹಚರರು ಕದ್ದು ಮನೆಯಲ್ಲಿ ಗುಡೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಿಕ್ಷೆ ಬೇಡುತ್ತಿದ್ದ ನೀಲಂ ದೇವಿ ಕಳ್ಳತನಕ್ಕೆ ಸೂಕ್ತವಾದ ಮನೆಯನ್ನು ಆಯ್ಕೆ ಮಾಡುತ್ತಿದ್ದಳು. ಬಳಿಕ ಆಕೆಯ ಅಳಿಯ ಮನೆಗೆ ನುಗ್ಗಿ ದೋಚುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಕೆಟಿಎಂ ಬೈಕ್‌, ನೇಪಾಳ, ಕುವೈಟ್‌ಗಳ ಬೆಳ್ಳಿ ನಾಣ್ಯ, ಬೆಳ್ಳಿ, ಚಿನ್ನದ ಆಭರಣ, ವಿವಿಧ ಕಂಪನಿಗಳ ಮೊಬೈಲ್‌ ಫೋನ್‌ಗಳಿವೆ.

ಈ ಸುದ್ದಿಯನ್ನೂ ಓದಿ: Viral Video: ಹಸೆಮಣೆಯಲ್ಲೇ ವಧುವಿಗೆ ಕಪಾಳಮೋಕ್ಷ ಮಾಡಿದ ಸಬ್ ಇನ್ಸ್‌ಪೆಕ್ಟರ್‌! ವಿಡಿಯೊ ಫುಲ್‌ ವೈರಲ್‌

ಚಿನ್ನಾಭರಣಗಳ ಪೈಕಿ ಸರ, ಮೂಗಿನ ನತ್ತು ಸೇರಿದೆ. ಆದರೆ ವಿಚಾರಣೆ ವೇಳೆ ನೀಲಂ ಸೂಕ್ತ ಉತ್ತರ ನೀಡುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಚುಟುಕ್‌ ಲಾಲ್‌ ತಲೆ ಮರೆಸಿಕೊಂಡಿದ್ದಾನೆ. ಇವರಿಬ್ಬರು ಮಾತ್ರವಲ್ಲದೆ ಇನ್ನೊಂದಷ್ಟು ಮಂದಿ ಈ ವಂಚನೆಯ ಜಾಲದಲ್ಲಿದ್ದಾರೆ ಎನ್ನುವ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಅವರ ಪತ್ತೆಗೆ ಬಲೆ ಬೀಸಿದ್ದಾರೆ. ಶೀಘ್ರದಲ್ಲೇ ಉಳಿದವರನ್ನು ವಶಕ್ಕೆ ಪಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ. ಇತ್ತೀಚೆಗೆ ಚುಟುಕ್‌ ಲಾಲ್‌ ಕೆಟಿಎಂ ಬೈಕ್‌ನಲ್ಲಿ ವೇಗವಾಗಿ ಸಾಗುವ ವಿಡಿಯೊ ವೈರಲ್‌ ಆಗಿತ್ತು. ಇದಾದ ಬಳಿಕ ಪೊಲೀಸರು ಆತನ ಮೇಲೆ ಕಣ್ಣಿಟ್ಟು ತನಿಖೆ ಆರಂಭಿಸಿದ್ದರು. ಈ ವೇಳೆ ಆತನ ಬಂಡವಾಳ ಬಯಲಾಗಿದೆ.