ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬ್ಯಾಂಕ್‌ ಒಳಗೆ ಸಿಬ್ಬಂದಿಯನ್ನು ಹಿಗ್ಗಾ ಮಗ್ಗಾ ಥಳಿಸಿದ ಮ್ಯಾನೇಜರ್‌: ವಿಡಿಯೊ ವೈರಲ್‌

Viral Video: ಬ್ಯಾಂಕ್ ಶಾಖೆಯೊಂದರಲ್ಲಿ ಮ್ಯಾನೇಜರ್ ಸಿಬ್ಬಂದಿಗೆ ಒದೆಯುತ್ತಿರುವ ದೃಶ್ಯ ವೈರಲ್ ಆಗಿದೆ.‌ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಜೀಬಾಬಾದ್‌ನಲ್ಲಿರುವ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಈ ಘಟನೆ ನಡೆದಿದೆ. ಶಾಖಾ ವ್ಯವಸ್ಥಾಪಕ ಸುಧೀರ್ ಕುಮಾರ್ ಮತ್ತು ಸಹಾಯಕ ಶಾಖಾ ವ್ಯವಸ್ಥಾಪ ಗೌರವ್ ಸಿಂಗ್ ನಡುವೆ ಈ ಜಗಳ ನಡೆದಿದೆ.

ಉತ್ತರ ಪ್ರದೇಶದಲ್ಲಿ ಬ್ಯಾಂಕ್ ಮ್ಯಾನೇಜರ್‌ನಿಂದ ಸಹೋದ್ಯೋಗಿ ಮೇಲೆ ಹಲ್ಲೆ

ಲಖನೌ, ಅ. 10: ಮಾನವೀಯತೆ ಅನ್ನೋದು ಮರೆಯಾಗಿ ಹೋಗಿದೆ ಎನ್ನುವ ಮಾತು ಆಗಾಗ ಕೇಳುತ್ತಿರುತ್ತೇವೆ. ಇದಕ್ಕೆ ಸಾಕ್ಷಿ ಎಂಬಂತೆ ಬ್ಯಾಂಕ್ ಶಾಖೆಯೊಂದರಲ್ಲಿ ಮ್ಯಾನೇಜರ್ ಸಹೋದ್ಯೋಗಿಗೆ ಒದೆಯುತ್ತಿರುವ ದೃಶ್ಯ ವೈರಲ್ (Viral News) ಆಗಿದೆ.‌ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಜೀಬಾಬಾದ್‌ನಲ್ಲಿರುವ ಇಂಡಿಯನ್ ಬ್ಯಾಂಕ್ ಶಾಖೆಯೊಂದರಲ್ಲಿ ಈ ಘಟನೆ ನಡೆದಿದೆ. ಶಾಖಾ ವ್ಯವಸ್ಥಾಪಕ ಸುಧೀರ್ ಕುಮಾರ್ ಮತ್ತು ಸಹಾಯಕ ಶಾಖಾ ವ್ಯವಸ್ಥಾಪ ಗೌರವ್ ಸಿಂಗ್ ನಡುವೆ ಈ ಜಗಳ ನಡೆದಿದೆ.

ಶಾಖಾ ವ್ಯವಸ್ಥಾಪಕ ಸುಧೀರ್ ಕುಮಾರ್ ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಸಹಾಯಕ ಶಾಖಾ ವ್ಯವಸ್ಥಾಪಕ ಗೌರವ್ ಸಿಂಗ್ ಆರೋಪಿಸಿದ್ದಾರೆ. ಬ್ಯಾಂಕ್ ಒಳಗೆ ಸಹೋದ್ಯೋಗಿಯನ್ನು ಸುಧೀರ್ ಕುಮಾರ್ ಒದೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದಾಗಿ ಗೌರವ್ ಸಿಂಗ್ ನೆಲಕ್ಕೆ ಬಿದ್ದು ಪ್ರಜ್ಞೆ ತಪ್ಪಿದ್ದಾರೆ ಎಂದು ವರದಿಯಾಗಿದೆ. ಬ್ಯಾಂಕ್ ಒಳಗೆ ನಡೆದ ಹಲ್ಲೆಯು ಚರ್ಚೆಗೆ ಗ್ರಾಸವಾಗಿದೆ.

ವಿಡಿಯೊ ನೋಡಿ:



ಸುಧೀರ್ ಕುಮಾರ್ ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಸಹಾಯಕ ಶಾಖಾ ವ್ಯವಸ್ಥಾಪಕ ಗೌರವ್ ಸಿಂಗ್ ಆರೋಪಿಸಿದ್ದಾರೆ. ಅವರ ಆರೋಪಗಳ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು ಪ್ರಕರಣವನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು!

ರಜೆಯಲ್ಲಿದ್ದಾಗ ತಮ್ಮನ್ನು ಶಾಖೆಗೆ ಕರೆಸಿ, ಸುಧೀರ್ ಕುಮಾರ್ ತೀವ್ರವಾಗಿ ನಿಂದಿಸಿ, ಅವಮಾನಿಸಿದ್ದಾರೆ. ​ತಮ್ಮ ಮೇಲೆ ಹಲ್ಲೆ ನಡೆಸಿ, ಒದೆಯಲಾಗಿದೆ ಎಂದು ಸಿಂಗ್ ಆರೋಪಿಸಿದ್ದಾರೆ. ಇಂತಹ ಅಹಂಕಾರದ ವರ್ತನೆ ತೋರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಘಟನೆಯ ನಂತರ, ಸಿಂಗ್ ಶಾಖಾ ವ್ಯವಸ್ಥಾಪಕರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.