Viral Video: ಕ್ಲಾಸ್ ರೂಂನಲ್ಲೇ ಬರ್ತ್‌ಡೇ ಪಾರ್ಟಿ; ಕೇಕ್ ಕತ್ತರಿಸಿ ಬಿಯರ್ ಕುಡಿದು ಮೋಜು ಮಾಡಿದ ವಿದ್ಯಾರ್ಥಿಗಳು; ವಿಡಿಯೊ ನೋಡಿ
ಮಧ್ಯಪ್ರದೇಶದ ಮೌಗಂಜ್‍ನ ಸರ್ಕಾರಿ ಕಾಲೇಜಿನ ತರಗತಿಯೊಂದರಲ್ಲಿ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸೇರಿಕೊಂಡು ಕೇಕ್ ಕತ್ತರಿಸಿ ಹಾಗೂ ಬಿಯರ್ ಕುಡಿದು ಹುಟ್ಟುಹಬ್ಬದ ಆಚರಣೆ ಮಾಡಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಲೇಜಿನಲ್ಲೇ ಎಣ್ಣೆ ಪಾರ್ಟಿ ಮಾಡಿದ ಪುಂಡರು

ಭೋಪಾಲ್: ಮಧ್ಯಪ್ರದೇಶದ ಮೌಗಂಜ್‍ನ ಸರ್ಕಾರಿ ಕಾಲೇಜಿನ ತರಗತಿಯೊಂದರಲ್ಲಿ ವಿದ್ಯಾರ್ಥಿಗಳು ಕೇಕ್ ಕಟ್ ಮಾಡಿ ಹಾಗೂ ಬಿಯರ್ ಕುಡಿದು ಹುಟ್ಟುಹಬ್ಬದ ಆಚರಣೆ ಮಾಡಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ವಿಡಿಯೊ ಜನರ ಆಕ್ರೋಶಕ್ಕೆ ಕಾರಣವಾಗಿದೆ. ವೈರಲ್ ಆದ ವಿಡಿಯೊದಲ್ಲಿ ಒಬ್ಬ ವಿದ್ಯಾರ್ಥಿ ಕೇಕ್ ಕತ್ತರಿಸುತ್ತಿದ್ದರೆ, ಇನ್ನೊಬ್ಬ ಬಿಯರ್ ಬಾಟಲಿಯನ್ನು ತೆರೆಯುವುದು ಸೆರೆಯಾಗಿತ್ತು. ಆಶ್ಚರ್ಯವೆಂದರೆ ಈ ಪಾರ್ಟಿಯಲ್ಲಿ ಶಿಕ್ಷಕರು ಕೂಡ ವಿದ್ಯಾರ್ಥಿಗಳಿಗೆ ಸಾಥ್ ನೀಡಿದ್ದಾರೆ. ಸರ್ಕಾರಿ ಹನುಮಾನ್ ಕಾಲೇಜಿನ ತರಗತಿಯೊಳಗೆ ಈ ಘಟನೆ ನಡೆದಿದ್ದು, ಇದು ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ.
टेबल पर रखा हुआ केक और हाथ में बीयर की बोतल, और साथ में हैप्पी बर्थडे का शोर..यह घटना किसी फाइव स्टार होटल या रिजॉर्ट की नहीं है बल्कि शिक्षा के मंदिर की है. यह वीडियो मध्य प्रदेश के मऊगंज जिले के शासकीय हनुमना महाविद्यालय से सामने आया है जहां शिक्षा के मंदिर में जाम छलकाए जा रहे… pic.twitter.com/aSob42GdKu
— NDTV India (@ndtvindia) February 12, 2025
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕರು ಈ ಕೃತ್ಯವನ್ನು ಖಂಡಿಸಿದ್ದಾರೆ. ಇದು "ಕಲಿಕೆಯ ದೇವಾಲಯ"ಕ್ಕೆ ಸೂಕ್ತವಲ್ಲ ಎಂದು ಕರೆದಿದ್ದಾರೆ. ಈ ನಡುವೆ ಇದಕ್ಕೆ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನೆಟ್ಟಿಗರು ಈ ಘಟನೆಯನ್ನು ಖಂಡಿಸಿದ್ದಾರೆ. ಶಿಸ್ತಿನ ಕೊರತೆ ಮತ್ತು ಈ ಸಂದರ್ಭದಲ್ಲಿ ಶಿಕ್ಷಕರ ಉಪಸ್ಥಿತಿಯನ್ನು ಅನೇಕರು ಟೀಕಿಸಿದ್ದಾರೆ. ಕೆಲವರು ಕಾಲೇಜು ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇನ್ನೂ ಕೆಲವರು ಇದು ಶಿಕ್ಷಣ ಸಂಸ್ಥೆಗೆ ಅವಮಾನ ಎಂದು ಹೇಳಿದ್ದಾರೆ.
ಒಬ್ಬರು, ಶಿಕ್ಷಕರು ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, “ಅವರು ಶಾಲಾ ಪರಿಸರದ ಪಾವಿತ್ರ್ಯಕ್ಕೆ ಅಗೌರವ ತೋರುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಇನ್ನೊಬ್ಬರು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಸಿಯುತ್ತಿರುವ ನೈತಿಕ ಮಾನದಂಡಗಳ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Post: ಒಂದು ಕೈಯಲ್ಲಿ ಮಗು, ಇನ್ನೊಂದು ಕೈಯಲ್ಲಿ ಬಿಯರ್; ಮನಶಾಸ್ತ್ರಜ್ಞೆಯ ಮನಸ್ಸನ್ನು ಅರಿತವರು ಯಾರು? ಇಲ್ಲಿದ ವೈರಲ್ ಫೊಟೋ
ಶಾಲಾ ಕಾಲೇಜುಗಳಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಛತ್ತೀಸ್‍ಗಢದ ಬಿಲಾಸ್ಪುರದ ಮಸ್ತೂರಿ ಪ್ರದೇಶದ ಭಟ್ಚೌರಾ ಗ್ರಾಮದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕೆಲವು ವಿದ್ಯಾರ್ಥಿನಿಯರು ಶಾಲಾ ಆವರಣದಲ್ಲಿ ಬಿಯರ್ ಕುಡಿಯುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊ ವೀಕ್ಷಕರಲ್ಲಿ ಆಕ್ರೋಶವನ್ನು ಹುಟ್ಟುಹಾಕಿತು ಮತ್ತು ಈ ವಿಷಯದ ಬಗ್ಗೆ ತ್ವರಿತ ತನಿಖೆಯನ್ನು ಶುರು ಮಾಡುವಂತೆ ಶಿಕ್ಷಣ ಅಧಿಕಾರಿಗಳಿಗೆ ಅನೇಕರು ಮನವಿ ಮಾಡಿದ್ದರು.