ಆಗ್ರಾ,ಜೂ.26: ಸ್ಮಾರ್ಟ್ ಸಿಟಿ ಆಗ್ರಾದಲ್ಲಿ ಜಿಜೆಪಿ ಕೌನ್ಸಿಲರ್ ವಿಶೇಷ ಪ್ರತಿಭಟನೆ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಸರಕಾರಿ ಅಧಿಕಾರಿಗಳಿಗೆ ಪ್ರಜ್ಞೆ ಬರಲಿ ಎಂದು ಚರಂಡಿಯ ಕೊಳಚೆ ನೀರಲ್ಲಿ ನಿಂತು ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಕೊಳಚೆ ನೀರಿನ ಚರಂಡಿ ಮಧ್ಯದಲ್ಲಿ ಅವರು ನಿಂತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೊ ವೈರಲ್ (Viral News) ಆಗುತ್ತಿದ್ದಂತೆ ಸರಕಾರದ ನಿರ್ಲಕ್ಷ್ಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ವೀಡಿಯೊದಲ್ಲಿ ಒಬ್ಬ ವ್ಯಕ್ತಿ ಕೌನ್ಸಿಲರ್ ಕುತ್ತಿಗೆಗೆ ಹೂವಿನ ಹಾರವನ್ನು ಹಾಕಿ ಅವರಿಗೆ ಪೇಟವನ್ನು ಧರಿಸಿರುವುದನ್ನು ನೋಡಬಹುದು. ಸುತ್ತಲೂ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಶುಭ ಕೋರಿದ್ದಾರೆ.
ವಿಡಿಯೊ ನೋಡಿ:
ಉತ್ತರ ಪ್ರದೇಶದ ಆಗ್ರಾದಲ್ಲಿ ನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹೋರಾಡಲು ಬಿಜೆಪಿ ಕೌನ್ಸಿಲರ್ ಒಬ್ಬರು ಈ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಗ್ರಾಮದ ಚರಂಡಿ ನೀರು ಸ್ವಚ್ಛ ಮಾಡದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಲು ಅವರು ಈ ಕೊಳಚೆ ನೀರಲ್ಲೆ ನಿಂತು ಕೇಕ್ ಕತ್ತರಿಸಿದ್ದಾರೆ.
ಚರಂಡಿಗಳ ಶುಚಿಗೊಳಿಸುವಿಕೆಯನ್ನು ಮಳೆಗಾಲಕ್ಕೆ ಮುಂಚಿತವಾಗಿ ಮಾಡುವುದೆಂದು ನಗರಸಭೆ ಹೇಳಿ ಕೊಂಡಿದ್ದರೂ, 12 ಬಾರಿ ದೂರು ನೀಡಿದರೂ ಚರಂಡಿಯನ್ನು ಸ್ವಚ್ಛಗೊಳಿಸಿಲ್ಲ ಎಂದು ಆರೋಪಿಸಲಾಗಿದೆ. ಹೀಗಾಗಿ ಬಿಜೆಪಿ ಕೌನ್ಸಿಲರ್ ಚರಂಡಿ ಸ್ವಚ್ಛವಾಗದೆ ಇದ್ದಾಗ ಕೊಳಚೆ ನೀರಲ್ಲೆ ನಿಂತು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.
Viral Video: ಭಕ್ತರಿಗೆ 'ತಿಲಕ' ಇಟ್ಟು 3 ಗಂಟೆಗಳಲ್ಲಿ 2,350 ರುಪಾಯಿ ಗಳಿಸಿದ ಯುವಕ
ವೈರಲ್ ಆಗಿರುವ ದೃಶ್ಯದಲ್ಲಿ ಕೌನ್ಸಿಲರ್ ಕಿಶನ್ ನಾಯಕ್ ಅವರು ಕೊಳಚೆ ನೀರಿನಲ್ಲಿ ನಿಂತಿರುವುದು ಕಂಡುಬಂದಿದೆ. ನೀರಿನಲ್ಲೇ ಒಂದು ಟೇಬಲ್ ಇಟ್ಟು, ಅದರ ಮೇಲೆ ಬಿಳಿ ಬಣ್ಣದ ಶಾಲು ಹಾಕಿ ಜನ್ಮದಿನದ ಕೇಕ್ ಇಡಲಾಗಿತ್ತು. ಕೌನ್ಸಿಲರ್‌ಗೆ ಮಲ್ಲಿಗೆ, ಕನ ಕಾಂಬರ ಹೂವಿನ ಹಾರ ಹಾಕಿ, ತಲೆಗೆ ಬ್ರೈಟ್ ಪಿಂಕ್ ಬಣ್ಣದ ಪೇಟ ತೊಡಿಸಿ ಸಂಭ್ರಮಿಸಿದರು..
ಆಡಳಿತ ಪಕ್ಷದ ಕೌನ್ಸಿಲರ್ ಈ ರೀತಿ ಚರಂಡಿಗೆ ಇಳಿದು ಪ್ರತಿಭಟಿಸಿ ರುವುದು ಅಧಿಕಾರಿಗಳಿಗೆ ಮುಜುಗರ ಉಂಟುಮಾಡಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಕೆಲಸ ಮಾಡದ ಅಧಿಕಾರಿಗಳಿಗೆ ಇದೇ ರೀತಿ ಪಾಠ ಕಲಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ..