ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ಭಕ್ತರಿಗೆ 'ತಿಲಕ' ಇಟ್ಟು 3 ಗಂಟೆಗಳಲ್ಲಿ 2,350 ರುಪಾಯಿ ಗಳಿಸಿದ ಯುವಕ

Viral News: ರಿಷಿಕೇಶದ ಗಂಗಾ ಘಾಟ್‌ನಲ್ಲಿ ಯುವಕನೊಬ್ಬ ಆಗಮಿಸಿದ ಭಕ್ತರಿಗೆ ತಿಲಕ ಇಟ್ಟು ಉತ್ತಮ ಆದಾಯ ಗಳಿಸಿದ್ದಾನೆ. ಕೇವಲ 3 ಗಂಟೆಗಳಲ್ಲಿ ಭಕ್ತರಿಗೆ ತಿಲಕ ಇಟ್ಟು ಈತ ಬರೋಬ್ಬರಿ 2,350 ರುಪಾಯಿ ಗಳಿಸಿದ್ದಾನೆ.‌ ಹೇಗೆ ಈ ಹಣ ಗಳಿಸಿದೆ ಎಂಬುದನ್ನು ಆತನೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಕಡಿಮೆ ಸಮಯದಲ್ಲಿ ಇಷ್ಟು ಹಣ ಸಂಪಾದನೆ ಮಾಡಿರುವ ಬಗ್ಗೆ ಅನೇಕರು ಅಚ್ಚರಿ ಮತ್ತು ಕುತೂಹಲ ವ್ಯಕ್ತಪಡಿಸಿದ್ದಾರೆ. ಅನೇಕರು ಕಾರ್ಪೊರೇಟ್ ಉದ್ಯಮಕ್ಕಿಂತ ಇದೇ ಬೆಸ್ಟ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ರಿಷಿಕೇಶದ ಘಾಟ್‌ನಲ್ಲಿ 3 ಗಂಟೆ 'ತಿಲಕ' ಇಟ್ಟು 2,350 ರುಪಾಯಿ ಗಳಿಸಿದ ಯುವಕ

ಭಕ್ತರಿಗೆ 'ತಿಲಕ' ಇಟ್ಟು ಆದಾಯ ಗಳಿಸಿದ ಯುವಕ -

Profile
Pushpa Kumari Jun 25, 2026 11:33 PM

ಡೆಹ್ರಾಡೂನ್‌, ಜೂ‌. 25: ಇತ್ತೀಚಿಗೆ ಧಾರ್ಮಿಕ ಕ್ಷೇತ್ರಕ್ಕೆ ಬರುವ ಭಕ್ತರಿಗೆ ತಿಲಕ ಇಡುವ ಸಂಪ್ರದಾಯ ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಉತ್ತರಾಖಂಡ ರಿಷಿಕೇಶದ ಗಂಗಾ ಘಾಟ್‌ನಲ್ಲಿ ಯುವಕನೊಬ್ಬ ಆಗಮಿಸಿದ ಭಕ್ತರಿಗೆ ತಿಲಕ ಇಟ್ಟು ಉತ್ತಮ ಆದಾಯ ಗಳಿಸಿದ್ದಾನೆ. ಕೇವಲ 3 ಗಂಟೆಗಳಲ್ಲಿ ಭಕ್ತರಿಗೆ ತಿಲಕ ಇಟ್ಟು ಈತ ಬರೋಬ್ಬರಿ 2,350 ರುಪಾಯಿ ಗಳಿಸಿದ್ದಾನೆ.‌ ಹೇಗೆ ಈ ಹಣ ಗಳಿಸಿದೆ ಎಂದು ಆತನೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಶೇರ್ (Viral News) ಮಾಡಿಕೊಂಡಿದ್ದಾನೆ. ಕಡಿಮೆ ಸಮಯದಲ್ಲಿ ಇಷ್ಟು ಹಣ ಸಂಪಾದನೆ ಮಾಡಿರುವ ಬಗ್ಗೆ ಅನೇಕರು ಅಚ್ಚರಿ ಮತ್ತು ಕುತೂಹಲ ವ್ಯಕ್ತಪಡಿಸಿದ್ದಾರ.. ಅನೇಕರು ಕಾರ್ಪೊರೇಟ್ ಉದ್ಯಮಕ್ಕಿಂತ ಇದೇ ಬೆಸ್ಟ್ ಆಯ್ಕೆ ಎಂದಿದ್ದಾರೆ.

​ಬಂದ ಭಕ್ತರಿಗೆ ತಿಲಕ ಇಡುವ ಮೂಲಕ ಕೇವಲ ಮೂರು ಗಂಟೆಗಳಲ್ಲಿ 2,350 ರುಪಾಯಿ ಈತ ಸಂಪಾದಿಸಿದ್ದಾನೆ. ಈ ಯುವಕ ತನ್ನ ಅನುಭವವನ್ನು ವಿಡಿಯೊದಲ್ಲಿ ತಿಳಿಸಿದ್ದು, ಋಷಿಕೇಶದಲ್ಲಿ ಗಂಗಾ ಘಾಟ್‌ ಬಳಿ ಕೆಲವು ಗಂಟೆಗಳ ಕಾಲ ಭಕ್ತರಿಗೆ ತಿಲಕ ಹಚ್ಚಲು ನಿರ್ಧರಿಸಿದ್ದು ಹೇಗೆ ಎಂಬುದನ್ನು ವಿವರಿಸಿದ್ದಾನೆ. ಆತನ ಪ್ರಕಾರ, ಆರಂಭದಲ್ಲಿ ಅಷ್ಟೇನೂ ಜನ ಇರಲಿಲ್ಲ. ಆದರೆ ಸಂಜೆಯಾಗುತ್ತಿದ್ದಂತೆ ಜನ ಸಾಗರವೇ ಬಂದಿತ್ತು ಎಂದು ಖುಷಿ ವ್ಯಕ್ತ ಪಡಿಸಿದ್ದಾನೆ.

ವಿಡಿಯೊ ನೋಡಿ:

ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಯುವಕನು ಈ ವಿಡಿಯೊ ಹಂಚಿಕೊಂಡಿದ್ದಾನೆ.‌‌ ರಿಷಿಕೇಶದ ಘಾಟ್‌ಗೆ ಆಗಮಿಸುವ ಭಕ್ತರಿಗೆಲ್ಲ ತಿಲಕ ಇಡುವ ಕೆಲಸವನ್ನು ಈತ ಮಾಡಿದ್ದಾನೆ. ತಿಲಕ ಇಟ್ಟುಕೊಂಡ ಭಕ್ತರು ಸ್ವಇಚ್ಛೆಯಿಂದ 10 ರುಪಾಯಿಂದ ಹಿಡಿದು 100 ರುಪಾಯಿವರೆಗೆ ಹಣ ನೀಡಿದ್ದಾರೆ. 3 ಗಂಟೆಯ ಕೊನೆಯಲ್ಲಿ ಆತನ ಬಳಿ ಬರೋಬ್ಬರಿ 2,350 ರುಪಾಯಿ ಸಂಗ್ರಹವಾಗಿತ್ತು.

ಟಿಕೆಟ್ ರಹಿತವಾಗಿ ಪ್ರಯಾಣಿಸಲು ರೈಲಿನ ಶೌಚಾಲಯದಲ್ಲಿ ಕುಳಿತ ಪ್ರಯಾಣಿಕರು

ಆತ ಗಳಿಸಿದ ಮೊತ್ತ ಗಮನಿಸಿದ ನಂತರ ನೆಟ್ಟಿಗರು ಒಂದು ತಿಂಗಳಲ್ಲಿ ಆದಾಯ ಹೇಗಿರಬಹುದು ಎಂದು ಅಂದಾಜಿಸಿದ್ದಾರೆ. ಮೂರು ಗಂಟೆಗಳ ಆದಾಯದ ಆಧಾರದ ಮೇಲೆ, ತಿಲಕ ಇಟ್ಟರೆ ತಿಂಗಳಿಗೆ ಸುಮಾರು 70,000 ರುಪಾಯಿ ಗಳಿಸಬಹುದು ಎಂದು ಲೆಕ್ಕಾಚಾರ ನಡೆದಿದೆ. "ವರ್ಷಕ್ಕೆ 8.5 ಲಕ್ಷ ರುಪಾಯಿ ಪ್ಯಾಕೇಜ್. ಕೆಲಸ ಇಲ್ಲದ ಸ್ನೇಹಿತರಿಗೆ ಶೇರ್ ಮಾಡಿ" ಎಂದು ಬರೆದಿದ್ದಾನೆ.

ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಒಬ್ಬರು, "ನೀವು ನನ್ನನ್ನು ಇಲ್ಲಿ ನೋಡಿದರೆ ಆಘಾತಕ್ಕೊಳಗಾಗಬೇಡಿ" ಎಂದು ಬರೆದಿದ್ದಾರೆ. ಮತ್ತೊಬ್ಬರು, "ನಾನು ಈಗಲೇ ರಿಷಿಕೇಶಕ್ಕೆ ಬಸ್ ಹತ್ತಿದ್ದೇನೆ" ಎಂದು ತಮಾಷೆ ಮಾಡಿದ್ದಾರೆ.