ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೈಲಿನಲ್ಲಿ 'ಯೇ ತುನೇ ಕ್ಯಾ ಕಿಯಾ' ಹಾಡು ಹಾಡಿದ ದಿವ್ಯಾಂಗ ವ್ಯಕ್ತಿ; ಕಣ್ಣಾಲಿಗಳನ್ನು ಒದ್ದೆ ಮಾಡುವ ವಿಡಿಯೊ ವೈರಲ್!

ಗುಜರಾತ್‍ನ ವಡೋದರಾಕ್ಕೆ ಹೋಗುವ ರೈಲಿನಲ್ಲಿ ಗಾಯಕ ವಿಕಾಸ್‍ ಎಂಬ ಅಂಧವ್ಯಕ್ತಿ 'ಯೇ ತುನೇ ಕ್ಯಾ ಕಿಯಾ' ಎಂಬ ಎಮೋಷನಲ್‌ ಬಾಲಿವುಡ್ ಹಾಡನ್ನು ಹಾಡಿದ್ದಾನೆ.ಇವನ ಹಾಡಿಗೆ ತಕ್ಕ ಹಾಗೇ ಅವನ ಸ್ನೇಹಿತರು ನೀರಿನ ಬಾಟಲಿಗಳನ್ನು ಬಡಿಯುವುದು ಹಾಗೇ ರೈಲಿನ ಸೀಟನ್ನು ತಟ್ಟಿ ಅವನಿಗೆ ಸಾಥ್‌ ನೀಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಗಾಂಧಿನಗರ: ರೈಲಿನ ಪ್ರಯಾಣದ ವೇಳೆ ಪ್ರಯಾಣಿಕರು‌ ನೃತ್ಯ ಮಾಡುವುದು, ಸ್ಟಂಟ್‌ ಮಾಡುವುದು ಹಾಗೇ ಮಿನಿ ಸಂಗೀತ ಕಚೇರಿ ನಡೆಸುವ ವಿಡಿಯೊಗಳು ಈ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್‌ ಸದ್ದು ಮಾಡಿತ್ತು. ಇದೀಗ ಗುಜರಾತ್‍ನ ವಡೋದರಾಕ್ಕೆ ಚಲಿಸುತ್ತಿದ್ದ ರೈಲಿನಲ್ಲಿ ದಿವ್ಯಾಂಗ ವ್ಯಕ್ತಿಯ ಹೃದಯಸ್ಪರ್ಶಿ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. ಆತ 'ಯೇ ತುನೇ ಕ್ಯಾ ಕಿಯಾ' ಎಂಬ ಭಾವಪೂರ್ಣ ಬಾಲಿವುಡ್ ಹಾಡನ್ನು ಹಾಡಿದ್ದಾನೆ. ಆತನ ಸ್ನೇಹಿತರು ನೀರಿನ ಬಾಟಲಿಗಳು ಮತ್ತು ರೈಲಿನ ಸೀಟುಗಳನ್ನು ಹಾಡಿನ ಲಯಕ್ಕೆ ತಕ್ಕ ಹಾಗೇ ಬಡಿಯುವ ಮೂಲಕ ಸಾಥ್‌ ನೀಡಿದ್ದಾರೆ.

ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಇದು 7 ಮಿಲಿಯನ್ ವ್ಯೂವ್ಸ್‌, 1.1 ಮಿಲಿಯನ್ ಲೈಕ್‍ಗಳು ಮತ್ತು 23,000 ಕಾಮೆಂಟ್‍ಳೊಂದಿಗೆ ವೈರಲ್ ಆಗಿದೆ. ಈ ಅದ್ಭುತ ಕ್ಷಣವನ್ನು ಸಹ ಪ್ರಯಾಣಿಕರೊಬ್ಬರು ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ.ಅಂದಹಾಗೇ ಆ ಗಾಯಕನ ಹೆಸರು ವಿಕಾಸ್ ಎಂಬುದಾಗಿ ಗುರುತಿಸಿದ್ದಾರೆ.

ಗಾಯಕ ವಿಕಾಸ್‌ ಹಾಡಿದ ಹಾಡಿನ ವಿಡಿಯೊ ಇಲ್ಲಿದೆ ನೋಡಿ...



ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಅದಕ್ಕೆ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. "ಇದು ತುಂಬಾ ಅದ್ಭುತ ಮತ್ತು ಸುಂದರವಾಗಿದೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ವಾಹ್" ಎಂದು ಇನ್ನೊಬ್ಬರು ಬರೆದಿದ್ದಾರೆ.

ಈ ಹಿಂದೆ ದೆಹಲಿ ಮೆಟ್ರೋ ರೈಲಿನಲ್ಲಿ ಮಹಿಳೆಯರ ಗುಂಪು ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ನುಡಿಸುವುದರ ಜೊತೆಗೆ ಭಜನೆಗಳನ್ನು ಹಾಡಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ರೈಲು ಪ್ರಯಾಣಿಕರಿಂದ ತುಂಬಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:‌Viral Video: ಸಖತ್‌ ವೈರಲ್‌ ಆಯ್ತು ಮೂವರು ಸಹೋದರರ ಈ ಕ್ಯೂಟ್‌ ಡ್ಯಾನ್ಸ್‌! ನೆಟ್ಟಿಗರು ಹೇಳಿದ್ದೇನು?

ವೈರಲ್ ಆದ ವಿಡಿಯೊದಲ್ಲಿ ಮಹಿಳೆಯರು ಮೆಟ್ರೋದೊಳಗೆ ಜೋರಾಗಿ ಭಜನೆಗಳನ್ನು ಮಾಡಿದ್ದಾರೆ. ಅವರು ಡೋಲಕ್ ಮತ್ತು ಕರ್ತಾಲ್‍ನಂತಹ ವಾದ್ಯಗಳನ್ನು ನುಡಿಸುತ್ತಾ ಭಕ್ತಿಗೀತೆಗಳನ್ನು ಪಠಿಸಿದ್ದರು. ನಂತರ ಸಮವಸ್ತ್ರ ಧರಿಸಿದ ಸಿಐಎಸ್ಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಇತರರಿಗೆ ಉಪದ್ರವ ಅಥವಾ ಅನಾನುಕೂಲತೆಯನ್ನು ಉಂಟುಮಾಡಿದ್ದಕ್ಕಾಗಿ ಮಹಿಳೆಯರನ್ನು ಗದರಿಸಿದ್ದರು. ಈ ಘಟನೆಯನ್ನು ಯಾವುದೇ ಲಿಖಿತ ದೂರು ಅಥವಾ ದಂಡವಿಲ್ಲದೆ ಪರಿಹರಿಸಲಾಗಿದೆ ಎನ್ನಲಾಗಿದೆ.