ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಂಬ್ಯುಲೆನ್ಸ್‌ನಲ್ಲಿ ರೋಗಿಯ ರಕ್ತದ ಕಲೆ; ಪತ್ನಿಯಿಂದಲೇ ವಾಹನ ಶುಚಿಗೊಳಿಸಿದ ವೈದ್ಯರು

Medic Makes Wife Wash Entire Vehicle: ಗಾಯಗೊಂಡ ರೋಗಿಯೊಬ್ಬನ ರಕ್ತದ ಕಲೆ ಆಂಬ್ಯುಲೆನ್ಸ್‌ನಲ್ಲಿದ್ದ ಕಾರಣ ಆತನ ಪತ್ನಿಯಿಂದಲೇ ವಾಹನವನ್ನು ಶುಚಿಗೊಳಿಸಿರುವ ಅಮಾನವೀಯ ಘಟನೆ ಮಧ್ಯ ಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಪತ್ನಿಯಿಂದಲೇ ವಾಹನ ಶುಚಿಗೊಳಿಸಿದ ವೈದ್ಯರು

ಭೋಪಾಲ್‌, ಏ. 29: ಗಾಯಗೊಂಡ ರೋಗಿಯೊಬ್ಬನ ರಕ್ತದ ಕಲೆ 108 ಆಂಬ್ಯುಲೆನ್ಸ್‌ (108 Ambulance)ನಲ್ಲಿ ಇದ್ದ ಕಾರಣ ಆತನ ಪತ್ನಿಯಿಂದಲೇ ವಾಹನವನ್ನು ಶುಚಿಗೊಳಿಸಿರುವ ಅಮಾನವೀಯ ಘಟನೆ ಮಧ್ಯ ಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಆಂಬ್ಯುಲೆನ್ಸ್ ಚಾಲಕ ಮತ್ತು ತುರ್ತು ವೈದ್ಯಕೀಯ ತಂತ್ರಜ್ಞ (ಇಎಂಟಿ)ನನ್ನು ವಜಾಗೊಳಿಸಲಾಗಿದೆ.

ಕಟ್ನಿ ಜಿಲ್ಲಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಕರೇಲಾ ಗ್ರಾಮದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ರಾಹುಲ್ ಬರ್ಮನ್ ಅವರನ್ನು 108 ಆಂಬ್ಯುಲೆನ್ಸ್ ಕರೆತಂದಿತ್ತು. ಈ ಬಗ್ಗೆ ತನಿಖೆ ನಡೆಸಿದ ಕಟ್ನಿ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ರಾಜ್ ಸಿಂಗ್ ಠಾಕೂರ್, ಗಾಯಗೊಂಡ ರೋಗಿಯ ರಕ್ತವು ಆಂಬ್ಯುಲೆನ್ಸ್‌ನಲ್ಲಿ ಅಂಟಿದೆ. ಕರ್ತವ್ಯದಲ್ಲಿದ್ದ ಇಎಂಟಿ ಮೋಹಿತ್ ಖಾಟಿಕ್ ಅವಕು ರೋಗಿಯ ಪತ್ನಿ ಪ್ರಮೀಳಾ ಬರ್ಮನ್ ಅವರನ್ನು ಆಂಬ್ಯುಲೆನ್ಸ್ ಸ್ವಚ್ಛಗೊಳುವಂತೆ ಹೇಳಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಆಕೆಯಿಂದಲೇ ವಾಹನ ತೊಳೆಯುವಂತೆ ಮಾಡಲಾಯಿತು.

ಇಲ್ಲಿದೆ ವಿಡಿಯೊ:



ಈ ಕೃತ್ಯವು ಶಿಷ್ಟಾಚಾರಗಳನ್ನು ಉಲ್ಲಂಘಿಸುತ್ತದೆ ಮತ್ತು ಸ್ವೀಕಾರಾರ್ಹವಲ್ಲ ಎಂದು ಠಾಕೂರ್ ಹೇಳಿದರು. ಘಟನೆಯ ವಿಡಿಯೊ ವ್ಯಾಪಕ ಗಮನ ಸೆಳೆಯಿತು. ಜಿಲ್ಲಾಧಿಕಾರಿ ಆಶಿಶ್ ತಿವಾರಿ ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿದರು. ವಿಚಾರಣೆಯ ನಂತರ, ಆಂಬ್ಯುಲೆನ್ಸ್ ಸೇವೆಯನ್ನು ನಿರ್ವಹಿಸುತ್ತಿದ್ದ ಕಂಪನಿಯಾದ ಜೆಎಇಎಸ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್, ಪೈಲಟ್ ದೇವಾ ಸಾಹು ಮತ್ತು ಇಎಂಟಿ ಮೋಹಿತ್ ಖಾಟಿಕ್ ಇಬ್ಬರನ್ನೂ ವಜಾಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಘಟನೆಗಳು ನಡೆಯದಂತೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಸ್ತಕ ಖರೀದಿ ವಿಚಾರಕ್ಕೆ ಪೋಷಕರ ವಿರುದ್ಧ ಕಿರುಚಾಡಿದ ಪ್ರಾಂಶುಪಾಲೆ

ಮದುವೆಯ ದಿನವೇ ಅಪಘಾತ: ವಧು ದುರ್ಮರಣ

ವಧುವೊಬ್ಬಳು ಅಪಘಾತದಲ್ಲಿ ದುರ್ಮರಣಕ್ಕೀಡಾದ ದುರ್ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮದುವೆಯ ದಿನ ಬೆಳಗ್ಗೆ ಸಹೋದರನೊಂದಿಗೆ ಬೈಕ್‍ನಲ್ಲಿ ವಧು ಬ್ಯೂಟಿ ಪಾರ್ಲರ್‌ಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಬರಿಯಾರ್‌ಪುರದ ಗೌರ್ ಕೋಥಿ ಗ್ರಾಮದ ನಿವಾಸಿ ರಚನಾ ಪಾಸ್ವಾನ್ (22) ಸಾವನ್ನಪ್ಪಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಟ್ರೇಲರ್ ಚಾಲಕನನ್ನು ಬಂಧಿಸಲಾಗಿದೆ. ಮನೆಯಿಂದ ಸುಮಾರು 10 ಕಿ.ಮೀ. ದೂರದಲ್ಲಿ ಈ ಅಪಘಾತ ಸಂಭವಿಸಿದೆ.