ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತದ ಸಂಸ್ಕೃತಿಗೆ ಫಿದಾ: ಕರ್ನಾಟಕ ನಂಬರ್ 1 ಎಂದ ಪ್ರಸಿದ್ಧ ಟ್ರಾವೆಲ್ ಇನ್‌ಫ್ಲ್ಯುಯೆನ್ಸರ್‌

Viral Video: ಹಲವು ಟ್ರಾವೆಲ್ ಇನ್‌ಫ್ಲ್ಯುಯೆನ್ಸರ್‌ಗಳು ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಹಲವು ಘಟನೆಗಳನ್ನು ನೋಡಿದ್ದೇವೆ. ಇದೀಗ ಪ್ರಸಿದ್ಧ ಜಾಗತಿಕ ಪ್ರವಾಸಿಗರೊಬ್ಬರು ಭಾರತದ ಹಲವು ರಾಜ್ಯಗಳನ್ನು ಹೊಗಳಿದ್ದು, ಕರ್ನಾಟಕಕ್ಕೆ ನಂಬರ್ 1 ಪಟ್ಟ ನೀಡಿದ್ದಾರೆ.‌ ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕರ್ನಾಟಕ ನಂಬರ್ 1 ಎಂದ ಪ್ರಸಿದ್ಧ ಟ್ರಾವೆಲ್ ಇನ್‌ಫ್ಲ್ಯುಯೆನ್ಸರ್‌

ಕರ್ನಾಟಕಕ್ಕೆ ನಂಬರ್ 1 ಸ್ಥಾನ ನೀಡಿದ ಇನ್‌ಸ್ಟಾಗ್ರಾಮ್‌ ಇನ್‌ಫ್ಲ್ಯುಯೆನ್ಸರ್‌ ಜಾಕ್ ಹೀಟನ್ -

Profile
Pushpa Kumari Apr 28, 2026 7:51 PM

ಬೆಂಗಳೂರು, ಏ. 27: ಭಾರತಕ್ಕೆ ಭೇಟಿ ನೀಡುವ ವಿದೇಶಿಗರ ಸಂಖ್ಯೆ ಹೆಚ್ಚಾಗುತ್ತಿದೆ.‌ ಅದರಲ್ಲೂ ಐತಿಹಾಸಿಕ ಸ್ಥಳ, ಇಲ್ಲಿನ ಸಂಸ್ಕೃತಿ, ಆಹಾರ ಪದ್ದತಿಗೆ ಹಲವು ವಿದೇಶಿಗರು ಫಿದಾ ಆಗಿದ್ದಾರೆ. ಹೆಚ್ಚಿನ ಟ್ರಾವೆಲ್ ಇನ್‌ಫ್ಲ್ಯುಯೆನ್ಸರ್‌ಗಳು ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದೀಗ ಪ್ರಸಿದ್ಧ ಜಾಗತಿಕ ಪ್ರವಾಸಿಯೊಬ್ಬರು ಭಾರತದ ರಾಜ್ಯಗಳ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದು, ಕರ್ನಾಟಕಕ್ಕೆ ನಂಬರ್ 1 ಪಟ್ಟ ನೀಡಿದ್ದಾರೆ.‌ ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.

ಜಾಗತಿಕ ಪ್ರವಾಸಿ ಮತ್ತು ಪ್ರಸಿದ್ಧ ಇನ್‌ಸ್ಟಾಗ್ರಾಮ್‌ ಇನ್‌ಫ್ಲ್ಯುಯೆನ್ಸರ್‌ ಜಾಕ್ ಹೀಟನ್ ಭಾರತಕ್ಕೆ ಭೇಟಿ ನೀಡಿದ್ದು, ಕರ್ನಾಟಕದ ಹಲವು ಸ್ಥಳಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕರ್ನಾಟಕವನ್ನು ಭಾರತದ ನಂಬರ್‌ 1 ರಾಜ್ಯವೆಂದು ಹೇಳಿದ್ದಾರೆ. ಜತೆಗೆ ಬೆಂಗಳೂರು ಎಲ್ಲಕ್ಕಿಂತ ಮುಂದಿರುವ ಭವಿಷ್ಯದ ಅದ್ಬುತ ನಗರ ಎಂದು ಅವರು ಬಣ್ಣಿಸಿದ್ದಾರೆ.

ವಿಡಿಯೊ ನೋಡಿ:

ಇನ್‌ಸ್ಟಾಗ್ರಾಮ್‌ ಇನ್‌ಫ್ಲ್ಯುಯೆನ್ಸರ್‌ ಜ್ಯಾಕ್ ಹೀಟನ್ ಈ ವಿಡಿಯೊ ಪೋಸ್ಟ್ ಮಾಡಿದ್ದಾರೆ. ಬೆಂಗಳೂರು ನಗರವು ಕಾಲಕ್ಕಿಂತ ಮುಂದಿದೆ. ಇಲ್ಲಿನ ಆಧುನಿಕ ಜೀವನ ಶೈಲಿ, ಸ್ಟಾರ್ಟ್‌ಅಪ್ ಉತ್ಸಾಹ, ಇಲ್ಲಿನ ಆಚರಣೆ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿನ ದೇವಾಲಯ, ವಿಭಿನ್ನ ಸಂಸ್ಕೃತಿ ಹಾಗೂ ವಾತಾವರಣ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆ; ಮುಂದೇನಾಯ್ತು?

ಜ್ಯಾಕ್ ಬೆಂಗಳೂರಿನಲ್ಲಿ ಎರಡು ವಾರಗಳನ್ನು ಕಳೆದಿದ್ದು ವಿಶೇಷ ಆಹಾರ ಶೈಲಿ, ಆಚರಣೆಗೆ ಅಚ್ಚರಿ ಸೂಚಿಸಿದ್ದಾರೆ. ಕರ್ನಾಟಕವನ್ನು ಅವರು ಇಲ್ಲಿಯವರೆಗೆ ಭೇಟಿ ನೀಡಿದ ಅತ್ಯುತ್ತಮ ರಾಜ್ಯ ಎಂದು ಹೇಳಿದ್ದಾರೆ. "ನನಗೆ ಕರ್ನಾಟಕದ ಬಗ್ಗೆ ನಿಜವಾದ ನಿರೀಕ್ಷೆಗಳಿರಲಿಲ್ಲ. ಆದರೆ ಅದು ನನಗೆ ಬಹಳಷ್ಟು ಆಶ್ಚರ್ಯವನ್ನುಂಟು ಮಾಡಿತು. ಬೆಂಗಳೂರು ನಂಬಲಾಗದಷ್ಟು ವಾಸಿಸಲು ಯೋಗ್ಯವೆಂದು ನಾನು ಕಂಡುಕೊಂಡೆ. ಯುವಕರು ತಮಗಾಗಿ ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರು ನನಗೆ ವಿಶೇಷ ಸ್ಥಾನ ನೀಡಿದೆ‌ʼʼ ಎಂದಿದ್ದಾರೆ. ಇದೇ ವೇಳೆ ಟ್ರಾಫಿಕ್ ಬಗ್ಗೆ ಮಾತನಾಡಿದ್ದು, ʼʼಇದು ಭೀಕರವಾಗಿದ್ದು ಇದೊಂದು ಬಿಟ್ಟರೆ ಬೆಂಗಳೂರು ಬಹಳಷ್ಟು ವಾಸಿಸಲು ಯೋಗ್ಯʼʼ ಎಂದಿದ್ದಾರೆ.