ಬೆಂಗಳೂರಿನಲ್ಲಿ ಮಹಿಳೆಯ ಮೇಲೆ ಬಸ್ ಹತ್ತಿಸಲು ಯತ್ನಿಸಿದ ಬಿಎಂಟಿಸಿ ಚಾಲಕ; ವಿಡಿಯೋ ವೈರಲ್
ಬಿಎಂಟಿಸಿ ಬಸ್ ಚಾಲಕನೊಬ್ಬ ಮಹಿಳೆಯ ಮೇಲೆ ಬಸ್ ಹತ್ತಿಸಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಕ್ಷೀನ್ಸ್ ಜಂಕ್ಷನ್ ಬಳಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಪಿ ಚಾಲಕ ಪ್ರಶಾಂತ್‌ನನ್ನು ಅಮಾನತುಗೊಳಿಸಲಾಗಿದೆ.


ಬೆಂಗಳೂರು: ಮೇ 23ರಂದು ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಸಿಗ್ನಲ್‌ನಲ್ಲಿ ಬಿಎಂಟಿಸಿ ಬಸ್ ಚಾಲಕನೊಬ್ಬ (BMTC Bus Driver) ಮಾತಿನ ಚಕಮಕಿಯ ಸಂದರ್ಭದಲ್ಲಿ ಮಹಿಳೆಯೊಬ್ಬರ ಮೇಲೆ ಬಸ್ ಹತ್ತಿಸಲು ಯತ್ನಿಸಿದ ಘಟನೆ ನಡೆದಿದೆ. ಇನ್ನೊಂದು ಘಟನೆಯಲ್ಲಿ ಆಟೋ ಚಾಲಕನಿಗೆ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ಮ್ಯೂಸಿಯಂ ರಸ್ತೆಯಿಂದ ಎಂಜಿ ರಸ್ತೆಗೆ ತೆರಳುತ್ತಿದ್ದ ಬಿಎಂಟಿಸಿ ಬಸ್‌ನ ಚಾಲಕನೊಂದಿಗೆ ಮಹಿಳೆಯೊಬ್ಬರು ವಾದಕ್ಕಿಳಿದಿದ್ದಾರೆ. ಈ ವೇಳೆ ಚಾಲಕ ಬಸ್‌ನ ಮುಂದೆ ನಿಂತಿದ್ದ ಮಹಿಳೆಯ ಮೇಲೆ ವಾಹನವನ್ನು ಚಲಾಯಿಸಿದ್ದಾನೆ. ಈ ಘಟನೆಯ ಡ್ಯಾಶ್‌ಕ್ಯಾಮ್ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಆಟೋ ಚಾಲಕನೊಬ್ಬ ತನ್ನ ಕಾಲಿನ ಮೇಲೆ ಆಟೋ ಓಡಿಸಿದನೆಂದು ಆರೋಪಿಸಿ, ಚಿತ್ರೀಕರಣ ಮಾಡಿದ್ದಕ್ಕಾಗಿ ಮಹಿಳೆಯೊಬ್ಬಳು ಚಾಲಕನಿಗೆ ಚಪ್ಪಲಿಯಿಂದ ಹಲವಾರು ಬಾರಿ ಹೊಡೆದಿದ್ದಾಳೆ. ವೈರಲ್ ವಿಡಿಯೊದಲ್ಲಿ “ರೆಕಾರ್ಡ್ ಮಾಡಲು ಯಾರಿಂದ ಅನುಮತಿ ಪಡೆದೆ?” ಎಂದು ಮಹಿಳೆ ಪ್ರಶ್ನಿಸಿದರೆ, “ಯಾರಿಂದ ಅನುಮತಿ ಪಡೆಯಬೇಕು?” ಎಂದು ಚಾಲಕ ತಿರುಗೇಟು ನೀಡಿದ್ದಾನೆ. ಈ ವಾಗ್ವಾದ ತೀವ್ರಗೊಂಡು, ಮಹಿಳೆ ಚಪ್ಪಲಿಯಿಂದ ಚಾಲಕನಿಗೆ ಹೊಡೆಯುತ್ತಾಳೆ.
ವೈರಲ್ ವಿಡಿಯೊ ಇಲ್ಲಿದೆ:
Bengaluru: BMTC suspended a driver who allegedly tried to run over a woman blocking his bus after a minor collision near Cubbon Park police station on May 23. The woman confronted him after the bus brushed her car. A probe is underway. Bus: KA57 F2046, Route: JJ Nagar–Nagawara pic.twitter.com/eb3d58fJ8k
— ChristinMathewPhilip (@ChristinMP_) June 1, 2025
ವಿಡಿಯೊದಲ್ಲಿ ಮಹಿಳೆ ಫೋನ್‌ನಲ್ಲಿ ಮಾತನಾಡುತ್ತ, “ಚಾಲಕ ನನ್ನ ಕಾಲಿನ ಮೇಲೆ ಆಟೋ ಓಡಿಸಿದ, ಅವಾಚ್ಯವಾಗಿ ನಡೆದುಕೊಂಡ, ಈಗ ರೆಕಾರ್ಡ್ ಮಾಡುತ್ತಿದ್ದಾನೆ” ಎಂದು ಆರೋಪಿಸಿದ್ದಾಳೆ. ಚಾಲಕ ಕನ್ನಡದಲ್ಲಿ ಒಬ್ಬ ವ್ಯಕ್ತಿಗೆ ತನ್ನ ಕಡೆಯ ಸ್ಟೋರಿಯನ್ನು ವಿವರಿಸುವ ದೃಶ್ಯವೂ ಕಂಡುಬಂದಿದೆ. ಈ ಘಟನೆಯ ಬಳಿಕ ಆಟೋ ಚಾಲಕ ದೂರು ದಾಖಲಿಸಿದ್ದು, ಬೆಳ್ಳಂದೂರು ಪೊಲೀಸರು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದೀಗ ಆಕೆ ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದಾಳೆ.