ಬೀಜಿಂಗ್, ಜ. 29: ಸ್ನೇಹಿತರಿದ್ದರೆ ಜೀವನವೇ ಖುಷಿಯಲ್ಲಿ ಕಳೆದಂತೆ ನಮ್ಮ ಸುಖ, ಕಷ್ಟ- ದುಖಃಗಳನ್ನು ಶೇರ್ ಮಾಡಿಕೊಳ್ಳಲು ಸ್ನೇಹಿತರು ಪ್ರಮುಖರಾಗುತ್ತಾರೆ. ಅಂತೆಯೇ ಇಲ್ಲೊಬ್ಬ ಬಾಲಕ ಸ್ನೇಹಿತರ ಕರೆ ಕೇಳಿ 55 ದಿನಗಳ ಬಳಿಕ ಕೋಮದಿಂದ ಎಚ್ಚರಗೊಂಡಿದ್ದಾನೆ. ಚೀನಾದಲ್ಲಿ ಈ ಆಶ್ಚರ್ಯಕರ ಘಟನೆ ಕಂಡು ಬಂದಿದ್ದು ಬರೋಬ್ಬರಿ 55 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ 8 ವರ್ಷದ ಬಾಲಕ, ತನ್ನ ಶಾಲಾ ಸ್ನೇಹಿತರ ಧ್ವನಿಯನ್ನು ಕೇಳಿ ಮತ್ತೆ ಪ್ರಜ್ಞೆಗೆ ಬಂದಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಹುನಾನ್ ಪ್ರಾಂತ್ಯದ ಯುಯಾಂಗ್‌ನ ವಿದ್ಯಾರ್ಥಿ ಚುಕ್ಸಿ ಎಂಬವ ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು ಕೋಮಾಕ್ಕೆ ಜಾರಿದ್ದನು. ಅಪಘಾತದಲ್ಲಿ ಅವನ ಮೆದುಳಿಗೆ ತೀವ್ರ ಹಾನಿ ಮತ್ತು ಶ್ವಾಸಕೋಶದ ಗಾಯ ಗಳಾಗಿವೆ. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಬಾಲಕ ಬದುಕುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದರು. ಎಲ್ಲರೂ ಬಾಲಕನ ಬಗ್ಗೆ ಭರವಸೆ ಕಳೆದುಕೊಂಡರೂ ಆತನ ತಾಯಿ ಮಾತ್ರ ಮಗ ಬದುಕುತ್ತಾನೆ ಎನ್ನುವ ನಂಬಿಕೆ ಯಲ್ಲಿದ್ದರು. ಚಿಕಿತ್ಸೆಗಾಗಿ ತನ್ನ ಮಗನನ್ನು ಹುಡುಕುತ್ತಾ ಹಲವಾರು ಆಸ್ಪತ್ರೆಗಳಿಗೆ ಕರೆದೊಯ್ದರು ಸಾಧ್ಯವಾಗಿಲ್ಲ. ಬಳಿಕ ಪರಿಚಿತ ಶಬ್ದಗಳಿಂದ ಅವನ ಮೆದುಳನ್ನು ಉತ್ತೇಜಿಸಲು ವೈದ್ಯರ ಸಲಹೆಯನ್ನು ಪಡೆದಿದ್ದಾರೆ.
ಇದರ ಮೇಲೆ ಕಾರ್ಯನಿರ್ವಹಿಸುತ್ತಾ, ಬಾಲಕನ ತಾಯಿ ಶಾಲೆಯ ಎಚ್ಚರಗೊಳ್ಳುವ ಸಂಗೀತ ಮತ್ತು ಬೆಳಗಿನ ವ್ಯಾಯಾಮದ ಹಾಡಿಗಳನ್ನು ಸಂಗ್ರಹಿಸಿ ಪ್ರತಿದಿನ ಅವನ ಹಾಸಿಗೆಯ ಪಕ್ಕದಲ್ಲಿ ಕೇಳಿಸಿದರು. ಶಾಲೆಯ ಶಿಕ್ಷಕರು ಮಾಡುತ್ತಿದ್ದ ಗಣಿತ ಪಾಠದ ಆಡಿಯೋಗಳನ್ನು ಸತತವಾಗಿ ಕೇಳಿಸಿದರು. ಅದೇ ಸಮಯದಲ್ಲಿ, ಲಿಯು ಅವರ ಶಿಕ್ಷಕರು ಅವರಿಗಾಗಿ ಸಣ್ಣ ವೀಡಿಯೊಗಳನ್ನು ರೆಕಾರ್ಡ್ ಮಾಡಲು ತಮ್ಮ ಸಹಪಾಠಿಗಳನ್ನು ಸಂಘಟಿಸಿದರು. ಕ್ಲಿಪ್‌ಗಳಲ್ಲಿ, ಮಕ್ಕಳು ಬಾಲಕನ ಹೆಸರನ್ನು ಕರೆದರು, ಜೋಕ್‌ಗಳನ್ನು ಹಂಚಿಕೊಂಡರು, ಅವರ ನೆಚ್ಚಿನ ಹಾಡನ್ನು ಹಾಡಿದರು.
Viral Video: ಭಾರತೀಯ ಮೊಮೊಸ್ ರುಚಿಗೆ ಅಮೆರಿಕದ ಯುವಕ ಫುಲ್ ಫಿದಾ
ಅದರಲ್ಲಿ ಒಬ್ಬ ಬಾಲಕ, "ಚುಕ್ಸಿ, ಬೇಗ ಎದ್ದೇಳು.. ನಾವಿಬ್ಬರೂ ಸೇರಿ ಫುಟ್‌ಬಾಲ್ ಆಡೋಣ" ಎಂದು ಕರೆ ನೀಡಿದ್ದ. ಮತ್ತೊಬ್ಬಳು ಗೆಳತಿ, ನಾವೆಲ್ಲರೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ, ಚುಕ್ಸಿ...ನೀನು ನಮ್ಮ ಮಾತು ಕೇಳಲು ಸಾಧ್ಯವಾದರೆ, ದಯವಿಟ್ಟು ನಿನ್ನ ಕಣ್ಣುಗಳನ್ನು ತೆರೆ ಎಂದು ಹೇಳಿದಳು. ಸಹಪಾಠಿಗಳ ಧ್ವನಿ ಕೇಳಿಸಿಕೊಳ್ಳುತ್ತಿದ್ದಂತೆ ಬಾಲಕನ ಕಣ್ಣರೆಪ್ಪೆಗಳಲ್ಲಿ ಚಲನೆ ಕಂಡುಬಂತು. ಶಿಕ್ಷಕರ ಧ್ವನಿ ಕೇಳಿದಾಗ ಬಾಲಕನ ಮುಖದಲ್ಲಿ ಕಿರುನಗು ಮೂಡಿತು. 55 ನೇ ದಿನ, ಅವನು ಪ್ರಜ್ಞೆ ಮರಳಿ ಪಡೆದಿದ್ದು ಆತನ ಎಡಗೈಯನ್ನು ಚಲಿಸಲು ಸಾಧ್ಯವಾಯಿತು.
ಇತ್ತೀಚೆಗೆ ಆತನ ಶಿಕ್ಷಕರು ಮತ್ತು ಗೆಳೆಯರು ಆಸ್ಪತ್ರೆಗೆ ಭೇಟಿ ನೀಡಿದಾಗ, ಶಿಕ್ಷಕರು ತಮಾಷೆಯಾಗಿ "ನಿನಗೆ ಇನ್ನು ಮುಂದೆ ಹೋಂವರ್ಕ್ ಇಲ್ಲ ಎಂದರು. ಇದನ್ನು ಕೇಳಿದ ಬಾಲಕ ಕಷ್ಟಪಟ್ಟು ಕಣ್ಣು ತೆರೆದು ಕೈಬೀಸಿದ್ದಾನೆಲಿಯು ಅವರ ಆರೋಗ್ಯವು ಸ್ಥಿರವಾಗಿ ಸುಧಾರಿಸುತ್ತಿದೆ ಎಂದು ವರದಿಗಳು ತಿಳಿಸಿವೆ.