ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ರೆಸ್ಟೋರೆಂಟ್‍ನಲ್ಲಿ ಲೋಟದೊಳಗೆ ಮೂತ್ರ ವಿಸರ್ಜಸಿದ ಬಾಲಕ; ಸಿಬ್ಬಂದಿ ಮಾಡಿದ್ದೇನು?

ಚೀನಾದ ಹ್ಯಾಂಗ್ಝೌನಲ್ಲಿರುವ ಫುಯುವಾನ್ಜು ರೆಸ್ಟೋರೆಂಟ್‍ನಲ್ಲಿ ಎರಡು ವರ್ಷದ ಬಾಲಕನೊಬ್ಬನಿಗೆ ಜೋರು ಮೂತ್ರ ಬಂದ ಕಾರಣ ಅದನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೆ ತಾಯಿ ಹೇಳಿದಂತೆ ಗ್ಲಾಸ್‍ನಲ್ಲಿ ಮೂತ್ರ ಮಾಡಿದ್ದಾನೆ. ಗ್ರಾಹಕರು ಬಳಸುವ ಗ್ಲಾಸ್‍ನಲ್ಲಿ ಬಾಲಕ ಮೂತ್ರ ಮಾಡಿದ್ದನ್ನು ಕಂಡು ಅಲ್ಲಿದ್ದ ಗ್ರಾಹಕರು ಆಘಾತಕ್ಕೊಳಗಾಗಿದ್ದಾರೆ.ಇದೀಗ ಈ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral News) ಆಗಿದೆ.

ಬೀಜಿಂಗ್‌: ಚಿಕ್ಕ ಮಕ್ಕಳಿಗೆ ಜೋರು ಮೂತ್ರ ಬಂದಾಗ ಅವರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಆದರೆ ತಾಯಿಯಾದವಳು ಮಕ್ಕಳಿಗೆ ಮೂತ್ರ ವಿಸರ್ಜನೆಯನ್ನು ಸರಿಯಾದ ಸ್ಥಳದಲ್ಲಿ ಮಾಡಬೇಕು ಎಂಬುದನ್ನು ತಿಳಿಸಿಕೊಡಬೇಕು. ಆದರೆ ಇತ್ತೀಚೆಗೆ ಚೀನಾದ ಹ್ಯಾಂಗ್ಝೌನಲ್ಲಿರುವ ಫುಯುವಾನ್ಜು ರೆಸ್ಟೋರೆಂಟ್‍ನಲ್ಲಿ ಎರಡು ವರ್ಷದ ಬಾಲಕನೊಬ್ಬನಿಗೆ ಜೋರು ಮೂತ್ರ ಬಂದ ಕಾರಣ ಅದನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೆ ಅವನು ಒದ್ದಾಡುತ್ತಿದ್ದಾಗ ಅವನ ತಾಯಿ ಅವನನ್ನು ವಾಶ್ ರೂಂಗೆ ಕರೆದುಕೊಂಡು ಹೋಗುವ ಬದಲು ಗ್ಲಾಸ್‍ನಲ್ಲಿ ಮೂತ್ರ ವಿಸರ್ಜನೆ ಮಾಡಲು ಹೇಳಿದ್ದಾಳೆ. ಪುಟ್ಟ ಮಗು ಎದ್ದು ನಿಂತು, ತನ್ನ ಪ್ಯಾಂಟ್ ಅನ್ನು ತೆಗೆದು ಗ್ಲಾಸ್‍ನಲ್ಲಿ ಮೂತ್ರ ಮಾಡಿದೆ. ಅವನ ತಾಯಿ ತನ್ನ ಮಗುವಿಗೆ ತಪ್ಪು ಮಾಡಲು ಹೇಳಿಕೊಟ್ಟಿದ್ದಲ್ಲದೇ ಅವನ ಕೃತ್ಯಗಳನ್ನು ಸಮರ್ಥಿಸಿಕೊಂಡಿದ್ದಾಳೆ.ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral News) ಆಗಿದೆ.

ಬಾಲಕ ಊಟ ಮಾಡುತ್ತಿದ್ದಾಗ ಜೋರು ಮೂತ್ರ ಬರುತ್ತಿರುವುದಾಗಿ ತಾಯಿಗೆ ಹೇಳಿದ್ದಾನೆ. ಆಗ ಆ ಬಾಲಕನ ವಯಸ್ಸಾದ ಸಂಬಂಧಿಯೊಬ್ಬರು ಒಂದು ಕಸದ ಬುಟ್ಟಿಯನ್ನು ತಂದು ಬಾಲಕನಿಗೆ ಅದರಲ್ಲಿ ಮೂತ್ರ ಮಾಡಲು ಹೇಳಿದ್ದಾರೆ. ಆದರೆ ತಾಯಿ ಅದಕ್ಕೆ ಬೇಡ ಎಂದು ಹೇಳಿ ಅವನಿಗೆ ನೇರವಾಗಿ ಗ್ಲಾಸ್‍ಗೆ ಮೂತ್ರ ಮಾಡಲು ಹೇಳಿದ್ದಾಳೆ.

ಬಾಲಕ ಕೂಡ ತಾಯಿ ಹೇಳಿದ್ದಂತೆ ಎದ್ದು ನಿಂತು, ತನ್ನ ಪ್ಯಾಂಟ್ ತೆಗೆದು ಗ್ಲಾಸಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಅಲ್ಲಿದ್ದ ಗ್ರಾಹಕರು ಇದನ್ನು ನೋಡಿ ಶಾಕ್‌ ಆಗಿದ್ದಾರೆ. ರೆಸ್ಟೋರೆಂಟ್ ಸಿಬ್ಬಂದಿಗಳು ಆ ಗ್ಲಾಸ್ ಅನ್ನು ಕೂಡಲೇ ಎಸೆದಿದ್ದಾರೆ ಎಂದು ವರದಿಯಾಗಿದೆ. ಹಾಗೂ ನಂತರ ಬಾಲಕನ ಪೋಷಕರು ಸಿಬ್ಬಂದಿಯ ಬಳಿ ಕ್ಷಮೆಯಾಚಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ:‌Viral Video: ಸ್ಕೂಟಿಗೆ ಡಿಕ್ಕಿ ಹೊಡೆದ ಎಸ್‌ಯುವಿ ಕಾರು; ಮುಂದೇನಾಯ್ತು...? ಬೆಚ್ಚಿಬೀಳಿಸುವ ವಿಡಿಯೊ ವೈರಲ್

ರೆಸ್ಟೋರೆಂಟ್‌ನ ಸಾರಿನ ಪಾತ್ರೆಗೆ ಮೂತ್ರ ವಿಸರ್ಜಿಸಿದ ಯುವಕ

ಇದೇ ರೀತಿಯ ಘಟನೆ ಈ ಹಿಂದೆ ಚೀನಾದಲ್ಲಿ ನಡೆದಿದ್ದು, ಇಬ್ಬರು ಹದಿಹರೆಯದವರು ಕುಡಿದ ಮತ್ತಿನಲ್ಲಿ ಶಾಂಘೈನ ಹೈಡಿಲಾವೊ ರೆಸ್ಟೋರೆಂಟ್‍ನಲ್ಲಿ ವಿಚಿತ್ರವಾಗಿ ವರ್ತಿಸಿದ್ದರು. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆಘಾತಕಾರಿ ವಿಡಿಯೊದಲ್ಲಿ ಹುಡುಗನೊಬ್ಬ ಕುದಿಯುವ ಸಾರಿನ ಪಾತ್ರೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ.

ಚೀನಾದ ಅತ್ಯಂತ ಜನಪ್ರಿಯ ರೆಸ್ಟೋರೆಂಟ್ ಚೈನ್‍ಗಳಲ್ಲಿ ಒಂದರಲ್ಲಿ ಆಹಾರ ಸುರಕ್ಷತೆಯ ನಿಯಮವನ್ನು ಉಲ್ಲಂಘಿಸಿರುವುದನ್ನು ಕಂಡು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶವನ್ನು ಹೊರಹಾಕಿದ್ದಾರೆ. ಇದರಿಂದ ಹೈಡಿಲಾವೊ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ ಮತ್ತು ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳುವುದಾಗಿ ತಿಳಿಸಿತ್ತು. ಕ್ಷಮೆಯಾಚನೆಯ ಜೊತೆಗೆ, ರೆಸ್ಟೋರೆಂಟ್‍ನಲ್ಲಿ ಈ ಸಾರಿನಲ್ಲಿ ಊಟ ಮಾಡಿದ ಗ್ರಾಹಕರಿಗೆ ಕಂಪನಿಯು ಪರಿಹಾರ ನೀಡಿತು. ಅವರು ಪರಿಹಾರಕ್ಕಾಗಿ ಹತ್ತು ಮಿಲಿಯನ್ ಯುವಾನ್ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿತ್ತು.