Viral Video: ಸ್ಕೂಟಿಗೆ ಡಿಕ್ಕಿ ಹೊಡೆದ ಎಸ್‌ಯುವಿ ಕಾರು; ಮುಂದೇನಾಯ್ತು...? ಬೆಚ್ಚಿಬೀಳಿಸುವ ವಿಡಿಯೊ ವೈರಲ್
ಅತಿ ವೇಗದಲ್ಲಿದ್ದ ಎಸ್‌ಯುವಿ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು ಅಲ್ಲದೇ ಅದನ್ನು ಬಹಳ ದೂರದವರೆಗೆ ಎಳೆದುಕೊಂಡು ಹೋದ ಆಘಾತಕಾರಿ ಘಟನೆ ಇತ್ತೀಚೆಗೆ ನಡೆದಿದೆ. ಲಕ್ನೋದ ಲುಲು ಮಾಲ್ ಬಳಿ ಈ ದುರ್ಘಟನೆ ನಡೆದಿದ್ದು, ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.


ಲಖನೌ: ಅತಿಯಾದ ವೇಗ ಅಪಾಯಕ್ಕೆ ಕಾರಣವೆಂದು ಗೊತ್ತಿದ್ದರೂ, ಪದೇ ಪದೆ ಅದೇ ತಪ್ಪುಗಳನ್ನು ವಾಹನ ಸವಾರರು ಮಾಡುತ್ತಿದ್ದಾರೆ. ಅತೀಯಾದ ವೇಗದಲ್ಲಿ ವಾಹನ ಚಲಾಯಿಸಿ ತಮ್ಮ ಪ್ರಾಣದ ಜೊತೆಗೆ ಇತರರ ಪ್ರಾಣಕ್ಕೂ ಕುತ್ತು ತಂದಂತಹ ಘಟನೆಯ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹರಿದಾಡುತ್ತಿರುತ್ತವೆ. ಇದೀಗ ಅತಿ ವೇಗದಲ್ಲಿದ್ದ ಎಸ್‌ಯುವಿ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ನಂತರ ಅದನ್ನು ಬಹಳ ದೂರದವರೆಗೆ ಎಳೆದುಕೊಂಡು ಹೋದ ಆಘಾತಕಾರಿ ಘಟನೆ ನಡೆದಿದೆ. ಲಖನೌದ ಲುಲು ಮಾಲ್ ಬಳಿ ಈ ಅಪಘಾತ ಸಂಭವಿಸಿದೆ.ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ವಾರಣಾಸಿ ನಿವಾಸಿ ಎಂಜಿನಿಯರ್ ಬ್ರಜೇಶ್ ಸಿಂಗ್ ಎಂದು ಗುರುತಿಸಲಾಗಿದೆ. ವೈರಲ್ ಆದ ವಿಡಿಯೊದಲ್ಲಿ ಕಾರಿನ ಅಡಿಯಲ್ಲಿ ಸ್ಕೂಟಿ ಸಿಲುಕಿದ ಕಾರಣ ವೇಗವಾಗಿ ಹೋಗುತ್ತಿದ್ದ ಕಾರಿನ ಅಡಿಭಾಗದಲ್ಲಿ ಬೆಂಕಿಯ ಕಿಡಿಗಳು ಹಾರಿವೆಯಂತೆ. ಸ್ಕೂಟಿಗೆ ಡಿಕ್ಕಿ ಹೊಡೆದ ನಂತರ, ಸ್ಕೂಟಿಯಲ್ಲಿದ್ದ ಅಣ್ಣ-ತಂಗಿ ಅಪಘಾತದ ಪರಿಣಾಮದಿಂದಾಗಿ ಗಾಳಿಗೆ ಹಾರಿ ರಸ್ತೆಯಲ್ಲಿ ಬಿದ್ದಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಅಪಘಾತವಾದರೂ ಕಾರನ್ನು ನಿಲ್ಲಿಸದೆ ಮುಂದೆ ಹೋಗಿದ್ದರಿಂದ ಕಾರಿನ ಅಡಿಯಲ್ಲಿ ಸಿಲುಕಿದ್ದ ಸ್ಕೂಟಿಯನ್ನು ಎಸ್‌ಯುವಿಯು 11 ಕಿಲೋಮೀಟರ್‌ವರೆಗೆ ಎಳೆದುಕೊಂಡು ಹೋಗಿದೆ.
लखनऊ में लुलु मॉल के पास तेज़ रफ्तार SUV की टक्कर से स्कूटी सवार भाई - बहन छिटक कर गिरे दूर pic.twitter.com/vN46ohxFTE
— Priya singh (@priyarajputlive) March 25, 2025
ಸ್ಕೂಟಿಗೆ ಎಸ್‌ಯುವಿ ಡಿಕ್ಕಿ ಹೊಡೆದ ದೃಶ್ಯ ಇಲ್ಲಿದೆ ನೋಡಿ...
ವರದಿ ಪ್ರಕಾರ, ಖಾಸಗಿ ವಲಯದ ಉದ್ಯೋಗಿಯಾಗಿರುವ ಹಜರತಗಂಜ್ ನಿವಾಸಿ ಮನೀಶ್ ಸಿಂಗ್ ತನ್ನ ಸಹೋದರಿ ತನು ಅವಳೊಂದಿಗೆ ಸ್ಕೂಟಿಯಲ್ಲಿ ತೆಲಿಬಾಗ್‍ಗೆ ಹೋಗುತ್ತಿದ್ದಾಗ ಲಕ್ನೋದ ಲುಲು ಮಾಲ್ ಬಳಿ ಈ ಅಪಘಾತ ಸಂಭವಿಸಿದೆ. ಎಸ್‌ಯುವಿ ಡಿಕ್ಕಿ ಹೊಡೆದರೂ ಅವರಿಬ್ಬರು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ವೇಗವಾಗಿ ಚಲಿಸುತ್ತಿದ್ದ ವಾಹನವನ್ನು ನಿಲ್ಲಿಸಲು ಪೊಲೀಸರು ಪ್ರಯತ್ನಿಸಿದ್ದಾರೆ. ಆದರೆ ಬ್ರಜೇಶ್ ನಿಲ್ಲಿಸಲಿಲ್ಲ. ಸರೋಜಿನಿ ನಗರ ಪೊಲೀಸರು ಬ್ಯಾರಿಕೇಡ್‍ಗಳನ್ನು ಹಾಕಿ ಆರೋಪಿಯನ್ನು ಬಂಧಿಸಿದ್ದಾರೆ.
ಮನೀಶ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಗಾಜಿಯಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದಾನೆ. ಘಟನೆಯ ಸಮಯದಲ್ಲಿ ಅವನು ಕೆಲಸಕ್ಕೆ ಹೋಗುತ್ತಿದ್ದಾನಂತೆ.
ಈ ಸುದ್ದಿಯನ್ನೂ ಓದಿ:Viral Video: ಅಟಲ್ ಸುರಂಗದೊಳಗೆ ಇದೆಂಥಾ ಮೋಜು ಮಸ್ತಿ; ಜೈಲಿಗೆ ಹಾಕಿ ಎಂದು ಕಿಡಿಕಾರಿದ ನೆಟ್ಟಿಗರು!
ಉತ್ತರ ಪ್ರದೇಶದ ಲಖನೌದಲ್ಲಿ ಈ ರೀತಿಯ ಅಪಘಾತ ಸಂಭವಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಲಖನೌದಲ್ಲಿ ಹ್ಯುಂಡೈ ಐ 20 ಕಾರು ಸ್ಕೂಟಿಗೆ ಡಿಕ್ಕಿ ಹೊಡೆದು ಸುಮಾರು ಒಂದು ಕಿಲೋಮೀಟರ್ ದೂರ ಎಳೆದುಕೊಂಡು ಹೋದ ಘಟನೆ ವರದಿಯಾಗಿತ್ತು. ಘಟನೆಯ ಆಘಾತಕಾರಿ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ವೇಗವಾಗಿ ಚಲಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.ಇದು ವಿಡಿಯೊದಲ್ಲಿ ಸೆರೆಯಾಗಿದೆ.