ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರೀಲ್ಸ್ ಗೀಳು: ತನ್ನ ಖಾಸಗಿ ಅಂಗದಲ್ಲೇ ಫೋನ್ ಚಾರ್ಜರ್ ಸೇರಿಸಿಕೊಂಡ ಬಾಲಕ!

ಬಾಲಕನೊಬ್ಬ ಆನ್‌ ಲೈನ್‌ ನಲ್ಲಿ ವೀಡಿಯೊ ನೋಡಿ ತನ್ನ ಮೂತ್ರನಾಳಕ್ಕೆ ಫೋನ್ ಚಾರ್ಜರ್ ಸೇರಿಸಿ ಕೊಂಡ ಆಘಾತಕಾರಿ ಘಟನೆಯೊಂದು ನಡೆದಿದೆ. ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದಲ್ಲಿ ಈ ಘಟನೆ ನಡೆದಿದ್ದು ಪೋಷಕರನ್ನೇ ಗೊಂದಲ ಮೂಡಿಸುವಂತೆ ಬಾಲಕ ಮಾಡಿದ್ದಾನೆ.‌ ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

(ಸಂಗ್ರಹ ಚಿತ್ರ)

ವಿಯೆಟ್ನಾಂ, ಡಿ.19: ಈ ಡಿಜಿಟಲ್‌ ಯುಗದಲ್ಲಿ ಹೆಚ್ಚಿನವರು ಸ್ಮಾರ್ಟ್ ಫೋನ್‌ ವ್ಯಸನಿಗಳಾಗಿ ದ್ದಾರೆ. ಅದರಲ್ಲೂ ಇತ್ತೀಚೆಗೆ ಮಕ್ಕಳಲ್ಲೂ ಈ ಗೀಳು ಹೆಚ್ಚಾಗುತ್ತಿದೆ. ಮೊಬೈಲ್ ನಲ್ಲಿ ರೀಲ್ಸ್, ಗೇಮ್ ಎಂದು ಚಟಕ್ಕೆ ಬಿದ್ದ ಮಕ್ಕಳು ಡಿಜಿಟಲ್ ಜಗತ್ತಿನ ಅಪಾಯಕ್ಕೂ ಸಿಲುಕುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬಾಲಕನೊಬ್ಬ ಆನ್‌ ಲೈನ್‌ ನಲ್ಲಿ ವೀಡಿಯೊ ನೋಡಿ ತನ್ನ ಮೂತ್ರನಾಳಕ್ಕೆ ಫೋನ್ ಚಾರ್ಜರ್ ಸೇರಿಸಿಕೊಂಡ ಆಘಾತಕಾರಿ ಘಟನೆಯೊಂದು ನಡೆದಿದೆ. ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದಲ್ಲಿ ಈ ಘಟನೆ ನಡೆದಿದ್ದು ಪೋಷಕರನ್ನೇ ಗೊಂದಲ ಮೂಡಿಸುವಂತೆ ಬಾಲಕ ಮಾಡಿ ದ್ದಾನೆ.‌ ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿದೆ.

ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದಲ್ಲಿ 16 ವರ್ಷದ ಬಾಲಕ ರೀಲ್ಸ್ ನೋಡಿ ಅಪಾಯಕಾರಿ ವರ್ತನೆಗೆ ಮುಂದಾಗಿದ್ದಾನೆ. ತನ್ನ ಖಾಸಗಿ ಅಂಗದ ಮೂಲಕ ಮೂತ್ರಕೋಶಕ್ಕೆ ಫೋನ್ ಚಾರ್ಜರ್ ಸೇರಿಸಿಕೊಂಡಿದ್ದಾನೆ. ಆದರೆ ಆತನಿಗೆ ನೋವುಂಟಾದರೂ ಭಯದಿಂದ ಪೋಷಕರಿಗೆ ತಿಳಿಸಿರಲಿಲ್ಲ. ಆದರೆ ಬಾಲಕನ ನೋವನ್ನು ನೋಡಿ ಅವನ ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದಿದಿದ್ದಾರೆ. ಆದರೆ ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಮೂತ್ರಕೋಶದಲ್ಲಿ ಚಾರ್ಜರ್ ಇರುವುದು ಕಂಡುಬಂದಿದೆ.

ಮೂತ್ರಕೋಶದಲ್ಲಿ ಚಾರ್ಜರ್ ಅನ್ನು ಕಂಡು ವೈದ್ಯರೇ ಶಾಕ್ ಆಗಿದ್ದಾರೆ. ಆನ್ ಬಿನ್ಹ್ ಆಸ್ಪತ್ರೆಯ ವೈದ್ಯರು ಸುಮಾರು ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನಡೆಸಿ ಡಿಸೆಂಬರ್ 7 ರಂದು ಯಶಸ್ವಿಯಾಗಿ ಹೊರತೆಗೆದಿದ್ದಾರೆ..ವೈದ್ಯರು ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ. ಮೂತ್ರಕೋಶದ ಒಂದು ಭಾಗವು ಕೊಳೆಯುತ್ತಿದೆ ಎಂದು ವೈದ್ಯರು ಕಂಡುಕೊಂಡಿದ್ದು ಶೀಘ್ರದಲ್ಲೇ ಪತ್ತೆ ಹಚ್ಚಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.ಎರಡು ದಿನಗಳ ಬಳಿಕ ಬಾಲಕನಿಗೆ ಕೌನ್ಸೆಲಿಂಗ್ ನೀಡಿ ಮನೆಗೆ ಕಳುಹಿಸಿದ್ದಾರೆ.

Viral Video: ಬೆಂಗಳೂರಿನ ಹೆವೀ ಟ್ರಾಫಿಕ್ ನಡುವೆಯೇ ಹೆಲ್ಮೆಟ್‌ನಿಂದ ಹೊಡೆದಾಡಿದ ಬೈಕ್ ಸವಾರರು: ವಿಡಿಯೋ ವೈರಲ್

ಇತ್ತೀಚೆಗಷ್ಟೇ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಕೂಡ ರೀಲ್ಸ್ ಹುಚ್ಚಿಗೆ ಬಾಲಕ ಸಾವನ್ನಪ್ಪಿದ ಘಟನೆ ನಡೆದಿತ್ತು. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ‌ ಹರಿಬಿಡುವ ಸಲುವಾಗಿ ತಮಾಷೆಯ ರೀಲ್ ಮಾಡಲು ಹೋಗಿ 11 ವರ್ಷದ ಬಾಲಕ ನೇಣು ಬಿಗಿತದಿಂದ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಹೀಗೆ ಹಲವು ದುರ್ಘಟನೆಗಳು ನಡೆದಿದ್ದು ಪೋಷಕರು ಮಕ್ಕಳಿಗೆ ಮೊಬೈಲ್ ನೀಡುವ ಮುನ್ನ ಹಲವಷ್ಟು ಭಾರೀ ಯೋಚನೆ ಮಾಡಬೇಕಾಗಿದೆ.

ಸದ್ಯ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಇಂದಿನ ಪೋಷಕರು ಮಕ್ಕಳಿಗೆ ಮೊಬೈಲ್ ನೀಡುವ ಮುನ್ನ ಈ ಘಟನೆ ಒಮ್ಮೆ ನೆನಪಿಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ದುನದಿಂದ ದಿನಕ್ಕೆ ಜನರ ರೀಲ್ಸ್‌ ಹುಚ್ಚು ಹೆಚ್ಚಾಗುತ್ತಿದೆ..ಇದರ ಬಗ್ಗೆಯೇ ಹೆಚ್ಚಿನ ಅರಿವು ಇಂದು ಬೇಕಾಗಿದೆ ಎಂದು ಬರೆದುಕೊಂಡಿದ್ದಾರೆ.