ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಫೋಟೊಶೂಟ್ ವೇಳೆ ಭಯಾನಕ ಘಟನೆ: ಗಾಳಿಗೆ ವಧುವನ್ನೇ ಹೊತ್ತುಕೊಂಡು ಹೋದ ಬಲೂನ್‌: ವಿಡಿಯೊ ನೋಡಿ

Viral News: ಇತ್ತೀಚಿನ ದಿನದಲ್ಲಿ ಫೋಟೊ, ರೀಲ್ಸ್‌ಗಾಗಿ ಅಪಾಯಕಾರಿ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚಾಗಿದೆ. ಇಲ್ಲೊಬ್ಬಳು ಯುವತಿ ಮದುವೆಯ ನೆನಪಿಗಾಗಿ ಫೋಟೊಶೂಟ್ ಮಾಡಿಸಲು ಹೋಗಿ ಕಷ್ಟದ ಸನ್ನಿವೇಶವೊಂದು ಎದುರಾಗಿದೆ. ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ವಧುವಿನ ಮದುವೆಯ ಫೋಟೊಶೂಟ್ ಅಪಾಯಕ್ಕೆ ಕಾರಣವಾಗಿದೆ.

ಬಲೂನ್‌ನಿಂದಾಗಿ ನಿಯಂತ್ರಣ ತಪ್ಪಿದ ವಧು

ಅಂಕಾರ, ಅ. 31: ಮದುವೆಯ ನೆನಪಿಗಾಗಿ ಸುಂದರ ಫೋಟೊಶೂಟ್ ಮಾಡಿಸಿಕೊಳ್ಳಬೇಕು, ಆ ದಿನ ಮೆಮೊರಿಯಲ್ ಆಗಿ ಇರಿಸಬೇಕೆಂದು ಅಂದುಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನದಲ್ಲಿ ಫೋಟೊ, ರೀಲ್ಸ್‌ಗಾಗಿ ಅಪಾಯಕಾರಿ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚಾಗಿದೆ. ಇಲ್ಲೊಬ್ಬಳು ಯುವತಿ ಮದುವೆಯ ನೆನಪಿಗಾಗಿ ಫೋಟೊಶೂಟ್ ಮಾಡಿಸಲು ಹೋಗಿ ಕಷ್ಟದ ಸನ್ನಿವೇಶವೊಂದು ಎದುರಾಗಿದೆ. ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ವಧುವಿನ ಮದುವೆಯ ಫೋಟೊಶೂಟ್ ಅಪಾಯಕ್ಕೆ ಕಾರಣವಾಗಿದೆ. ಸಾಗರದ ಬಳಿ ಫೋಟೊಶೂಟ್ ಮಾಡುತ್ತಿದ್ದಂತೆ ಇದ್ದಕ್ಕಿದ್ದಂತೆ ಬೀಸಿದ ಜೋರು ಗಾಳಿಗೆ ಬಲೂನ್‌ಗಳು ಗಾಳಿಪಟದಂತೆ ಮೇಲಕ್ಕೆ ಎಳೆಯಲ್ಪಟ್ಟಿದ್ದು ವಧು ನೆಲದ ಮೇಲೆ ಕಾಲು ನೆಲೆಯೂರಿ ನಿಲ್ಲಲಾಗದೆ ನಿಯಂತ್ರಣ ಕಳೆದುಕೊಂಡ ಘಟನೆ(Viral News) ನಡೆದಿದೆ.

​ವಧು ತನ್ನ ಮದುವೆಯ ಫೋಟೊಶೂಟ್‌ಗಾಗಿ ಬೃಹತ್ ಗಾತ್ರದ ತಿಳಿ ಕಂದು ಬಣ್ಣದ ಬಲೂನ್‌ಗಳ ಗೊಂಚಲನ್ನು ಹಿಡಿದು ಕೊಂಡು ನಿಂತಿದ್ದಳು. ಆಗ ಸಾಗರದ ಬಳಿ ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಬೀಸಲು ಆರಂಭವಾಗಿದೆ. ಜೋರಾದ ಗಾಳಿಯು ದೈತ್ಯ ಬಲೂನ್‌ಗಳೊಂದಿಗೆ ಆಕೆಯನ್ನು ಎಳೆದಾಗ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಯುವತಿ ಬಾಸ್ಫರಸ್ ಜಲಸಂಧಿಯ ಬಳಿ ಪೋಸ್ ನೀಡುತ್ತಿದ್ದಾಗ ನಿಯಂತ್ರಣ ಕಳೆದುಕೊಂಡಿದ್ದಾಳೆ. ಆಗ ಫೋಟೊಗ್ರಾಫರ್‌ ನೆರವಿಎ ಧಾವಿಸಿ ಆಕೆಯನ್ನು ಹಿಡಿದಿಟ್ಟುಕೊಂಡಿದ್ದಾನೆ.

ವಿಡಿಯೊ ನೋಡಿ:



​ಗಾಳಿಗೆ ಈ ಬಲೂನ್‌ಗಳು ಗಾಳಿಪಟದಂತೆ ಮೇಲಕ್ಕೆ ಎಳೆಯಲ್ಪಟ್ಟವು. ಇದರಿಂದಾಗಿ ವಧು ನೆಲದ ಮೇಲೆ ಕಾಲು ನೆಲೆಯೂರಿ ನಿಲ್ಲಲಾಗದೆ ಕಲ್ಲಿನ ರಾಶಿಯ ತಡೆಗೋಡೆಗೆ ಅಪ್ಪಳಿಸುವ ಅಪಾಯವಿತ್ತು. ಇದನ್ನು ತಕ್ಷಣವೇ ಗಮನಿಸಿದ ಆಕೆಯ ಛಾಯಾಗ್ರಾಹಕ ತನ್ನ ಕ್ಯಾಮರಾವನ್ನು ಬದಿಗಿಟ್ಟು ಆಕೆಯನ್ನು ಹಿಡಿದು ರಕ್ಷಿಸಿದ್ದಾನೆ.

ಮನುಷ್ಯರಂತೆ ವಾನರ ಪಡೆಗೂ ಓಣಂ ವಿಶೇಷ ಭೋಜನ

ಅದೃಷ್ಟವಶಾತ್ ವಧುವಿಗೆ ಯಾವುದೇ ಗಾಯಗಳಾಗಲಿಲ್ಲ. ವಧು ತನ್ನ ಫೋಟೊಶೂಟ್‌ನ ಭಾಗವಾಗಿ ಬಲೂನ್‌ಗಳು ಅವಳ ಮದುವೆಯ ಫೋಟೊಗಳಿಗೆ ವಿಶೇಷ ಆಕರ್ಷಣೆ ನೀಡಲು ಬಳಸಲಾಗಿತ್ತು. ಆದರೆ ಬಲವಾದ ಗಾಳಿ ಬರುತ್ತಿದ್ದಂತೆ ಬಲೂನ್‌ಗಳು ಅವಳನ್ನು ಹತ್ತಿರದ ಸಮುದ್ರ ಗೋಡೆಯ ಕಡೆಗೆ ಎಳೆಯಲು ಪ್ರಾರಂಭಿಸಿದವು. ವಧು ತನ್ನ ಸಮತೋಲನವನ್ನು ಕಳೆದುಕೊಂಡಿದ್ದು ನಿಲ್ಲಲು ಕಷ್ಟವಾಯಿತು.

​ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೀಕ್ಷಕರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಬಳಕೆದಾರರೊಬ್ಬರು ಫೋಟೊಶೂಟ್ ಮತ್ತಷ್ಟು ಸ್ಮರಣೀಯವಾಗಿರಿಸಿದೆ ಎಂದು ಬರೆದಿದ್ದಾರೆ. ಇನ್ನು ಕೆಲವರು ಫೋಟೊಶೂಟ್‌ಗಳಿಗಾಗಿ ದೊಡ್ಡ ಬಲೂನ್ ವ್ಯವಸ್ಥೆಗಳನ್ನು ಬಳಸುವ ಅಪಾಯಗಳ ಬಗ್ಗೆ ಕಾಮೆಂಟ್ ಮಾಡಿದ್ದಾರೆ.