Viral Video: ಕುಟುಂಬದೊಂದಿಗೆ ಹಬ್ಬ ಆಚರಿಸಲು ಪೂರ್ತಿ ತಿಂಗಳ ಸಂಬಳ ವಿಮಾನದ ಟಿಕೆಟ್ಗೆ ವ್ಯಯಿಸಿದ ಬಿಹಾರದ ಯುವಕ
Viral News: ದೂರದ ಚೆನ್ನೈಗೆ ದುಡಿಯಲು ಬಂದಿದ್ದ ಬಿಹಾರದ ಯುವಕನೊಬ್ಬ ಈ ಬಾರಿಯ ಛತ್ ಪೂಜೆ ಹಬ್ಬಕ್ಕಾಗಿ ವಿಮಾನದಲ್ಲೇ ಊರಿಗೆ ಆಗಮಿಸಿದ್ದಾನೆ. ಅಷ್ಟೇ ಅಲ್ಲ ಚೆನ್ನೈನಿಂದ ಊರಿಗೆ ಹೋಗಲು ತನ್ನ ಇಡೀ ತಿಂಗಳ ಸಂಬಳವನ್ನೇ ವಿಮಾನ ಟಿಕೆಟ್ಗಾಗಿ ಖರ್ಚು ಮಾಡಿದ್ದಾನೆ.
ಕುಟುಂಬದೊಂದಿಗೆ ಹಬ್ಬ ಆಚರಿಸಲು ವಿಮಾನ ಏರಿದ ಬಿಹಾರ ಯುವಕ -
ಪಾಟ್ನಾ, ಅ. 27: ಕೆಲಸಕ್ಕಾಗಿ ಸ್ವಂತ ಊರು ತೊರೆದು ನಗರ ಪ್ರದೇಶದದಲ್ಲಿ ಬದುಕು ಕಟ್ಟಿಕೊಂಡವರು ಅನೇಕರು ಇದ್ದಾರೆ. ಇದೀಗ ದೂರದ ತಮಿಳುನಾಡಿನ ಚೆನ್ನೈಗೆ ದುಡಿಯಲು ತೆರಳಿದ್ದ ಬಿಹಾರದ ಯುವಕನೊಬ್ಬ ಈ ಬಾರಿಯ ಛತ್ ಪೂಜೆ ಹಬ್ಬಕ್ಕಾಗಿ ವಿಮಾನದಲ್ಲೇ ಊರಿಗೆ ಆಗಮಿಸಿದ್ದಾನೆ. ಅಷ್ಟೇ ಅಲ್ಲ ಚೆನ್ನೈನಿಂದ ಊರಿಗೆ ಹೋಗಲು, ತಮ್ಮ ಇಡೀ ತಿಂಗಳ ಸಂಬಳವನ್ನೇ ವಿಮಾನ ಟಿಕೆಟ್ಗಾಗಿ ಖರ್ಚು ಮಾಡಿದ್ದಾನೆ.
ತನ್ನ ಇಡೀ ತಿಂಗಳ ಶ್ರಮವನ್ನು ವಿಮಾನದ ಟಿಕೆಟ್ಗೆ ಖರ್ಚು ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗಿದ್ದಾನೆ. ಆತ ರೈಲು ಅಥವಾ ಇತರ ಸಾರಿಗೆ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳುವ ಬದಲು, ವಿಮಾನದಲ್ಲಿ ಪ್ರಯಾಣಿಸಲು ನಿರ್ಧರಿಸಿದ್ದಾನೆ.
ವಿಮಾನದಲ್ಲಿ ಪ್ರಯಾಣಿಸಿದ ಬಿಹಾರದ ಯುವಕ:
ये बिहार नालंदा जिले के रहने वाले शत्रुघ्न कुमार हैं. छठ पूजा पर अपने गांव आने के लिए अपनी पूरी सैलरी फ्लाइट टिकट पर खर्च कर दी और उनकी एयर होस्टेस के साथ बातचीत का वीडियो सोशल मीडिया पर काफी पसंद किया जा रहा है। शत्रुघ्न चेन्नई में एक लोहे की फैक्ट्री में वेल्डिंग (मजदूरी) का काम करते हैं।उन्होंने अपने परिवार और गांव वालों से वादा किया था कि इस बार वह छठ पूजा मनाने के लिए ट्रेन से नहीं बल्कि हवाई जहाज (फ्लाइट) से घर आएंगे।अपने इसी वादे को पूरा करने और मां को सरप्राइज देने के लिए बिहारी युवा ने अपनी एक महीने की पूरी कमाई (सैलरी) टिकट खरीदने में लगा दी। जब वह पहली बार फ्लाइट में बैठे,तो उन्होंने एयर होस्टेस के साथ एक रील (वीडियो) भी रिकॉर्ड की और तस्वीरें खिंचवाईं,जिसमें उनकी सादगी और खुशी साफ देखी और सोशल मीडिया पर पंसद की जा रही है।वीडियो इंटरनेट पर लोगों का दिल जीत रहा है और लोग इसे एक बेटे का अपनी मां के प्रति सच्चा प्यार और समर्पण बता रहे हैं।वाकई ऐसा अजब गजब का धमाल एक बिहारी ही कर सकता हैं.
— Tushar Rai (@tusharcrai) October 26, 2026
ಬಿಹಾರದ ಯುವಕ ತನ್ನ ಕುಟುಂಬದೊಂದಿಗೆ 'ಛತ್ ಪೂಜೆ' ಆಚರಿಸಲು ಚೆನ್ನೈಯಿಂದ ಊರಿಗೆ ಹೋಗಲು ಪ್ಲ್ಯಾನ್ ಮಾಡಿಕೊಂಡಿದ್ದ. ಇದಕ್ಕಾಗಿ ಆತ ಇಡೀ ತಿಂಗಳ ಸಂಬಳವನ್ನೇ ವಿಮಾನ ಪ್ರಯಾಣಕ್ಕಾಗಿ ಖರ್ಚು ಮಾಡಿದ್ದಾನೆ.
ಕಷ್ಟಪಟ್ಟು ದುಡಿದ ಹಣದ ಬಹುಪಾಲನ್ನು ಈ ಪ್ರಯಾಣಕ್ಕಾಗಿ ಖರ್ಚು ಮಾಡಿದ ಆತನ ನಿರ್ಧಾರಕ್ಕೆ ಆನ್ಲೈನ್ನಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ವೈಯಕ್ತಿಕ ಆಸೆಯನ್ನು ಹಣದ ಖರ್ಚು ವೆಚ್ಚ ನೋಡದೆ ಈಡೇರಿಸಿಕೊಂಡದ್ದಕ್ಕೆ ನೆಟ್ಟಿಗರು ಮೆಚ್ಚುಗೆ ನೀಡಿದ್ದಾರೆ.
ನೇಪಾಳ ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಚಿನ್ನದ ಓಲೆ ಕದ್ದ ಕಿಡೀಗೆಡಿಗಳು!
ತಾನು ಕಷ್ಟಪಟ್ಟು ಗಳಿಸಿದ ಸಂಪೂರ್ಣ ಹಣವನ್ನು ಹಬ್ಬದ ಸಂಭ್ರಮಕ್ಕಾಗಿ ಮತ್ತು ವಿಮಾನದಲ್ಲಿ ಪ್ರಯಾಣಿಸುವ ಕನಸು ನನಸು ಮಾಡಲು ವ್ಯಯಿಸಿದ್ದಾನೆ. ಯುವಕನು ವಿಮಾನದಲ್ಲಿ ಬಂದು ತನ್ನ ಹಳ್ಳಿಗೆ ತೆರಳುತ್ತಿದ್ದಂತೆ ಸ್ಥಳೀಯರು ಅವನಿಗೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ಆ ಕಾರ್ಮಿಕನ ನಿರ್ಧಾರಕ್ಕೆ ಆನ್ಲೈನ್ನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜನರು ತಮ್ಮ ಕಷ್ಟಪಟ್ಟು ಗಳಿಸಿದ ಹಣವನ್ನು ತಮಗೆ ಮುಖ್ಯವೆನಿಸುವುದಕ್ಕೆ ಖರ್ಚು ಮಾಡುವ ಸ್ವಾತಂತ್ರ್ಯವನ್ನು ಹೊಂದಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸಿ ಯಾರ ಬಳಿಯೂ ಭಿಕ್ಷೆ ಬೇಡದೆ ಅಥವಾ ಕದಿಯದೆ, ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾನೆ. ಈ ಅನುಭವವು ಭವಿಷ್ಯದಲ್ಲಿ ಇನ್ನಷ್ಟು ಆರ್ಥಿಕ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದಿದ್ದಾರೆ.