ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮದುವೆಗೆ 2 ಗಂಟೆ ಮೊದಲು ಮಾಜಿ ಪ್ರೇಮಿಯನ್ನು ಭೇಟಿಯಾದ ವಧು: ಈ ನಿಯತ್ತು ಮೊದಲು ಎಲ್ಲಿ ಹೋಗಿತ್ತು ಎಂದು ಕೇಳಿದ ನೆಟ್ಟಿಗರು

ಮದುವೆಗೆ 2 ಗಂಟೆಯ ಮೊದಲು ಯುವತಿಯೊಬ್ಬಳು ತನ್ನ ಪ್ರೇಮಿಯನ್ನು ಭೇಟಿಯಾದ ಭಾವನಾತ್ಮಕ ಘಟನೆಯೊಂದು ನಡೆದಿದೆ. ವಿವಾಹ ಸಮಾರಂಭಕ್ಕೆ ಕೇವಲ ಎರಡು ಗಂಟೆಗಳ ಮೊದಲು ವಧು ತನ್ನ ಮಾಜಿ ಪ್ರಿಯಕರನನ್ನು ಭೇಟಿಯಾಗಿದ್ದಾಳೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಮಾಜಿ ಪ್ರೇಮಿಯನ್ನು ಭೇಟಿಯಾದ ವಧು

ಬೆಂಗಳೂರು, ಡಿ.15: ಪ್ರೀತಿ ಎನ್ನುವುದು ಬೆಲೆ ಕಟ್ಟಲಾಗದ ಭಾವನೆ. ಯಾರು ಅಷ್ಟು ಸುಲಭದಲ್ಲಿ ತಮ್ಮ ಪ್ರೀತಿಯನ್ನು ಬಿಟ್ಟುಕೊಡುವುದಿಲ್ಲ. ಅದರಲ್ಲೂ ಇದರಿಂದ ಹೊರ ಬರಬೇಕು ಅಂತ ಯೋಚನೆ ಮಾಡೋರು ವಿರಳ. ಕೆಲವೊಂದಿಷ್ಟು ಜನ ಈ ಪ್ರೀತಿಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಮದುವೆಗೆ 2 ಗಂಟೆಯ ಮೊದಲು ಯುವತಿಯೊಬ್ಬಳು ತನ್ನ ಪ್ರೇಮಿಯನ್ನು ಭೇಟಿಯಾದ ಭಾವನಾತ್ಮಕ ಘಟನೆಯೊಂದು ನಡೆದಿದೆ. ವಿವಾಹ ಸಮಾರಂಭಕ್ಕೆ ಕೇವಲ ಎರಡು ಗಂಟೆಗಳ ಮೊದಲು ವಧು ತನ್ನ ಮಾಜಿ ಪ್ರಿಯಕರನನ್ನು ಭೇಟಿಯಾಗಿದ್ದಾಳೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ.

ಮದುವೆಗೆ 2 ಗಂಟೆಗಳ ಮೊದಲು ಯುವತಿ ತನ್ನ ಪ್ರೇಮಿಯನ್ನು ಭೇಟಿಯಾಗಿರುವ ದೃಶ್ಯ ಕಂಡು ಬಂದಿದೆ. ವೈರಲ್ ಆಗಿರುವ ವಿಡಿಯೊದಲ್ಲಿ, ವಧು ತನ್ನ ಮದುವೆಯ ಆಲಂಕಾರದಲ್ಲಿ ಇರುವಾಗಲೇ ತನ್ನ ಆಪ್ತ ಗೆಳೆಯನೊಂದಿಗೆ ಕಾರಿನಲ್ಲಿ ಕುಳಿತಿರುವುದು ಕಂಡು ಬಂದಿದೆ. ಆಕೆಯ ಗೆಳೆಯ ಈ ಸಂದರ್ಭದಲ್ಲಿ ಹೊಸ ಜೀವನಕ್ಕೆ ಕಾಲಿಡುವ ಮುನ್ನ ತನ್ನ ಹಿಂದಿನ ಪ್ರಿಯಕರನಿಗೆ ಭಾವನಾತ್ಮಕ ಮುಕ್ತಾಯ ನೀಡಲು ಹೋಗುತ್ತಿದ್ದಾಳೆ ಎಂದು ತಿಳಿಸಿದ್ದಾನೆ.

ವಿಡಿಯೊ ನೋಡಿ:



ಕಾರು ನಿಲ್ಲುತ್ತಿದ್ದಂತೆ, ಯುವತಿ ಹೊರಬಂದು ತನ್ನ ಹಿಂದಿನ ಪ್ರಿಯತಮನನ್ನು ಭೇಟಿಯಾಗಿದ್ದಾಳೆ. ದೂರದಿಂದ, ಇಬ್ಬರೂ ಆಳವಾದ ಭಾವನಾತ್ಮಕ ಸಂಭಾಷಣೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಅವರ ನಡುವಿನ ಮಾತುಗಳು ಯಾರಿಗೂ ಕೇಳಿಸದಿದ್ದರೂ, ಅವರ ಮನಸ್ಸಿನ ನೋವು, ಯಾತನೆ ಸ್ಪಷ್ಟವಾಗಿ ಗೋಚರಿಸುತ್ತವೆ. ಕೊನೆಯದಾಗಿ ಇಬ್ಬರೂ ಭಾವಪೂರ್ಣವಾಗಿ ಅಪ್ಪಿ ಕೊಂಡು ನಂತರ ವಿದಾಯ ಹೇಳಿ ದೂರವಾಗುತ್ತಾರೆ.

ಭಾರತದ ಬಸ್ ಯೂರೋಪ್‌ಗಿಂತ ಬೆಸ್ಟ್ ಎಂದ ಕೆನಡಾ ವ್ಲಾಗರ್‌

ಮಾಜಿ ಪ್ರಿಯತಮನ ಭೇಟಿಯಾಗಿ ವಧು ಕಣ್ಣೀರು ಹಾಕುತ್ತಾ ಗೆಳೆಯನ ಕಾರಿನಲ್ಲಿ ಕೂರುತ್ತಾಳೆ. ಆಕೆಯ ಸ್ನೇಹಿತ ತನ್ನ ನಿರ್ಧಾರವನ್ನು ಬದಲಾಯಿಸಿ ತನ್ನ ಹಿಂದಿನ ಸಂಗಾತಿಯನ್ನು ಮದುವೆಯಾಗಲು ಬಯಸುತ್ತೀಯಾ ಎಂದು ಕೇಳುತ್ತಾನೆ. ವಧು ಮೌನವಾಗಿ ಕಾರು ಚಲಾಯಿಸಿ ವಿವಾಹ ನಡೆಯುವ ಸ್ಥಳಕ್ಕೆ ಹೋಗುವಂತೆ ಸೂಚಿಸಿ, ತನ್ನ ಮದುವೆ ನಿರ್ಧಾರವನ್ನು ಮುಂದುವರಿಸುತ್ತಾಳೆ.

ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಹೆಚ್ಚಿನವರು ವಧುವಿನ ನೈತಿಕತೆಯನ್ನು ಪ್ರಶ್ನಿಸಿದ್ದಾರೆ. ಒಬ್ಬರು ಆಕೆ ಮಾಜಿ ಪ್ರಿಯಕರನನ್ನೇ ಮದುವೆ ಆಗಬಹುದಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಈಗಿನ ದಿನಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದೆ. ನಿಜವಾದ ಪ್ರೀತಿಗೆ ಬೆಲೆ ಇಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು ವಧುವಿನ ಗುರುತು ಬಹಿರಂಗಗೊಂಡಿದೆ‌. ಮುಂದಕ್ಕೆ ತನ್ನ ಅತ್ತೆ-ಮಾವ ಮತ್ತು ಪತಿಯನ್ನು ಹೇಗೆ ಎದುರಿಸಬಹುದು ಪ್ರಶ್ನಿಸಿದ್ದಾರೆ.