ಮಧ್ಯಪ್ರದೇಶ,ಏ.2: ಇತ್ತೀಚೆಗೆ ಮದುವೆ ಮಂಟಪದಲ್ಲಿ ಹಲವು ಅಚ್ಚರಿಯ ಘಟನೆ ನಡೆದ ದೃಶ್ಯಗಳು ವೈರಲ್ ಆಗಿವೆ. ಅದ್ದೂರಿ ಮದುವೆಯಲ್ಲಿ ಮದುವೆ ಬೇಡ ಎಂದು ನಿರಾಕರಣೆ ಮಾಡಿದ ವಧು, ಪ್ರಿಯತಮೆಗೆ ತಾಳಿ ಕಟ್ಟಿದ ವರ, ಹೀಗೆ ಅನೇಕ ನಾಟಕೀಯ ದೃಶ್ಯ ನಡೆದಿದೆ. ಈ ನಡುವೆ ಯುವತಿಯೊಬ್ಬಳು ಮದುವೆ ಮಂಟಪದಲ್ಲಿ ವರನಿಗೆ ಹಾರ ಹಾಕುವ ಬದಲು ಮಂಟದ ಕೆಳಗೆ ಓಡೋಡಿ ಬಂದು ಪ್ರಿಯತಮನಿಗೆ ಹಾರ ಹಾಕಿದ ವಿಡಿಯೊ ವೈರಲ್ (Viral Video) ಆಗಿದೆ. ಇಂದಿನ ಜಾನಂಗದ ಮದುವೆ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದು ಹಲವಾರು ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚೆಗೆ ಮದುವೆಯಲ್ಲಿ ಈ ರೀತಿಯ ಘಟನೆಗಳು ನಡೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಮದುವೆಯ ಖರ್ಚು ವೆಚ್ಚ, ಕುಟುಂಬದ ಒತ್ತಡ, ಭಾಗವಹಿಸುವ ಅಥಿತಿಗಳ ಮೇಲೆ ಉಂಟಾಗುವ ಭಾವನಾತ್ಮಕ ಪ್ರಭಾವದ ಬಗ್ಗೆ ಅನೇಕರು ಚರ್ಚೆ ಮಾಡಿದ್ದಾರೆ. ಇಲ್ಲೂ ಕೂಡ ನೂರಾರು ಅತಿಥಿಗಳ ಸಮ್ಮುಖದಲ್ಲಿ ವರನಿಗೆ ಹಾರ ಹಾಕುವ ಬದಲು ಇದ್ದಕ್ಕಿದ್ದಂತೆ ಪ್ರಿಯಕರನ ಕೊರಳಿಗೆ ಹಾರ ಹಾಕಿದ್ದಾಳೆ.
ವಿಡಿಯೋ ನೋಡಿ:
ಈ ಘಟನೆಯೂ ಏಪ್ರಿಲ್ 27-28 ರ ರಾತ್ರಿ ಚಿಂದ್ವಾರ ಜಿಲ್ಲೆಯ ಉಮ್ರೆತ್ ಗ್ರಾಮದಲ್ಲಿ ನಡೆದಿದೆ. ವರನು ತನ್ನ ವಿವಾಹ ಮೆರವಣಿಗೆಯೊಂದಿಗೆ ಆಗಮಿಸಿದ್ದು ಮದುವೆಗೆ ಸಿದ್ಧತೆಗಳು ಅದ್ದೂರಿಯಾಗಿ ಆಯೋಜನೆ ಮಾಡಲಾಗಿತ್ತು. ವೇದಿಕೆಯ ಮೇಲೆ ವರನು ಜನರ ಸಮ್ಮುಖ, ಪಟಾಕಿ ಮೆರವಣಿಗೆಯೊಂದಿಗೆ ಆಗಮಿಸಿದ್ದಾನೆ. ವಧು ಕೂಡ ಹಾರ ಹಿಡಿದು ನಿಂತಿದ್ದಳು.
ಆದರೆ ಮದುವೆ ಹಾರ ಬದಲಾಯಿಸುವ ಸಂದರ್ಭದಲ್ಲಿ ವಧು ಸಭಾಂಗಣದ ಕೆಳಗೆ ಜಿಗಿದು ಓಡಿದ್ದಾಳೆ. ಈ ಕೂಡಲೇ ಅಲ್ಲಿದ್ದ ಜನರು ಕೂಡ ಆಶ್ಚರ್ಯ ಗೊಂಡಿದ್ದಾರೆ. ವೈರಲ್ ವೀಡಿಯೊದಲ್ಲಿ ವಧು ಕೆಲವು ಸೆಕೆಂಡುಗಳ ಕಾಲ ಸುತ್ತಲೂ ಗಮನಿಸುತ್ತಿದ್ದು ಇದ್ದಕ್ಕಿದ್ದಂತೆ ವೇದಿಕೆಯಿಂದ ಜಿಗಿದು ಓಡಿಹೋಗುವುದನ್ನು ತೋರಿಸುತ್ತದೆ. ಆಕೆ ನೇರವಾಗಿ ಮದುವೆ ಸ್ಥಳದಲ್ಲಿದ್ದ ತನ್ನ ಪ್ರೇಮಿಯ ಬಳಿಗೆ ಹೋಗಿ, ಅವನನ್ನು ತಬ್ಬಿ ಕೊಂಡು ಹಾರವನ್ನು ಹಾಕಿದ್ದಾಳೆ. ಈ ಘಟನೆಯಿಂದ ಕೋಪ ಗೊಂಡ ವಧುವಿನ ಕಡೆಯವರು ಆಕೆಯ ಪ್ರಿಯಕರನನ್ನು ಹಿಡಿದು ಸರಿಯಾಗಿ ಹೊಡೆದಿದ್ದಾರೆ ಎನ್ನಲಾಗಿದೆ.
Viral Video: ಶಾಲಾ ಬಸ್ಸಿನಲ್ಲಿ ನೇತಾಡುತ್ತಾ ಹೋಗುತ್ತಿರುವ ವಿದ್ಯಾರ್ಥಿಗಳು; ಡೇಂಜರಸ್ ವಿಡಿಯೋ ವೈರಲ್
ಇದು ಎರಡೂ ಕಡೆಯ ನಡುವೆ ಜಗಳಕ್ಕೆ ಕಾರಣವಾಯಿತು. ಘಟನೆಯ ನಂತರ, ವರನು ಮದುವೆಯನ್ನು ಮುಂದುವರಿಸಲು ನಿರಾಕರಿಸಿದ್ದು ಮದುವೆಯನ್ನು ನಿಲ್ಲಿಸಿ ತನ್ನ ಕುಟುಂಬ ದೊಂದಿಗೆ ವಾಪಸ್ ತೆರಳಿದ್ದಾನೆ. ವಧು ಮತ್ತು ಅವಳ ಪ್ರೇಮಿ ಸುಮಾರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು ಆಕೆಯ ಕುಟುಂಬಕ್ಕೆ ಈಗಾಗಲೇ ತಿಳಿದಿತ್ತು. ಆದಾಗ್ಯೂ, ಕುಟುಂಬದ ಒತ್ತಡದಿಂದಾಗಿ ಮದುವೆಗೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ.
ರದ್ದಾದ ಮದುವೆಗೆ ಸಂಬಂಧಿಸಿದಂತೆ ಆರ್ಥಿಕ ನಷ್ಟ ಬಗ್ಗೆ ವರನ ಕುಟುಂಬವು ಪೊಲೀಸರಿಗೆ ವರದಿ ಮಾಡಿದೆ. ಸದ್ಯ ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ಇದು ವಧುವಿನ ಮನೆಕಡೆಯವರದ್ದೇ ತಪ್ಪು..ಬಲವಂತದ ಮದುವೆಯ ನಿರ್ಧಾರ ಸರಿಯಲ್ಲ ಎಂದಿದ್ದಾರೆ. ಕೆಲವರು ವರನ ಖರ್ಚುವೆಚ್ಚದ ಬಗ್ಗೆಯೂ ಆತಂಕ ವ್ಯಕ್ತಪಡಿಸಿದರು.