ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಬ್ರಿಟನ್‌ನಲ್ಲಿ ಎಕ್ಸ್-ರೇ ವರದಿ ಪಡೆಯಲು ಒಂದು ತಿಂಗಳು ಕಾಯಬೇಕು, ಭಾರತದಲ್ಲಾದರೆ ಗಂಟೆಯೊಳಗೆ ಕೈಸೇರುತ್ತೆʼʼ: ನಮ್ಮಲ್ಲಿನ ವೈದ್ಯಕೀಯ ಸೌಲಭ್ಯಕ್ಕೆ ವಿದೇಶಿಗರು ಫಿದಾ

Viral News: ಭಾರತದಲ್ಲಿ ವೈದ್ಯಕೀಯ ಸೇವೆಗಳು ಸುಲಭವಾಗಿ ಸಿಗುತ್ತವೆ ಎಂದು ಇಲ್ಲಿಗೆ ಆಗಮಿಸುವವರು ಅನೇಕರಿದ್ದಾರೆ. ಬ್ರಿಟನ್‌ನ ಪ್ರಜೆ ಡೇವ್ ಫ್ಲೂ ಪತ್ನಿಯೊಂದಿಗೆ ಐವಿಎಫ್ ಚಿಕಿತ್ಸೆಗಾಗಿ ಉತ್ತರ ಪ್ರದೇಶದ ಲಖನೌಗೆ ಭೇಟಿ ನೀಡಿ ಇಲ್ಲಿನ ಗುಣಮಟ್ಟದ ಸೌಲಭ್ಯ ಕಂಡು ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ವೈದ್ಯಕೀಯ ಪರೀಕ್ಷೆಗಳ ವೇಗ ಮತ್ತು ಆಸ್ಪತ್ರೆಯ ಸಿಬ್ಬಂದಿಯ ಸಹಾಯಕ ಮನೋಭಾವವು ತಮ್ಮನ್ನು ಸೆಳೆದಿದೆ ಎಂದಿದ್ದಾರೆ.

ಸಾಂದರ್ಭಿಕ ಚಿತ್ರ

ಲಖನೌ, ಅ.19: ಭಾರತದ ಐತಿಹಾಸಿಕ ಸ್ಥಳಗಳು, ಇಲ್ಲಿನ ಸೌಕರ್ಯಗಳ ಬಗ್ಗೆ ವಿದೇಶಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅದರಲ್ಲೂ ಭಾರತದಲ್ಲಿ ವೈದ್ಯಕೀಯ ಸೇವೆಗಳು ಸುಲಭವಾಗಿ ಸಿಗುತ್ತವೆ ಎಂದು ಇಲ್ಲಿಗೆ ಬಂದು ಚಿಕಿತ್ಸೆ ಪಡೆದುಕೊಳ್ಳುವ ಅನೇಕ ವಿದೇಶಿಗರಿದ್ದಾರೆ. ಇದೀಗ  ಬ್ರಿಟನ್‌ ಪ್ರಜೆ ಡೇವ್ ಫ್ಲೂ ಪತ್ನಿಯೊಂದಿಗೆ ಐವಿಎಫ್ ಚಿಕಿತ್ಸೆಗಾಗಿ ಉತ್ತರ ಪ್ರದೇಶದ ಲಖನೌಗೆ ಭೇಟಿ ನೀಡಿ ಇಲ್ಲಿನ ಗುಣಮಟ್ಟದ ಸೌಲಭ್ಯ ಕಂಡು ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Viral News) ತಮ್ಮ ಅನುಭವ ಹಂಚಿಕೊಂಡ ಅವರು, ವೈದ್ಯಕೀಯ ಪರೀಕ್ಷೆಗಳ ವೇಗ ಮತ್ತು ಆಸ್ಪತ್ರೆಯ ಸಿಬ್ಬಂದಿಯ ಸಹಾಯಕ ಮನೋಭಾವವು ತಮ್ಮನ್ನು ಅಚ್ಚರಿಗೆ ದೂಡಿದೆ ಎಂದಿದ್ದಾರೆ.

ಇಲ್ಲಿನ ವೈದ್ಯಕೀಯ ಸೇವೆಗಾಗಿ ಹೆಚ್ಚು ಸಮಯ ಕಾಯಬೇಕಿಲ್ಲ. ವೈದ್ಯಕೀಯ ಪರೀಕ್ಷೆಗಳು ಒಂದು ಗಂಟೆಯೊಳಗೆ ಲಭ್ಯವಿರುವುದನ್ನು ಅವರು ಶ್ಲಾಘಿಸಿದ್ದಾರೆ. ಬ್ರಿಟನ್‌ನಲ್ಲಿ ಕೇವಲ ಎಕ್ಸ್-ರೇ ವರದಿಯನ್ನು ಪಡೆಯಲು ಒಂದು ತಿಂಗಳು ಕಾಯಬೇಕಾಗುತ್ತದೆ. ಆದರೆ ಭಾರತದ ವ್ಯವಸ್ಥೆಯು ಹೆಚ್ಚು ವೇಗವಾಗಿದೆ ಎಂದು ತಿಳಿಸಿದರು.

ವಿಡಿಯೊ ನೋಡಿ:



ʼʼಅಪಾಯಿಂಟ್‌ಮೆಂಟ್ ಸಮಯಕ್ಕೆ ಸರಿಯಾಗಿ ಸಿಗುವುದು ಮತ್ತು ಒಂದೇ ಕಟ್ಟಡದಲ್ಲಿ ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಸೌಲಭ್ಯವಿರುವುದು ಅದ್ಭುತವಾಗಿದೆ. ಅದರಲ್ಲೂ ಭಾರತದಲ್ಲಿ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಗಳು ಅತ್ಯಂತ ಕಡಿಮೆ ಹಣಕ್ಕೆ ಸಿಗುವುದು ಉತ್ತಮ ವ್ಯವಸ್ಥೆʼʼ ಎಂದ ಅವರು ಲಖನೌ ಮ್ಯಾಕ್ಸ್ ಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ಅಂತಾರಾಷ್ಟ್ರೀಯ ಲೌಂಜ್ ತಂಡದವರ ಸಹಾಯವನ್ನು ಕೊಂಡಾಡಿದ್ದಾರೆ.

ಅಮೆರಿಕದಲ್ಲಿ ರಕ್ತ ಪರೀಕ್ಷೆಗೆ 1.9 ಲಕ್ಷ ರುಪಾಯಿ, ಭಾರತದಲ್ಲಿ 2,800 ರುಪಾಯಿ

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಒಬ್ಬರು ಹೀಗೆ ಬರೆದಿದ್ದಾರೆ. ʼʼಭಾರತೀಯರಿಗೆ ಅರಿವಿಲ್ಲದ ವಿಷಯವೇನೆಂದರೆ, ನಮ್ಮಲ್ಲಿ ಅತ್ಯುತ್ತಮ ಆರೋಗ್ಯ ವ್ಯವಸ್ಥೆಯಿದೆ. ಇದು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತಲೂ ಉತ್ತಮವಾಗಿದೆ. ಆದರೆ ಈ ಮೌಲ್ಯ ನಮಗೆ ತಿಳಿಯುತ್ತಿಲ್ಲʼʼ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.