ಶಿಮ್ಲಾ, ಸೆ. 26: ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಸಮಯ ಕಳೆಯಲು ವಿದೇಶಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಇಲ್ಲಿನ ಸಂಸ್ಕೃತಿ, ಆಚರಣೆ ವಿದೇಶಿಗರನ್ನು ಸೆಳೆ ಯುತ್ತಲೇ ಇರುತ್ತದೆ. ಇದೀಗ ಹಿಮಾಚಲ ಪ್ರದೇಶದಂತ ಕಷ್ಟದ ಕಣಿವೆಯಲ್ಲೂ ಬ್ರಿಟಿಷ್ ಪ್ರವಾಸಿಗರು ಆಟೋ-ರಿಕ್ಷಾದಲ್ಲಿ ಸಾಹಸ ಮೆರೆದಿದ್ದಾರೆ. ಈ ಕ್ಲಿಷ್ಟ ರಸ್ತೆಯಲ್ಲೂ ಆಟೋದಲ್ಲಿ ಪ್ರಯಾಣ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ (Viral News) ಪಾತ್ರರಾಗಿದ್ದಾರೆ
ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯಲ್ಲಿ ಪ್ರಯಾಣಿಸುವುದು ಬಹಳಷ್ಟು ಕಷ್ಟ. ಕಲ್ಲಿನಿಂದ ಕೂಡಿದ ಪರ್ವತ ರಸ್ತೆಗಳು, ಎತ್ತರದ ಪ್ರದೇಶ ಮತ್ತು ದೂರದ ಪ್ರಯಾಣದಿಂದಾಗಿ ಬೈಕ್ ಅಥವಾ ಕಾರ್‌ಗಳನ್ನೆ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಆದರೆ ಈ ಬ್ರಿಟಿಷ್ ಜೋಡಿ ಆಟೋ- ರಿಕ್ಷಾವನ್ನು ಆರಿಸಿಕೊಂಡಿದೆ. ಇದು ಅವರ ಪ್ರಯಾಣವನ್ನು ಇನ್ನಷ್ಟು ಅವಿಸ್ಮರಣೀಯ ಕ್ಷಣವನ್ನಾಗಿ ಮಾಡಿದೆ.
ವಿಡಿಯೊ ನೋಡಿ:
ತಬೋದಿಂದ ಕಾಜಾಗೆ ಪ್ರಯಾಣ ಮಾಡುತ್ತಿದ್ದ ಭಾರತದ ಕಂಟೆಂಟ್ ಕ್ರಿಯೇಟರ್ ವಿಶಾಲ್ ಈ ಪ್ರಯಾಣಿಕರನ್ನು ಭೇಟಿಯಾಗಿದ್ದಾರೆ. ಇವರ ಸುಂದರ ಕ್ಷಣದ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ತ್ರಿಚಕ್ರ ವಾಹನದಲ್ಲಿ ಪ್ರವಾಸಿಗರು ಪ್ರಯಾಣಿಸಿದ್ದು ಉತ್ಸಾಹಭರಿತರಾಗಿ ಕಾಣಿಸಿಕೊಂಡರು. ಅವರ ಈ ವಿಶೇಷ ಸಾರಿಗೆ ಆಯ್ಕೆ ಅಚ್ಚರಿ ಉಂಟು ಮಾಡಿದೆ.
ಮನುಷ್ಯರಂತೆ ವಾನರ ಪಡೆಗೂ ಓಣಂ ವಿಶೇಷ ಭೋಜನ
ಅತ್ಯಂತ ಎತ್ತರದ ಪ್ರದೇಶ ಹಾಗೂ ಕಷ್ಟದ ವಾತಾವರಣದಲ್ಲಿಯೂ ಆಟೋದಲ್ಲಿ ಸಾಹಸ ಮಾಡುತ್ತಿರುವ ವಿದೇಶಿಗರ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಬಳಕೆದಾರರರೊಬ್ಬರು ನಿಜಕ್ಕೂ ಇವರು ಪ್ರಯಾಣವನ್ನು ಸ್ಮರಣೀಯವಾಗಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.