ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಪೂರ್ವ ಸಹೋದರ: ಸೈಕಲ್ ಬ್ಯಾಲನ್ಸ್ ತಪ್ಪಿ ಸೈಕಲ್‌ನಿಂದ ಬಿದ್ದ ಬಾಲಕ; ತಮ್ಮನ ರಕ್ಷಣೆಗೆಂದು ಪ್ರಾಣದ ಹಂಗು ತೊರೆದು ಗುಂಡಿಗೆ ಹಾರಿದ ಅಣ್ಣ

ಸೈಕಲ್ ತುಳಿಯುತ್ತಿದ್ದ ಬಾಲಕನೊಬ್ಬ ಬ್ಯಾಲನ್ಸ್ ತಪ್ಪಿ ಮನೆ ಅಂಗಳದ ಅಂಚಿನ ಹೊಂಡಕ್ಕೆ ಬಿದ್ದಿದ್ದಾನೆ. ತಮ್ಮ ಬೀಳುವುದನ್ನು ಕಂಡ ಆತನ ಅಣ್ಣ ಹಿಂದೆ ಮುಂದೆ ಕೂಡ ಯೋಚಿಸದೆ ರಕ್ಷಣೆಗಾಗಿ ಧಾವಿಸಿ ಅದೇ ಗುಂಡಿಗೆ ಹಾರಿದ್ದಾನೆ. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಪ್ರಾಣದ ಭಯ ತೊರೆದು ತಮ್ಮನ ಜೀವ ರಕ್ಷಿಸಲು ಮುಂದಾದ ಅಣ್ಣನ ಪರಾಕ್ರಮ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಸೈಕಲ್ ಬ್ಯಾಲೆನ್ಸ್ ತಪ್ಪಿ ಗುಂಡಿಗೆ ಬಿದ್ದ ಬಾಲಕ

ನವದೆಹಲಿ, ಡಿ. 17: ಮಕ್ಕಳು ಚಿಕ್ಕವರಿರುವಾಗ ಆಟ, ಪಾಠ ಎಲ್ಲದಕ್ಕೂ ತಮ್ಮ ಸಹೋದರ- ಸಹೋದರಿಯರ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ದಿನ ಪೂರ್ತಿ ಕಿತ್ತಾಡಿದರೂ ಬಳಿಕ ಒಂದೇ ದಿನಕ್ಕೆ ರಾಜಿಯಾಗಿ ಖುಷಿ ಪಡುವ ಮಕ್ಕಳ ಗುಣ ಸ್ಫೂರ್ತಿದಾಯಕ. ಅದರಲ್ಲಿಯೂ ಅಣ್ಣ - ತಮ್ಮಂದಿರ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಈ ಬಾಂಧವ್ಯವು ಬಹಳ ಆಳವಾಗಿದ್ದು, ಎಲ್ಲ ಸಂದರ್ಭದಲ್ಲಿಯೂ ಒಬ್ಬರಿಗೊಬ್ಬರು ನೆರವಾಗುತ್ತಾರೆ. ಅದರಲ್ಲಂತೂ ಬಾಲ್ಯದಲ್ಲಿ ಒಟ್ಟಿಗೆ ಆಡುತ್ತಿರುತ್ತಾರೆ. ಈ ಮಧುರ‌ ಬಾಂಧವ್ಯದ ಮಹತ್ವ ಸಾರುವ ಘಟನೆಯೊಂದು ನಡೆದಿದೆ. ಸೈಕಲ್ ಆಡುತ್ತಿದ್ದ ಇಬರಬು ಸಹೋದರರ ಪೈಕಿ ಒಬ್ಬ ಬ್ಯಾಲನ್ಸ್ ತಪ್ಪಿ ಮನೆ ಅಂಗಳದ ಅಂಚಿನ ಗುಂಡಿಗೆ ಬಿದ್ದಿದ್ದಾನೆ. ತಮ್ಮ ಬಿದ್ದಿರುವುದನ್ನು ಗಮನಿಸಿದ ಅಣ್ಣ ಒಂದ ಕ್ಷಣ ಕೂಡ ಹಿಂದ ಎಮುಂದೆ ನೋಡದೆ ಆತನ ರಕ್ಷಣೆಗಾಗಿ ಗುಂಡಿಗೆ ಹಾರಿದ್ದಾನೆ. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. ಪ್ರಾಣದ ಹಂಗು ತೊರೆದು ತಮ್ಮನ ಜೀವ ರಕ್ಷಿಸಲು ಬಂದ ಅಣ್ಣನ ಧೈರ್ಯ ಪರಾಕ್ರಮ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಡಿಸೆಂಬರ್ 11ರಂದು ಈ ಘಟನೆ ನಡೆದಿದೆ. ಗುಡ್ಡಗಾಡು ಪ್ರದೇಶದಲ್ಲಿರುವ ತಮ್ಮ ಮನೆಯ ಅಂಗಳದಲ್ಲಿ ಇಬ್ಬರು ಬಾಲಕರು ಸೈಕಲ್ ತುಳಿಯುತ್ತಿದ್ದರು. ಈ ಮಧ್ಯೆ ಕಿರಿಯ ಸಹೋದರನು ತನ್ನ ನಿಯಂತ್ರಣ ಕಳೆದುಕೊಂಡು ಸೈಕಲ್‌ನಿಂದ ಅಂಗಳದ ಅಂಚಿನಲ್ಲಿರುವ ಹೊಂಡಕ್ಕೆ ಬಿದ್ದುಬಿಟ್ಟ. ಇಂತಹ ಘಟನೆ ನಡೆದಾಗ ಪಕ್ಕದಲ್ಲಿರುವವರಿಗೆ ಕೆಲ ಹೊತ್ತು ದಿಕ್ಕೇ ತೋಚದಂತಾಗುತ್ತದೆ. ಆದರೆ ಈ ಬಾಲಕ ಹಾಗಲ್ಲ. ಸ್ವಲ್ಪವೂ ತಡ ಮಾಡದೆ ತಮ್ಮನನ್ನು ರಕ್ಷಿಸಲು ಗುಂಡಿಗೆ ಹಾರಿದ್ದಾನೆ.

ವಿಡಿಯೊ ನೋಡಿ:



Sirisathya ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಅಣ್ಣನ ವಯಸ್ಸು 10-11, ತಮ್ಮನ ವಯಸ್ಸು 5-6 ಇರಬಹುದು. ಸ್ವಪಲ್‌ ಹೊತ್ತಿನಲ್ಲೇ ಅಕ್ಕಪಕ್ಕದವರು ನೆರವಿಗೆ ಧಾವಿಸಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಮಕ್ಕಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ‌.

ಫ್ಲೈಓವರ್‌ನಲ್ಲಿ ಹುಟ್ಟುಹಬ್ಬ ಆಚರಣೆ; FIR ಆಗುತ್ತಲೇ ಕ್ಷಮಿಸಿ ಎಂದು ಬೇಡಿಕೊಂಡ ಯುವಕ

ಇದು ಎಲ್ಲಿ ನಡೆದಿರುವ ಘಟನೆ ಎನ್ನುವುದು ತಿಳಿದು ಬಂದಿಲ್ಲ. ಅಣ್ಣನ ಸಮಯಪ್ರಜ್ಞೆಯಿಂದ ತಮ್ಮನ ಪ್ರಾಣ ಉಳಿದಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಣ್ಣನ ಧೈರ್ಯ, ನಿಸ್ವಾರ್ಥ ಗುಣಗಳು ಹಲವರ ಗಮನ ಸೆಳೆದಿದ್ದು, ಈ ಘಟನೆಯನ್ನು ಒಡಹುಟ್ಟಿದವರ ನಡುವಿನ ಬಾಂಧವ್ಯಕ್ಕೆ ಪ್ರಬಲ ಸಾಕ್ಷಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಹುಟ್ಟುತ್ತ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎಂಬ ಮಾತನ್ನು ಈ ಸಹೋದರರು ಸುಳ್ಳು ಮಾಡಿದ್ದಾರೆ. ನಾವು ಚಿಕ್ಕ ವಯಸ್ಸಿನಲ್ಲಿ ತೋರಿಸಿದ ಪ್ರೀತಿ, ವಾತ್ಸಲ್ಯ ಕನಿಕರ, ಪರಸ್ಪರ ನಂಬಿಕೆ, ವಿಶ್ವಾಸ ಇತ್ಯಾದಿ ಮಾನವೀಯ ಮೌಲ್ಯಗಳು ಕೊನೆ ತನಕ ಇರಲಿದೆ. ಸಹೋದರರೆಂದರೆ ಕಷ್ಟ ಸುಖಗಳಿಗೆ ಹೆಗಲಾಗಿ ಇರಬೇಕು. ಸಹೋದರತ್ವದ ಬಾಂಧವ್ಯಕ್ಕೆ ಈ ವಿಡಿಯೊ ಸಾಕ್ಷಿ ಎಂದು ಒಬ್ಬರು ಭಾವುಕರಾಗಿ ಬರೆದುಕೊಂಡಿದ್ದಾರೆ.