ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪಾಕ್ ಪ್ರಧಾನಿಯನ್ನು 40 ನಿಮಿಷ ಕಾಯಿಸಿದ ಪುಟಿನ್; ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೆಹಬಾಜ್ ಷರೀಫ್‌ಗೆ ಮತ್ತೊಮ್ಮೆ ಮುಖಭಂಗ

ತುರ್ಕ್ಮೆನಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪುಟಿನ್ ಅವರನ್ನು ಭೇಟಿಯಾಗುವ ಉದ್ದೇಶದಿಂದ ವಿದೇಶಾಂಗ ಸಚಿವ ಇಶಾಕ್ ದರ್ ಜತೆಗೆ ಕಾರ್ಯಕ್ರಮಕ್ಕೆ ಪಾಕ್‌ ಪ್ರಧಾನಿ ಷರೀಫ್ ಆಗಮಿಸಿದ್ದರು. ಆದರೆ ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟರ್ಕಿ ಅಧ್ಯಕ್ಷರೊಂದಿಗೆ ಮೀಟಿಂಗ್‌ನಲ್ಲಿ ನಿರತರಾಗಿದ್ದರು ಎನ್ನಲಾಗಿದ್ದು, ಸಭೆ ಮುಗಿಯುವವರೆಗೆ ಸುಮಾರು 40 ನಿಮಿಷಗಳ ಕಾಲ ಪಾಕ್ ಪ್ರಧಾನಿ ಷರೀಫ್ ಅವರನ್ನು ಹೊರಗಡೆ ಕಾಯಿಸಲಾಗಿದೆ.

ಪುಟಿನ್‌ಗಾಗಿ 40 ನಿಮಿಷ ಕಾದ ಪಾಕ್ ಪ್ರಧಾನಿ ಷರೀಫ್‌

-

Profile
Sushmitha Jain Dec 12, 2025 11:34 PM

ಇಸ್ಲಾಮಾಬಾದ್‌: ಈ ಹಿಂದೆ ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆಯ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin), ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ (Xi Jinping) ಅವರ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ (Shehbaz Sharif) ವ್ಯಾಪಕ ಟ್ರೋಲ್‌ಗೆ ಗುರಿಯಾಗಿದ್ದರು. ಎಸ್‌ಸಿಒ ನಾಯಕರ ಗ್ರೂಪ್ ಫೋಟೊ ಚಿತ್ರೀಕರಣದ ಸಂದರ್ಭದಲ್ಲಿ ಎಲ್ಲ ನಾಯಕರೂ ಪೋಸ್ ನೀಡಿದ್ದರು. ಆ ಸಂದರ್ಭದಲ್ಲಿ ಫೋಟೊ ಶೂಟ್ ಮುಕ್ತಾಯದ ಬಳಿಕ ಪುಟಿನ್ ಮತ್ತು ಕ್ಸಿ ಜಿನ್ ಪಿಂಗ್ ಅಲ್ಲಿಂದ ತೆರಳುವಾಗ ಅಲ್ಲಿಯೇ ಇದ್ದ ಪಾಕ್ ಪ್ರಧಾನಿ ಶಹಬಾಶ್ ಷರೀಫ್ ಪುಟಿನ್ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದರು. ಈ ವೇಳೆ ಪುಟಿನ್ ಅವರನ್ನು ನೋಡಿ ಷರೀಫ್ ನಮಸ್ಕರಿಸಿದರಾದರೂ ಅವರತ್ತ ತಿರುಗಿಯೂ ನೋಡದ ಪುಟಿನ್ ಮುಂದೆ ಸಾಗಿ ಜಪಾನ್ ಪ್ರಧಾನಿಯನ್ನು ಮಾತನಾಡಿಸುವ ಮೂಲಕ ಪಾಕ್ ಪ್ರಧಾನಿಯನ್ನು ಕಡೆಗಣಿಸಿದ್ದರು. ಇದೀಗ ಮತ್ತೊಂದು ಇಂತದೇ ಘಟನೆ ನಡೆದಿದ್ದು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್ ಅವರಿಗೆ ಪುನಃ ಮುಜುಗರ ಉಂಟಾಗಿದೆ.

ಹೌದು, ತುರ್ಕ್ಮೆನಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದ್ದು, ಪುಟಿನ್ ಅವರನ್ನು ಭೇಟಿಯಾಗುವ ಉದ್ದೇಶದಿಂದ ವಿದೇಶಾಂಗ ಸಚಿವ ಇಶಾಕ್ ದರ್ ಜತೆಗೆ ಕಾರ್ಯಕ್ರಮಕ್ಕೆ ಷರೀಫ್ ಆಗಮಿಸಿದ್ದರು. ಆದರೆ ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟರ್ಕಿ ಅಧ್ಯಕ್ಷರೊಂದಿಗೆ ಮೀಟಿಂಗ್ನಲ್ಲಿ ನಿರತರಾಗಿದ್ದರು ಎನ್ನಲಾಗಿದೆ. ಸಭೆ ಮುಗಿಯುವವರೆಗೆ ಸುಮಾರು 40 ನಿಮಿಷಗಳ ಕಾಲ ಪಾಕ್ ಪ್ರಧಾನಿ ಷರೀಫ್ ಹೊರಗಡೆ ಕಾದಿದ್ದಾರೆ.

ವೈರಲ್‌ ವಿಡಿಯೊ ಇಲ್ಲಿದೆ:



ಮಾತುಕತೆ ಮುಗಿದ ಬಳಿಕ ಪುಟಿನ್ ಅವರು ಷರೀಫ್ ಕಡೆ ಗಮನ ಹರಿಸದೇ ನೇರವಾಗಿ ಸ್ಥಳದಿಂದ ನಿರ್ಗಮಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪಾಕಿಸ್ತಾನದ ಬಗ್ಗೆ ರಷ್ಯಾಕ್ಕೆ ಇರುವ ಅಸಡ್ಡೆ ಮನೋಭಾವ ಮತ್ತೊಮ್ಮೆ ಸಾಬೀತಾಗಿದೆ.

‘ರಸಂ’ನಿಂದ ಹಿಡಿದು ಬಾದಾಮ್ ಹಲ್ವಾದವರೆಗೆ; ಪುಟಿನ್‌ಗಾಗಿ ತಯಾರಿಸಿದ ಮೆನು ಏನು ಗೊತ್ತಾ?

ತುರ್ಕ್ಮೆನಿಸ್ತಾನದ ಖಾಯಂ ತಟಸ್ಥ ನೀತಿಯ 30ನೇ ವಾರ್ಷಿಕೋತ್ಸವದ ಅಂಗವಾಗಿ ಈ ಅಂತಾರಾಷ್ಟ್ರೀಯ ಸಭೆ ಆಯೋಜಿಸಲಾಗಿತ್ತು. ದೇಶವು ಸೈನಿಕ ಮೈತ್ರಿಕೂಟಗಳಿಂದ ದೂರವಿದ್ದು, ಸ್ವರಕ್ಷಣೆ ಹೊರತುಪಡಿಸಿ ಬೇರೆ ಸಂಘರ್ಷಗಳಲ್ಲಿ ಭಾಗಿಯಾಗಬಾರದೆಂಬ ಉದ್ದೇಶವನ್ನು ಈ ನೀತಿ ಒತ್ತಿ ಹೇಳುತ್ತದೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಹಾಸ್ಯಾಸ್ಪದವಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದು, ಪಾಕಿಸ್ತಾನದ ಸ್ಥಿತಿಯನ್ನು ಕಂಡು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವು ನೆಟ್ಟಿಗರು “ಭೌಗೋಳಿಕ ರಾಜಕೀಯ ಕೆಫೆಟೇರಿಯಾದಲ್ಲಿ ತಪ್ಪು ಟೇಬಲ್ ಆರಿಸಿದ್ದೀರಿ” ಎಂದು ವ್ಯಂಗ್ಯವಾಡಿದರೆ, ಮತ್ತಿಬ್ಬರು ಷರೀಫ್ ಅವರ ವಿದೇಶಾಂಗ ಧೋರಣಿಯನ್ನು ಟೀಕಿಸಿದ್ದಾರೆ.