ಕೋಲ್ಕತ್ತಾ: ವಿಧಾನ ಸಭಾ ಚುನಾವಣೆ (Assembly elections) ಫಲಿತಾಂಶ (election result 2026) ಹೊರಬಿದ್ದ ಮೇಲೆ ಪಶ್ಚಿಮ ಬಂಗಾಳದಲ್ಲಿ (west bengal) ತೃಣಮೂಲ ಕಾಂಗ್ರೆಸ್ (Trinamool Congress) ನಾಯಕರು ಬಿಜೆಪಿ (BJP) ವಿರುದ್ಧ ನೇರ ಸಂಘರ್ಷಕ್ಕೆ ಇಳಿದಿದೆ. ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಿದೆ. ಇದೀಗ ಬಿಜೆಪಿ ಬೆಂಬಲಿಗರು ಪಕ್ಷದ ಕಚೇರಿಯ ಮೇಲೆ ಬುಲ್ಡೋಜರ್ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿರುವ ಟಿಎಂಸಿ ನಾಯಕರು ಇಂದು ಕೇಂದ್ರ ಸರ್ಕಾರದಿಂದಲೇ ಬಂದಿರುವ ಆದೇಶವಾಗಿದೆ ಎಂದು ಹೇಳಿ ವಿಡಿಯೋ (Viral Video) ಬಿಡುಗಡೆ ಮಾಡಿದ್ದಾರೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.
ಸೋಮವಾರ ವಿಧಾನ ಸಭಾ ಚುನಾವಣಾ ಫಲಿತಾಂಶಗಳ ಘೋಷಣೆಯ ಬಳಿಕ ಪಶ್ಚಿಮ ಬಂಗಾಳದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಒಂದು ಕಡೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತಾವು ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರೆ ಇನ್ನೊಂದೆಡೆ ಬಿಜೆಪಿಯು ಟಿಎಂಸಿ ಕಚೇರಿ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದೆ.
ಮುಖ್ಯಮಂತ್ರಿ ಹುದ್ದೆಗಾಗಿ ಕೇರಳದಲ್ಲಿ ಶುರುವಾಯಿತು ಪೋಸ್ಟರ್ ಯುದ್ಧ
ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮಂಗಳವಾರ ವಿಡಿಯೋ ಹಂಚಿಕೊಂಡಿರುವ ಟಿಎಂಸಿ, ಕೋಲ್ಕತ್ತಾದ ನ್ಯೂ ಮಾರ್ಕೆಟ್ ಪ್ರದೇಶ ಮತ್ತು ಟಿಎಂಸಿ ಪಕ್ಷದ ಕಚೇರಿಯ ಮೇಲೆ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಬುಲ್ಡೋಜರ್ ಮೂಲಕ ದಾಳಿ ನಡೆಸಿ ಧ್ವಂಸ ಮಾಡಿದ್ದಾರೆ ಎಂದು ಹೇಳಿದೆ.
ಈ ವಿಡಿಯೋದಲ್ಲಿ ಜೋರಾಗಿ ಚಪ್ಪಾಳೆ ತಟ್ಟುತ್ತಾ, ಸಂಗೀತ, ಜನಸಮೂಹದ ಮಧ್ಯೆ ಬುಲ್ಡೋಜರ್ ಬರುವುದನ್ನು ತೋರಿಸಲಾಗಿದೆ. ಇದನ್ನು ಟೀಕಿಸಿರುವ ಟಿಎಂಸಿ ಬದಲಾವಣೆ ಬುಲ್ಡೋಜರ್‌ನೊಂದಿಗೆ ಬಂದಿದೆ ಎಂದು ಹೇಳಿದೆ.
ಬಿಜೆಪಿ ಬೆಂಬಲಿಗರ ಗುಂಪು ನ್ಯೂ ಮಾರ್ಕೆಟ್ ಪ್ರದೇಶದ ಬಳಿ ಹಿಂಸಾಚಾರ ನಡೆಸಿ, ಅಂಗಡಿಗಳನ್ನು ನಾಶಪಡಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಕೂಡ ಧ್ವಂಸಗೊಳಿಸಿದ್ದಾರೆ. ಇದು ಭಯೋತ್ಪಾದನೆಯಾಗಿದೆ. ಇದಕ್ಕೆ ಬಿಜೆಪಿಯ ರಾಷ್ಟ್ರೀಯ ನಾಯಕರು ಪರವಾನಗಿ ನೀಡಿದ್ದಾರೆ ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಬೀದಿಗಳಲ್ಲಿ ಬುಲ್ಡೋಜರ್ ದಾಳಿ ನಡೆಸಲು, ಕ್ರೂರವಾಗಿ ವರ್ತಿಸಲು ಮತ್ತು ಕೊಲ್ಲಲು ಪರವಾನಗಿ ನೀಡಿದ್ದಾರೆ. ಇಂದು ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ, ನಾಳೆ ಅದು ಬಿಜೆಪಿಯ ರಾಜಕೀಯ ವಿರೋಧಿಗಳ ಮೇಲೆ ಮತ್ತು ಅನಂತರ ಅದು ಬಂಗಾಳದ ಐಕಾನ್‌ಗಳ ಪ್ರತಿಮೆಗಳ ಮೇಲೆ ಕ್ರಮ ಕೈಗೊಳ್ಳುತ್ತದೆ. ಕೊನೆಗೆ ಅದು ಬಡವರು ಮತ್ತು ದುರ್ಬಲರ ಮನೆಗಳ ಮೇಲೂ ದಾಳಿ ನಡೆಸಲಿದೆ. ಬಂಗಾಳದಲ್ಲಿ ಬಿಜೆಪಿಯ ಬುಲ್ಡೋಜರ್ ಎಲ್ಲೆಲ್ಲಿ ಉರುಳುತ್ತದೋ ಅಲ್ಲೆಲ್ಲಾ ಪ್ರತಿರೋಧದ ಗೋಡೆ ಎದುರಿಸಲಿದೆ. ರಾಜ್ಯ ಭಯೋತ್ಪಾದನೆಯ ಈ ನೀತಿಯ ವಿರುದ್ಧ ಹೋರಾಟ ನಡೆಸುತ್ತದೆ ಎಂದು ತಿಳಿಸಿದೆ.
"ನ್ಯಾಯಕ್ಕಾಗಿ ರಾಜಕೀಯ ಆರಿಸಿಕೊಂಡೆ": ಮೊದಲ ಬಾರಿ ಶಾಸಕಿಯಾದ ಬಗ್ಗೆ ಆರ್‌ಜಿ ಕರ್ ಸಂತ್ರಸ್ತೆಯ ತಾಯಿ ಪ್ರತಿಕ್ರಿಯೆ
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ, ಕೋಲ್ಕತ್ತಾದ ಐತಿಹಾಸಿಕ ಹೊಸ ಮಾರುಕಟ್ಟೆ. ಪರಿವರ್ತನೆ ಆನಂದಿಸುತ್ತಿರುವ ಬಂಗಾಳಿಗಳು ಎಂದು ಬರೆದಿದ್ದು, ಇನ್ನೊಂದು ಪೋಸ್ಟ್ ನಲ್ಲಿ ಬಂಗಾಳದ ಪ್ರತಿಯೊಂದು ಮೂಲೆಯಲ್ಲಿಯೂ ಹಿಂಸೆ ಮತ್ತು ಗೂಂಡಾಗಿರಿ ನಡೆಯುತ್ತಿದೆ ಎಂದು ಹೇಳಿದ್ದಾರೆ.