ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ದಿನನಿತ್ಯ 3.5 ಕೆಜಿ ಚಿನ್ನ ಧರಿಸುವ ಗೋಲ್ಡ್ ಮ್ಯಾನ್ ಕನ್ಹಯ್ಯಾಲಾಲ್ ಖಾತಿಕ್ ಗೆ ಜೀವ ಬೆದರಿಕೆ!

ನಿತ್ಯವು ಬೆಲೆ ಬಾಳುವ ಆಭರಣಗಳನ್ನು ತೊಡುವ ಉದ್ಯಮಿ ಕನ್ಹಯ್ಯಾಲಾಲ್ ಖಾತಿಕ್ ಚಿತ್ತೋರ್‌ಗಢದ ಗೋಲ್ಡ್ ಮ್ಯಾನ್ ಎಂದೆ ಖ್ಯಾತಿ ಪಡೆದಿದ್ದಾರೆ. ಅಂತೆಯೇ ಇತ್ತೀಚೆಗಷ್ಟೇ ಅವರಿಗೆ ದರೋಡೆಕೋರ ರೋಹಿತ್ ಗೋದಾರರ ಸಹಚರರಿಂದ ಹಣಕ್ಕೆ ಆಮಿಷವೊಡ್ಡಿ ಕರೆಗಳು ಬರುತ್ತಿದ್ದವು. ಹೀಗಾಗಿ ಅವರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಉದ್ಯಮಿ ಕನ್ಹಯ್ಯಾಲಾಲ್ ಖಾತಿಕ್ (ಸಂಗ್ರಹ ಚಿತ್ರ)

ನವದೆಹಲಿ: ಅದೃಷ್ಟ ಎನ್ನುವುದು ಯಾರಿಗೆ ಯಾವ ಸಂದರ್ಭದಲ್ಲಿ ಹೇಗೆ ಬೇಕಾದರೂ ಒಲಿಯಬಹುದು. ಕೆಲವೊಂದು ಸಲ ಬದುಕನ್ನೇ ಬದಲಾಯಿಸಬಹುದು. ಒಂದು ಕಾಲದಲ್ಲಿ ಬಡ ಜೀವನ ನಡೆಸುತ್ತಿದ್ದವರು ಬಳಿಕ ಅದೃಷ್ಟರೆಂಬಂತೆ ಶ್ರೀಮಂತರಾದ ಅನೇಕ ಸಂಗತಿಗಳನ್ನು ಕಾಣಬಹುದು. ಅಂತವರಲ್ಲಿ ಉದ್ಯಮಿ ಕನ್ಹಯ್ಯಾಲಾಲ್ ಖಾತಿಕ್ (Kanhaiyalal Khatik) ಕೂಡ ಒಬ್ಬರಾಗಿದ್ದಾರೆ. ಒಂದು ಕಾಲದಲ್ಲಿ ಹಣ್ಣು ತರಕಾರಿ ಮಾರುತ್ತಿದ್ದ ವ್ಯಕ್ತಿ ಈಗ ಕೋಟ್ಯಾಂತರ ಮೌಲ್ಯದ ಚಿನ್ನದ ಅಂಗಡಿಯ ಮಾಲೀಕರಾಗಿದ್ದಾರೆ. ನಿತ್ಯವು ಬೆಲೆ ಬಾಳುವ ಆಭರಣಗಳನ್ನು ತೊಡುವ ಇವರು ಚಿತ್ತೋರ್‌ಗಢದ ಗೋಲ್ಡ್ ಮ್ಯಾನ್ ಎಂದೆ ಖ್ಯಾತಿ ಪಡೆದಿದ್ದಾರೆ. ಅಂತೆಯೇ ಇತ್ತೀಚೆಗಷ್ಟೇ ಉದ್ಯಮಿ ಕನ್ಹಯ್ಯಾಲಾಲ್ ಖಾತಿಕ್ ಅವರಿಗೆ ದರೋಡೆಕೋರ ರೋಹಿತ್ ಗೋದಾರರ ಸಹಚರರಿಂದ ಹಣಕ್ಕೆ ಆಮಿಷವೊಡ್ಡಿ ಕರೆಗಳು ಬರುತ್ತಿದ್ದವು. ಹೀಗಾಗಿ ಅವರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ರಾಜಸ್ಥಾನದ ಚಿತ್ತೋರ್‌ಗಢದ ಉದ್ಯಮಿ ಕನ್ಹಯ್ಯಾಲಾಲ್ ಖಾತಿಕ್ ಅವರಿಗೆ ಎರಡು ದಿನಗಳ ಹಿಂದೆ ಮಿಸ್ಡ್ ಕಾಲ್ ಒಂದು ಬಂದಿತ್ತು. ಬಳಿಕ ಅದೇ ಸಂಖ್ಯೆಯಿಂದ ವಾಟ್ಸ್ ಆ್ಯಪ್ ಕರೆ ಕೂಡ ಬಂದಿದ್ದು ಅದೇ ನಂಬರ್ ನಿಂದ ಆಡಿಯೋ ರೆಕಾರ್ಡಿಂಗ್ ಒಂದು ಕಳಿಸಲಾಗಿದೆ. 5 ಕೋಟಿ ರೂ. ಬೇಡಿಕೆ ಇಟ್ಟು ಕೊಡದಿದ್ದರೆ ಸುಲಿಗೆ ಮಾಡುದಾಗಿ ಆಡಿಯೋ ರೆಕಾರ್ಡಿಂಗ್ ನಲ್ಲಿ ಇತ್ತು. ಹೀಗಾಗಿ ಖಾಟಿಕ್ ಅವರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ

ದರೋಡೆಕೋರ ರೋಹಿತ್ ಗೋದಾರ (Gangster Rohit Godara) ಜೊತೆ ಸಂಪರ್ಕ ಹೊಂದಿರುವುದಾಗಿ ಹೇಳಿಕೊಳ್ಳುವ ಕೆಲವೊಬ್ಬರಿಂದ ತನಗೆ ಸುಲಿಗೆ ಕರೆ ಬಂದಿದೆ ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಆಡಿಯೋ ರೆಕಾರ್ಡ್ ಮಾಡಿದ್ದ ವ್ಯಕ್ತಿ ತಾನು ಹೇಳುವುದನ್ನು ನೀವು ಪಾಲಿಸದಿದ್ದರೆ ಚಿನ್ನ ಧರಿಸುವ ಸ್ಥಿತಿಯಲ್ಲಿ ನೀನೇ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.. ಹೀಗಾಗಿ ಪೊಲೀಸರು ವಿವಿಧ ಆಯಾಮದಲ್ಲಿ ಈ ಬಗ್ಗೆ ತನಿಖೆ ನಡೆಸಿದ್ದಾರೆ.

ರೋಹಿತ್ ಗೋದಾರ ಈ ಹಿಂದೆಯೇ ಅನೇಕ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದನು. ರಾಜಸ್ಥಾನದಲ್ಲಿ ಉದ್ಯಮಿಗಳ ವಿರುದ್ಧ ಸುಲಿಗೆ ದಂಧೆ ನಡೆಸುತ್ತಿದ್ದರಂತೆ. ರ‍್ಯಾಪರ್ ಸಿಧು ಮೂಸ್ ವಾಲಾ (Rapper Sidhu Moose Wala) ಅವರ ಕೊಲೆ ಪ್ರಕರಣದಲ್ಲಿ ಕೂಡ ಇವರು ಪ್ರಮುಖ ಆರೋಪಿ ಗಳಲ್ಲಿ ಒಬ್ಬರಾಗಿದ್ದರು. ಸಿಕಾರ್‌ನಲ್ಲಿ ನಡೆದ ದರೋಡೆಕೋರ ರಾಜು ತೆಹತ್ ಹತ್ಯೆಯಲ್ಲೂ ಈತ ಪ್ರಮುಖ ಆರೋಪಿಯಾಗಿದ್ದಾನೆ. 2022 ರಲ್ಲಿ ಆರೋಪಿ ರೋಹಿತ್ ಗೋದಾರ ಪವನ್ ಕುಮಾರ್ ಎಂಬ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ನವ ದೆಹಲಿಯಿಂದ ದುಬೈಗೆ ತೆರಳಿದ್ದರು ಅವರ ವಿರುದ್ಧ ಇಂಟರ್‌ಪೋಲ್ ರೆಡ್ ನೋಟಿಸ್ ಸುತ್ತೋಲೆ ಹೊರಡಿಸಲಾಗಿದೆ. ಈ ಮೂಲಕ ಭಾರತದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ 32 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ:Viral Video: ಆಟವಾಡುತ್ತಿದ್ದಾಗ ಮೊದಲ ಮಹಡಿಯಿಂದ ಬಿದ್ದ 3 ವರ್ಷದ ಮಗು- ಶಾಕಿಂಗ್‌ ವಿಡಿಯೊ ಇಲ್ಲಿದೆ

50 ವರ್ಷ ಪ್ರಾಯದ ಕನ್ಹಯ್ಯಾಲಾಲ್ ಖಾತಿಕ್ ಅವರು ಆರಂಭದಲ್ಲಿ ಕೈಗಾಡಿಯಲ್ಲಿ ತರಕಾರಿ ಗಳನ್ನು ಮಾರುತ್ತಿದ್ದರು. ವ್ಯಾಪಾರ ಚೆನ್ನಾಗಾ್ ಅನಂತರ ಅವರ ಅದೃಷ್ಟ ಬದಲಾಗಿದೆ. ಕೆಲವೇ ವರ್ಷಗಳಲ್ಲಿ ದೊಡ್ಡ ಉದ್ಯಮಿ ಆದರು. ಅವರಿಗೆ ಚಿನ್ನದ ಆಭರಣಗಳ ಬಗ್ಗೆ ಮೋಹ ಇದ್ದ ಕಾರಣ ಆಭರಣಗಳನ್ನು ಸಂಗ್ರಹಮಾಡಿ ನಿತ್ಯ ಅವರು ಧರಿಸುತ್ತಿದ್ದರು. 15 ವರ್ಷದ ಹಿಂದೆ ಸ್ನೇಹಿತ ರೊಬ್ಬರು 10 ತೊಲ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದು ಅಂದಿನಿಂದ ನಿತ್ಯವು ದೊಡ್ಡ ದೊಡ್ಡ ಆಭರಣ ತೊಟ್ಟುಕೊಂಡು ಸಾರ್ವಜನಿಕವಾಗಿ ಓಡಾಡುವುದನ್ನು ರೂಢಿಸಿಕೊಂಡರು. ಅವರು ಪ್ರಸ್ತುತ ಸುಮಾರು 3.5 ಕೆಜಿ ಚಿನ್ನವನ್ನು ಧರಿಸುತ್ತಿದ್ದು ಚಿತ್ತೋರ್‌ಗಢದಲ್ಲಿ ಅವರಿಗೆ 'ಗೋಲ್ಡ್‌ಮ್ಯಾನ್' ಎಂದೆ ಖ್ಯಾತಿ ಪಡೆದಿದ್ದಾರೆ.